Skip to product information
1 of 2

Vani

ಬಿಡುಗಡೆ

ಬಿಡುಗಡೆ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 160

Type - Paperback

ಶ್ರೀಮತಿ ವಾಣಿಯವರ ನಿಜ ನಾಮಧೇಯ ಬಿ.ಎನ್. ಸುಬ್ಬಮ್ಮ ಸುಸಂಸ್ಕೃತ, ವಿದ್ಯಾವಂತ, ಶ್ರೀಮಂತ ಮನೆತನದಲ್ಲಿ ಮೇ 20ನೇ ತಾರೀಖು 1912ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಏಳನೆಯ ತರಗತಿಯಲ್ಲಿದ್ದಾಗ ವಿವಾಹವಾದರೂ, ಸಾಹಿತ್ಯ ಅಧ್ಯಯನ ಹಾಗೂ ರಚನೆಯಲ್ಲಿ ಅಪಾರ ಆಸಕ್ತಿವಹಿಸಿದರು. ಅವರ 19 ಕಾದಂಬರಿಗಳು, 6 ಕಥಾಸಂಕಲನಗಳು, 6 ನಾಟಕಗಳು ಮತ್ತು 'ನವನೀತ' ಎಂಬ ವಚನ ಸಂಗ್ರಹ ಪ್ರಕಟವಾಗಿವೆ. ಹೊಸಬೆಳಕು, ಶುಭಮಂಗಳ, ಎರಡು ಕನಸು ಕಾದಂಬರಿಗಳು ಚಲನಚಿತ್ರಗಳಾಗಿ ಚಿತ್ರರಸಿಕರ ಮನಸ್ಸನ್ನು ಸೂರೆಗೊಂಡಿವೆ. ಕೆಲವು ಕಥೆಗಳು ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದ ಗೊಂಡಿವೆ.

ಶ್ರೀಮತಿ ವಾಣಿಯವರ 'ಮಿಂಚು' ಎನ್ನುವ ಸಣ್ಣ ಕಥೆ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಭಾಸ್ಕರರಾಯರ ಸ್ಮಾರಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. 'ಮನೆ ಮಗಳು' ಕಾದಂಬರಿ 1962ರಲ್ಲಿ ರಾಜ್ಯ ಸರ್ಕಾರದ ಬಹುಮಾನ, 1977ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು. ಇವರು ರಾಜ್ಯೋತ್ಸವ ಪ್ರಶಸ್ತಿ ಪಡೆದರಲ್ಲದೆ ಹಲವಾರು ಸಂಘ ಸಂಸ್ಥೆಗಳ ಸಮ್ಮೇಳನಗಳಲ್ಲಿ ಭಾಗವಹಿಸಿ ಸನ್ಮಾನ ಹಾಗೂ ಗೌರವಕ್ಕೆ ಪಾತ್ರರಾದ ಮಹತ್ವದ ಲೇಖಕಿ.

-ಆರ್ಯಾಂಬ ಪಟ್ಟಾಭಿ
ಕರ್ನಾಟಕ ಸಾಹಿತ್ಯ ಅಕಾಡೆಮಿ
ಗೌರವ ಪ್ರಶಸ್ತಿ ಪುರಸ್ಕೃತರು 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)