Tiger B. B. Ashok Kumar
Publisher - ಸಪ್ನ ಬುಕ್ ಹೌಸ್
- Free Shipping
- Cash on Delivery (COD) Available
Pages -
Type -
Couldn't load pickup availability
ಸಾಹಸಗಾಥೆಯ ಜತೆಯಲ್ಲಿಯೇ ಚರಿತ್ರೆಯೂ ಬಿಚ್ಚಿಕೊಳ್ಳುವುದು 'ಬುಲೆಟ್ ಸವಾರಿ'ಯ ವಿಶೇಷ. ದಂಡ ಹಾಕಿಸಿಕೊಳ್ಳುವ ಮುಖ್ಯಮಂತ್ರಿಯ ಮಗ, ಗೂಸಾ ತಿನ್ನುವ ಚಿತ್ರನಟ, ಸೇಡು ಸಾಧಿಸದ ಅಶೋಕ್‌ರನ್ನು ಮೆಚ್ಚಿಕೊಳ್ಳುವುದು ಅವರ ವ್ಯಕ್ತಿತ್ವದ ಶಕ್ತಿಯೂ ಹೌದು. ಸಿಟ್ಟೆಂಬುದು ಇಲ್ಲಿ ವೈಯಕ್ತಿಕ ನೆಲೆಯದಲ್ಲ; ಸಾರ್ವತ್ರಿಕ ಹಿತಾಸಕ್ತಿ ಮೂಲದ್ದು. ಶೌರ್ಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಪಡೆದಿರುವ ಅಶೋಕ್ ಅವರಿಗೆ ಜನರ ಈ ಪ್ರೀತಿಯ ಪ್ರಶಸ್ತಿಯೇ ಬಹುಮೌಲಿಕವಾದುದ್ದು. ಅವರು ವರ್ಗವಾದಾಗ ಬಡವರು ಠಾಣೆ ಎದುರು ಗೋಳೋ ಎಂದು ಅತ್ತಿದ್ದನ್ನು, ವರ್ಗವನ್ನು ರದ್ದು ಮಾಡಿ ಎಂದು ಮುಷ್ಕರ ಹೂಡಿದ್ದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಹುಸಿಗಾಂಭೀರ್ಯದ ಪೊಲೀಸ್ ಪರಿವೇಷ ತೊರೆದು ವೈನೋದಿಕ ನಿರೂಪಣೆಯಿಂದ ಇಲ್ಲಿನ ಬರಹಗಳು ಆಪ್ತಗೊಳಿಸುತ್ತವೆ.
ಡೂಪ್ಲಿಕೇಟ್ ಕೊತ್ವಾಲನ ಬಂಧನ, ಹೊಲಸು ನೀರು ಕುಡಿದು ಅಭ್ಯಾಸವಾದ ಜನ ಸ್ವಚ್ಛ ನೀರನ್ನು ನಿರಾಕರಿಸುವುದು, ಎಸ್ ಪಿ ಸೂಟು ಕಳಚುವುದ, ಗುಡ್ ಡೇ ಬಿಸ್ಕತ್ ತಾ ಎಂದರೆ ರಾಶಿ ರಾಶಿ ಬಿಸ್ಕತ್ ತಂದು ಗುಡ್ಡೆ ಹಾಕುವ ಪೇದೆ... ಇಂಥವು ಅನೇಕ ಅಂತೆಯೇ ಅಂತಃಕರಣ ಮೀಟುವ ಸಂಗತಿಗಳೂ ಅಸಂಖ್ಯ
. ಡಾ. ನಾಗತಿಹಳ್ಳಿ ಚಂದ್ರಶೇಖರ, ಸಾಹಿತಿ
