Anu Belle
ಭೂತದ ಕೋಳಿ
ಭೂತದ ಕೋಳಿ
Publisher -
- Free Shipping Above ₹250
- Cash on Delivery (COD) Available
Pages - 120
Type - Paperback
ಅತ್ಯಂತ ಸೂಕ್ಷ್ಮ ಸಂವೇದಿ ಹಾಗೂ ಸರಳ ವ್ಯಕ್ತಿತ್ವದ ರಾಘವೇಂದ್ರ ಬಿ. ರಾವ್ 'ಅನುಬೆಳ್ಳೆ' ಕಾವ್ಯನಾಮದಿಂದ ಜನಪ್ರಿಯರು. ಸುಮಾರು 60ಕ್ಕೂ ಹೆಚ್ಚು ಕೃತಿ, ನೂರಾರು ಸಣ್ಣಕಥೆಗಳು, ಅನೇಕ ಧಾರಾವಾಹಿಗಳನ್ನು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬರೆಯುವ ಮೂಲಕ ಓದುಗರಿಗೆ ರಸದೌತಣ ನೀಡುತ್ತಿದ್ದಾರೆ.
ಅನುಬೆಳ್ಳೆಯವರ ಕಾದಂಬರಿಗಳಲ್ಲಿ ನಮ್ಮ ಬದುಕಿನ ನೈಜ ಚಿತ್ರಣಗಳು, ಆಡುನುಡಿಗಳು, ನಮ್ಮೊಳಗೆ ಸುಳಿಯುವ ಆತ್ಮೀಯ ಭಾವಗಳು ಸುಂದರವಾಗಿ ಮೂಡಿಬರುತ್ತವೆ. ಯಾವ ವಸ್ತುವನ್ನು ಕಥನವಾಗಿ ರೂಪಿಸಿದರೂ ವಾಸ್ತವಿಕ ನೆಲಗಟ್ಟಿನಲ್ಲಿ ಅದರ ಬಗೆಗೆ ದೀರ್ಘ ಅಧ್ಯಯನ ಮಾಡಿ, ನೈಜತೆಯ ದೃಶ್ಯ ಕಾವ್ಯವನ್ನೇ ಸೃಷ್ಟಿಸುವ ಪರಿ ಅನುಬೆಳ್ಳೆಯವರ 'ಬೆಂಚ್ ಮಾರ್ಕ್'.
ವರ್ಧಮಾನ ಉದಯೋನ್ಮುಖ ಪ್ರಶಸ್ತಿ ದೊರೆತ 'ಭೂತದ ಕೋಳಿ' ಕಥಾಸಂಕಲನ ನಮ್ಮ ಅಕ್ಕಪಕ್ಕದಲ್ಲಿ ನಡೆಯುವ, ನಡೆಯಬಹುದಾದ ಬದುಕಿನ ಸಂಘರ್ಷಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದೆ. ಇಲ್ಲಿಯ ಕಥೆಗಳು ಗ್ರಾಮೀಣ ಪರಿಸರದ ಬದುಕಿನ ಚಿತ್ರಣಗಳನ್ನು ಸುಲಭವಾದ ಶಬ್ದಗಳಲ್ಲಿ, ಸರಳವಾದ ನಿರೂಪಣೆಯೊಂದಿಗೆ ಎಲ್ಲಾ ಓದುಗರ ಮನವನ್ನು ಬಹುಬೇಗ ತಲುಪುತ್ತವೆ.
ನಮ್ಮ ಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯ ಸಂಯೋಜಕರಾಗಿ, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಉಪನ್ಯಾಸಕರಾಗಿರುವ ಅನುಬೆಳ್ಳೆಯವರು ಅತ್ಯಂತ ಶಿಸ್ತಿನ ನಡೆನುಡಿಯ ವ್ಯಕ್ತಿತ್ವದವರು. ನಮ್ಮ ಸಂಸ್ಥೆಯ ಪ್ರಾರಂಭದಿಂದಲೂ ನಮ್ಮೆಲ್ಲಾ ಪ್ರಯತ್ನಗಳಲ್ಲಿ ನಮ್ಮ ಜೊತೆ ನಿಂತ ಇವರು 'ಕ್ರಿಯೇಟಿವ್ ಪುಸ್ತಕಮನೆ' ರೂಪುಗೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಇವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದೆನಿಸುತ್ತಾ...
-ಅಶ್ವತ್ ಎಸ್. ಎಲ್
ಸಹ ಸಂಸ್ಥಾಪಕರು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳು, ಕಾರ್ಕಳ
Share
Subscribe to our emails
Subscribe to our mailing list for insider news, product launches, and more.