Skip to product information
1 of 1

Dr. K. L. Gopalkrishnaiah

ಭಾಷೆಯ ಬೆಳಕು

ಭಾಷೆಯ ಬೆಳಕು

Publisher -

Regular price Rs. 70.00
Regular price Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಭಾಷೆಯೆಂದರೇನು, ಅದು ಹುಟ್ಟಿದ್ದು ಹೇಗೆ, ಎಲ್ಲಿ, ಯಾವಾಗ ? - ಪ್ರಪಂಚದ ಎಲ್ಲ ಭಾಷೆಗಳಿಗೂ ಒಂದೇ ಮೂಲವಿರುವುದು ಸಾಧ್ಯವೆ ? - ಎಂಬ ಕುತೂಹಲವನ್ನು ತಣಿಸಲು ಈವರೆಗೆ ನಡೆದ ಪ್ರಯತ್ನಗಳನ್ನು ಪ್ರಸ್ತಾಪಿಸುವುದರೊಂದಿಗೆ ಈ ಕುತೂಹಲ ನಿರಂತರವಾದುದು ಎಂಬ ಸಂಗತಿಯನ್ನು ಇಲ್ಲಿ ಮನಗಾಣಿಸಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಬೋಧಿಸುವ ವ್ಯಾಕರಣ ನಿಯಮಗಳನ್ನು ಭಾಷಾ ವಿಜ್ಞಾನದ ಪರಿಕಲ್ಪನೆಗಳೊಂದಿಗೆ ಹೋಲಿಸಿ ನೋಡುವ, ಸಾಧ್ಯವಿದ್ದೆಡೆಗಳಲ್ಲಿ ಸಮನ್ವಯ ಗೊಳಿಸುವ ಪ್ರಯತ್ನವಿದೆ. ಕನ್ನಡ ರಚನೆಯ ಮೇಲೆ ಸಂಸ್ಕೃತದ ಪ್ರಭಾವವನ್ನು ಇಂಗ್ಲಿಷಿನ ಮೇಲೆ ಲ್ಯಾಟಿನ್ ಭಾಷೆಯ ಪ್ರಭಾವದ ಹಿನ್ನೆಲೆಯಲ್ಲಿ ವಿವೇಚಿಸಲಾಗಿದೆ.

ಭಾಷಾ ವಿಜ್ಞಾನದ ಯಾವೊಂದು ಶಾಖೆಗೂ ಮೀಸಲಾಗದೆ, 'ಸ್ವರೂಪ'ವನ್ನು ಪಡೆದುಕೊಂಡು, ಭಾಷೆಯ ಬಗೆಗೆ ಅಷ್ಟಿಷ್ಟು ತಿಳಿಯಬಯಸುವ ಸಾಮಾನ್ಯ ಓದುಗರಿಂದ ಹಿಡಿದು ಈ ವಿಷಯದಲ್ಲಿ ಹೆಚ್ಚಿನ ವ್ಯಾಸಂಗ ನಿರತರಾದವರಿಗೂ ಒಂದಿಲ್ಲೊಂದು ಬಗೆಯಲ್ಲಿ ಉಪಯುಕ್ತವೆನಿಸಬಹುದಾದ ಪುಸ್ತಕವಿದು.

ಉತ್ತಮ ಸೃಜನಶೀಲ ಲೇಖಕರೂ, ಸಂಶೋಧಕರೂ, ವಿಮರ್ಶಕರೂ, ಅನುವಾದಕರೂ ಆಗಿರುವ ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯನವರು ಈ ಕೃತಿಯನ್ನು ರಚಿಸಿದ್ದಾರೆ. ಇವರ 'ಇತಿಹಾಸದ ರಾಜಕೀಯ', ನವಕರ್ನಾಟಕ ಸಾಹಿತ್ಯ ಸಂಪದ ಮಾಲಿಕೆಗಾಗಿ ರಚಿಸಿದ ' ಯಶವಂತ ಚಿತ್ತಾಲ' ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)