Shobha Gunnapoora
Publisher - ನವಕರ್ನಾಟಕ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 105
Type - Paperback
Couldn't load pickup availability
ಮತಿ ಶೋಭಾ ಗುನ್ನಾಪೂರ ಅವರಿಗೆ ತಮ್ಮ ಭೌಗೋಳಿಕ ಭಾಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅರಿವು ಸಾಕಷ್ಟಿದೆ. ಈ ಅರಿವು ಎಲ್ಲ ಕತೆಗಳಲ್ಲೂ ಕಾಣಿಸುತ್ತದೆ. ಕತೆಗಳ ಪಾತ್ರಗಳು ಮತ್ತು ಸನ್ನಿವೇಶಗಳಲ್ಲಿ ಅರಿವು ಮತ್ತು ಅನುಭವಗಳೊಂದಾದ ಅಭಿವ್ಯಕ್ತಿ ಸ್ವರೂಪ ಕಾಣಿಸುತ್ತದೆ. ಭಾಷೆಯ ಬಳಕೆ, ಸನ್ನಿವೇಶಗಳ ಸಾಂದ್ರತೆ, ಸಾಮಾಜಿಕ ವಿವರ-ಎಲ್ಲದರಲ್ಲೂ ಪ್ರಾದೇಶಿಕ ವೈಶಿಷ್ಟ್ಯತೆ ಗಮನ ಸಳೆಯುತ್ತದೆ. ವಿಶೇಷವೆಂದರೆ ಬಹುಪಾಲು ಕತೆಗಳ ಕೇಂದ್ರ ಭೂಮಿಕೆಯಲ್ಲಿ ಮಹಿಳೆಯರಿದ್ದಾರೆ. ಮಹಿಳೆಯರ ದುಡಿಮೆ, ಸಾಂಸಾರಿಕ ಸನ್ನಿವೇಶ, ಕನಸುಗಳೊಂದಿಗೆ ನಂಟು ಬೆಳೆಸಿದ ಸಂಕಟ ಎಲ್ಲವೂ ಹರಳುಕಟ್ಟಿ ನಿರೂಪಿತವಾಗುತ್ತವೆ. ಗಮನಾರ್ಹವಾದ ಮತ್ತೊಂದು ಮುಖ್ಯ ಅಂಶವೆಂದರೆ ಕೆಲವು ಕತೆಗಳಲ್ಲಿ ಅಂತರ್ಗತವಾದ ಶಿಕ್ಷಣದ ಆಕಾಂಕ್ಷೆ, ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸು ಹೊತ್ತ ಪಾತ್ರಗಳನ್ನು ಶೋಭಾ ಗುನ್ನಾಪೂರ ಅವರ ಕೆಲವು ಕತೆಗಳಲ್ಲಿ ಕಾಣಬಹುದು. ಎಲ್ಲ ಕತೆಗಳೂ ಕುಟುಂಬ ಕೇಂದ್ರಿತವಾಗಿದ್ದು, ತನ್ಮೂಲಕ ಗ್ರಾಮೀಣ ಕುಟುಂಬದ ಬಾಳ ಸುಳಿಗಳನ್ನು ಸಂಕೇತಿಸುವುದು ಇನ್ನೊಂದು ವಿಶೇಷ. ಅಸಮಾನತೆಯ ಆವರಣದ ಅನಾವರಣವೂ ಕಲವು ಕತೆಗಳಲ್ಲಿದೆ.
-ಬರಗೂರು ರಾಮಚಂದ್ರಪ್ಪ
-ಬರಗೂರು ರಾಮಚಂದ್ರಪ್ಪ
