Raghavendra Prasad
ಭಿನ್ನರುಚಿ
ಭಿನ್ನರುಚಿ
Publisher -
- Free Shipping Above ₹250
- Cash on Delivery (COD) Available
Pages - 238
Type - Paperback
ಅಡುಗೆ ಅನ್ನುವುದು ಮನುಷ್ಯನ ದಿನನಿತ್ಯದ ಅವಶ್ಯಕತೆಯಾಗಿ ಅಷ್ಟೇ ಅಲ್ಲ, ಮಾನವ ವಿಕಾಸ ಮತ್ತು ನೆನೆಪುಗಳ ವಿಸ್ತರಣೆ ಕೂಡ. ಅದನ್ನ ಅಡುಗೆಯ ಕುರಿತಾದ ಪ್ರಾಚೀನ ಗ್ರಂಥಗಳಿಂದ ಇವತ್ತಿನವರೆಗಿನ ಬರಹಗಳ ಓದಿನಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಇಲ್ಲಿನ ಬರಹಗಳು ಅಡುಗೆಯ ತಾತ್ವಿಕತೆಯಿಂದ ಶುರುವಾಗಿ ಪ್ರಾಚೀನ ಪಾಕಶಾಸ್ತ್ರದ ಕೃತಿಗಳ ಪರಿಚಯ, ಶಿಂಷಾ ನದಿಯ ಸೀಮೆಯಲ್ಲಿ ಪರಿಚಿತವಾಗಿರುವ ಅಡುಗೆಗಳು, ಬಾಲ್ಯಕಾಲದ ಅಡುಗೆಯ ನೆನೆಪುಗಳ ಜೊತೆಗೆ ಜಾಗತಿಕವಾಗಿ ಬೇರೆ ದೇಶಭಾಷೆಗಳ ಪ್ರದೇಶಗಳಲ್ಲಿರುವ ನಮ್ಮದೇ ಮಾದರಿಯ ಅಡುಗೆಗಳ ಪ್ರಸ್ತಾಪಗಳೊಂದಿಗೆ ಸಮೃದ್ಧವಾಗಿವೆ.
'ಭಿನ್ನರುಚಿ'ಯ ಬರಹಗಳಲ್ಲಿ ಅಡುಗೆಯು ಸರ್ವಲಿಂಗೀಯವಾಗಿದೆ, ಅದು ಸಹಜ ಸತ್ಯವೂ ಹೌದು. ಅದಕ್ಕೆ ಗಂಡು ಹೆಣ್ಣೆಂಬ ಭೇದಗಳಿಲ್ಲ. ಪ್ರತಿ ವ್ಯಕ್ತಿಯು ಅಡುಗೆಯನ್ನು ಕಲಿಯಬೇಕಾದ ಅಗತ್ಯ ಅನಿವಾರ್ಯತೆಗಳ ಚರ್ಚೆಯೂ ಇಲ್ಲಿದೆ. ಅಡುಗೆ ಮಾಡುವ ವಿಧಾನ, ಪದಾರ್ಥ, ಪರಿಮಾಣಗಳ ವಿವರಗಳನ್ನ ನೀಡುವ ಪುಸ್ತಕವಾಗದೇ ಬಾಲ್ಯದ ನೆನೆಪುಗಳು ವರ್ತಮಾನದ ತಳಮಳಗಳೊಂದಿಗೆ ಆಹಾರವು ಹೇಗೆ ಒಂದು ಅಗತ್ಯ ರಾಜಕಾರಣವಾಗಿದೆ ಎಂಬುದನ್ನು ಇಲ್ಲಿನ ಪ್ರಬಂಧಗಳು ಸಾಬೀತು ಮಾಡುತ್ತವೆ.
Share
Subscribe to our emails
Subscribe to our mailing list for insider news, product launches, and more.