Skip to product information
1 of 1

Niranjana

ಭಾರತರತ್ನ ಡಾ. ಅಬ್ದುಲ್ ಕಲಾಂ - ಜೀವನ ಸಾಧನೆ

ಭಾರತರತ್ನ ಡಾ. ಅಬ್ದುಲ್ ಕಲಾಂ - ಜೀವನ ಸಾಧನೆ

Publisher - ಸ್ನೇಹ ಬುಕ್ ಹೌಸ್

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಸಾಕಷ್ಟು ವಿಚಾರಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ನಮ್ಮ ದೇಶ ವಿಶ್ವದಲ್ಲಿಯೇ ಅತ್ಯಂತ ಹಳೆಯ ನಾಗರಿಕತೆಯ ತಾಣ, ಈ ನೆಲದಲ್ಲಿ ಅದೆಷ್ಟೋ ಮಂದಿ ದಾರ್ಶನಿಕರು, ಸಾಧು-ಸಂತರು, ಕೆಚ್ಚೆದೆಯ ಹೋರಾಟಗಾರರು, ಅತ್ಯುತ್ತಮ ಆಡಳಿತಗಾರರು, ಅಪೂರ್ವ ದೇಶಪ್ರೇಮಿಗಳು, ತಾಂತ್ರಿಕ ಪರಿಣತಿ ಹೊಂದಿದ ಮಹನೀಯರು, ಸರಳತೆ, ನ್ಯಾಯಪರತೆಯನ್ನು ಮೆರೆದವರು ಆಗಿ ಹೋಗಿದ್ದಾರೆ. ಅವರ ಬದುಕಿನ ಆದರ್ಶ ಇಂದಿನ ಪೀಳಿಗೆಗೂ ಸ್ಫೂರ್ತಿದಾಯಕ, ವಿಪರ್ಯಾಸವೆಂದರೆ, ಇಂದಿನ ದಿನಮಾನದ ಯುವ ಸಮಾಜ ಹಲವು ಗೊಂದಲ-ಒತ್ತಡಗಳ ನಡುವೆ ನಲುಗುತ್ತಿದೆ. ವಿದ್ಯಾರ್ಜನೆ ನಿಯಮಿತ ಪಠ್ಯಕ್ಕೆ ಸೀಮಿತವಾಗಿರುವ ಕಾರಣ ಪಠ್ಯಕ್ಕೆ ಹೊರತಾಗಿ ಇರುವ ಅನೇಕ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯೂ ಅವರಲ್ಲಿ ಕಡಿಮೆಯಾಗುತ್ತಿದೆ. ರಟ್ಟೆಗಾತ್ರದ ಪಠ್ಯಪುಸ್ತಕಗಳಲ್ಲೇ ಮುಳುಗಿರುವ ಮಕ್ಕಳು ಮತ್ತು ಯುವಸಮುದಾಯ, ಅದರ ಹೊರತಾಗಿರುವ ಸಾಮಾನ್ಯ ಜ್ಞಾನದ ವಿಸ್ತರಣೆ ಮತ್ತು ಸುತ್ತಲ ಜಗದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳುವ ವಿಸ್ತೃತ ಅಧ್ಯಯನದಿಂದ ವಂಚಿತರಾಗುತ್ತಿದ್ದಾರೆ. ಕನ್ನಡದ ಬಗೆಗೂ ಯುವಸಮುದಾಯದಲ್ಲಿ ಅವಜ್ಞೆ ಮೂಡುತ್ತಿದೆ, ಪಾಶ್ಚಾತ್ಯ ಸಂಸ್ಕೃತಿಯ ಬಗೆಗಿನ ಆಸ್ಥೆ, ಆಂಗ್ಲಭಾಷೆಯ ಬಗ್ಗೆ ಇರುವ ವ್ಯಾಮೋಹದಿಂದಾಗಿ ಮುಂಬರುವ ವರ್ಷಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಬೇರುಗಳು ಒಣಗಿಹೋಗುವ ಅಪಾಯವೂ ಇದೆ. ಹಾಗಾಗಿ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ಐತಿಹಾಸಿಕ ಮಹತ್ವವನ್ನು ಯುವ ವಿದ್ಯಾರ್ಥಿ ಸಮುದಾಯದ ಮುಂದಿಡುವ ಕೆಲಸ ಸಮರ್ಥವಾಗಿ ಆಗಬೇಕಿದೆ.

ನಮ್ಮ ನಾಡಿನ ಹಿರಿಮೆ-ಗರಿಮೆಗಳನ್ನು ದೇಶವಿದೇಶಗಳಲ್ಲಿ ಪಸರಿಸಿದ, ಜನರಲ್ಲಿ ಸ್ಫೂರ್ತಿ ತುಂಬಿ ದೇಶದ ಸರ್ವತೋಮುಖ ಔನ್ನತ್ಯಕ್ಕೆ ನಿಸ್ವಾರ್ಥಭಾವದಿಂದ ಶ್ರಮಿಸಿದ ಮಹಾನ್ ವ್ಯಕ್ತಿಗಳ ಕುರಿತಾದ ಈ ಮಾಲಿಕೆಯಲ್ಲಿ ಆಯ್ದ ವ್ಯಕ್ತಿಗಳ ಸಂಕ್ಷಿಪ್ತ ಮತ್ತು ಸಮಗ್ರ ಮಾಹಿತಿಯನ್ನು ಸಂಗ್ರಹ ರೂಪದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಓದುವ ಮೂಲಕ ಯುವಸಮುದಾಯ ಸ್ಫೂರ್ತಿಗೊಳ್ಳಲಿ, ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವತ್ತ ಪ್ರೇರೇಪಿತರಾಗಲಿ ಎಂಬುದು ನಮ್ಮ ಆಶಯ.

ಪ್ರಕಾಶಕರು

ಸ್ನೇಹ ಬುಕ್ ಹೌ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)