Skip to product information
1 of 1

Edeyuru Pallavi

ಭುಮ್ತಾಯಿ ಅಜ್ಜಿ ಆದ್ಲಾ

ಭುಮ್ತಾಯಿ ಅಜ್ಜಿ ಆದ್ಲಾ

Publisher - ವಸಂತ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 96

Type - Paperback

ಭುಮ್ತಾಯಿ ಅಜ್ಜಿ ಆದ್ಲಾ...??' ಮಕ್ಕಳ ಕಥಾಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿರುವ ಎಡೆಯೂರು ಪಲ್ಲವಿ ಮುಗ್ಧ ಮನಸ್ಸಿನ ಪರಿಶುದ್ಧ ಪ್ರತಿಭೆ. ಅವರ ಮಗುವಿನಂತಹ ಮನಸ್ಸು ಈ ಮಕ್ಕಳ ಕಥಾಸಂಕಲನದಲ್ಲಿರುವ ಎಲ್ಲ ಕಥೆಗಳಲ್ಲೂ ಪ್ರತಿಬಿಂಬಿಸಿದೆ ಮತ್ತು ಬಹುತೇಕ ಎಲ್ಲ ಕಥೆಗಳ ಶಕ್ತಿಯಾಗಿ ನಿಂತಿದೆ.

ಅದಲ್ಲದೆ 'ಎಂದೂ ಮುಗಿಯದ ಕಥೆ'ಯಿಂದ ಹಿಡಿದು “ಪೃಥ್ವಿಯ ಮಾದರಿ ಸರ್ಕಾರಿ ಪಾಠಶಾಲೆ'ಯ ವರೆಗಿನ ಎಲ್ಲ ಕಥೆಗಳಲ್ಲೂ ಪರಿಸರ ಪ್ರಜ್ಞೆ ಮತ್ತು ಮಾನವ ಪ್ರೀತಿಯ ಹೊನಲು ಜೊತೆ-ಜೊತೆಯಾಗಿ ಹರಿದಿದೆ. ನಡು-ನಡುವೆ ನೀತಿಕಥೆಗಳು ಇದ್ದರೂ ಒಟ್ಟಾರೆ ಹೆಚ್ಚಿನೆಲ್ಲ ಕಥೆಗಳಲ್ಲಿ ಪರಿಸರದ ಬಗ್ಗೆ ಅಪಾರ ಕಾಳಜಿ ವ್ಯಕ್ತವಾಗಿದೆ. ಇಂದಿನ ವಿಷಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡರೆ, ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು ತೀರಾ ಅಗತ್ಯ. ಆ ನಿಟ್ಟಿನಲ್ಲಿ ಎಡೆಯೂರು ಪಲ್ಲವಿ ಅವರ ಮೊದಲ ಮಕ್ಕಳ ಕಥಾಸಂಕಲನ ಬಹಳ ಮುಖ್ಯವಾಗುತ್ತದೆ.

ಸರಳವಾದ ಭಾಷೆ ಮತ್ತು ಮುಗ್ಧ ನಿರೂಪಣೆ ಇಲ್ಲಿನ ಎಲ್ಲ ಕಥೆಗಳ ಜೀವಾಳ. ಕೆಲವು ಕಥೆಗಳಲ್ಲಿ ಆಧುನಿಕ ವಿಷಯಗಳನ್ನು ಕೂಡ ಅಳವಡಿಸಿಕೊಂಡಿರುವುದು, ಒಂದರ್ಥದಲ್ಲಿ ಕಥೆಗಳ ಯಶಸ್ಸಿಗೆ ಕಾರಣ ಎನ್ನಬಹುದು. ಓದುಗರ ಅರಿವಿಗೆ ಬಾರದಂತೆ ನಡು-ನಡುವೆ ತಾವೇ ಸೃಷ್ಟಿಸಿದ ಮಾಯಲೋಕದಲ್ಲಿ ಮತ್ತು ಪಾತ್ರಗಳ ನಡುವೆ ನಮ್ಮನ್ನು ಕರೆದುಕೊಂಡು ಹೋಗಿ ವಿಹರಿಸುವಂತೆ ಮಾಡುವ 'ಮಾಯಾಶಕ್ತಿ' ಕೂಡ ಈ ಕಥೆಗಾರ್ತಿಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಹೊಸ ಪೀಳಿಗೆಯ ಬರಹಗಾರರ ಪೈಕಿ ಮಕ್ಕಳ ಕಥೆ ಪ್ರಕಾರದತ್ತ ಹೊರಳುವವರ ಸಂಖ್ಯೆ ತೀರಾ ಕಡಿಮೆ. ಅಂತಹ ಬರಗಾಲದ ನಡುವೆ ಮಕ್ಕಳ ಕಥಾಲೋಕಕ್ಕೆ ತಮ್ಮ ಕಿರುಕಾಣಿಕೆ ನೀಡಲು ಹೊರಟಿರುವ ಎಡೆಯೂರು ಪಲ್ಲವಿ ಮುಂದಿನ ದಿನಗಳಲ್ಲಿ ಈ ಪ್ರಕಾರದ ಪ್ರಮುಖ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸೋಣ. ಆ ಶಕ್ತಿ ಅವರಿಗಿದೆ ಎನ್ನುವುದನ್ನು ಭುಮ್ತಾಯಿ ಅಜ್ಜಿ ಆದ್ಲಾ...??' ಕೃತಿ ಸಾಬೀತು ಮಾಡಿದೆ.

- ಸತೀಶ್ ಚಪ್ಪರಿಕೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)