Dr. Vinate Sharma and N. Lakshmi
ಭಾರತೀಯ ಮಹಿಳೆ ಮತ್ತು ವಿರಾಮ
ಭಾರತೀಯ ಮಹಿಳೆ ಮತ್ತು ವಿರಾಮ
Publisher -
- Free Shipping Above ₹250
- Cash on Delivery (COD) Available
Pages - 218
Type - Paperback
ಈ ಸಂಕಲನದಲ್ಲಿ 14 ಲೇಖನಗಳನ್ನು ಬರೆದಂತಹ 15 ಜನ ಮಹಿಳೆಯರು ಬೇರೆ ಬೇರೆ ವೃತ್ತಿಯವರು. ಬೇರೆ ಬೇರೆ ಊರಿನಲ್ಲಿ, ದೇಶಗಳಲ್ಲಿ ವಾಸಿಸುವವರು. ಬಿಡುವಿನ ಬಗ್ಗೆ ಸವಿಸ್ತಾರವಾಗಿ ತಮ್ಮ ಅನುಭವಗಳನ್ನು ಮತ್ತು ವಿರಾಮದ ಕುರಿತ ಗ್ರಹಿಕೆಯನ್ನು, ಅದರ ಬಗ್ಗೆ ನಡೆಸಿದ ಅಧ್ಯಯನವನ್ನು, ಆ ಕುರಿತು ತಮಗಿರುವ ಪ್ರಶ್ನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಸಾಮಾಜಿಕ ಕಾರ್ಯಕರ್ತೆಯರು, ಉಪನ್ಯಾಸಕಿಯರು, ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಅಧ್ಯಯನಶೀಲರು, ಬರಹಗಾರರು, ಗೃಹಿಣಿಯರು ಮತ್ತು ಕಲಾವಿದರು, ಹೀಗೆ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡುವವರ ವಿವಿಧ ಅನುಭವಗಳು ದಾಖಲಾಗಿರುವುದು ವಿಶೇಷ. ಮಹಿಳೆಯ ವಿರಾಮಕ್ಕೆ ಸಂಬಂಧಪಟ್ಟಂತೆ ಈ ವಿಷಯ ಇಷ್ಟು ವಿಸ್ತ್ರತವಾಗಿ ಚರ್ಚೆಗೆ ಒಳಪಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ. ಇನ್ನೂ ಬೇರೆ ಬೇರೆ ನೆಲೆಯಲ್ಲಿ ಕೆಲಸ ಮಾಡುತ್ತಿರುವ, ಬೇರೆ ಬೇರೆ ವರ್ಗ, ಜಾತಿ, ಪಂಗಡಗಳ ಹೆಣ್ಣುಗಳು ತಮ್ಮ ಅನುಭವದ ಮೂಸೆಯಲ್ಲಿ ಈ ವಿಷಯದ ಬಗ್ಗೆ ಮಾತಾಡಬೇಕಾಗಿರುವುದು ಇವತ್ತಿನ ತುರ್ತು ಮತ್ತು ಅವರನ್ನು ಮಾತನಾಡಿಸಬೇಕಾಗಿರುವುದು. ಅವರ ಅಭಿಪ್ರಾಯ, ಅನುಭವಗಳನ್ನು ಅಭಿವ್ಯಕ್ತಿಸುವಂತಹ ಅವಕಾಶ ಮತ್ತು ಆವರಣಗಳನ್ನು ಅವರಿಗೆ ಬಿಟ್ಟುಕೊಡಬೇಕಾಗಿರುವ ಜವಾಬ್ದಾರಿಯನ್ನು ಎಚ್ಚರದಿಂದ ಎಲ್ಲರೂ ಕಾಪಿಡಬೇಕಾದ್ದು ಇವತ್ತು ಹೆಚ್ಚು ಅಗತ್ಯ. ಈ ಪ್ರಯತ್ನ ಇನ್ನೂ ಆಗಬೇಕಾಗಿರುವ ಮುಂದಿನ ಚರ್ಚೆಗೆ ಮುನ್ನುಡಿಯಾಗಲಿ.
-ಎನ್. ಮಂಗಳಾ
'ಸಂಚಾರಿ ಥಿಯೇಟರ್' ಸಂಸ್ಥಾಪಕ ನಿರ್ದೇಶಕಿ, ಬೆಂಗಳೂರು
Share
Subscribe to our emails
Subscribe to our mailing list for insider news, product launches, and more.