Dr. Pradhan Gurudutta
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
'ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ' ಭಗವತ್ ಶರಣ ಉಪಾಧ್ಯಾಯ ಅವರ ಸಾಂಸ್ಕೃತಿಕ ಪ್ರಬಂಧಗಳ ಸಂಗ್ರಹ. ಪುಸ್ತಕದ ಮೊದಲ ಲೇಖನ, 'ಗೀತೆ - ನೋಟವೋ ಹೋರಾಟವೋ'ದಲ್ಲೇ ಲೇಖಕರ ಬರವಣಿಗೆಯ ಸ್ವರೂಪ ಮತ್ತು ತಾತ್ವಿಕ ಕಾಳಜಿ ಪರಿಚಯವಾಗುತ್ತದೆ. 'ಸ್ವತಂತ್ರ ದರ್ಶನ ಅಥವಾ ನೋಟವೆಂಬಂತೆ ಇದುವರೆಗೆ ಭಗವದ್ಗೀತೆ'ಯ ಅಧ್ಯಯನ ನಡೆದಿದೆ. ವಾಸ್ತವವಾಗಿ, ಈ ದೃಷ್ಟಿಕೋನವೇ ದಾರಿ ತಪ್ಪಿಸುವಂಥದು. ಪ್ರತಿಯೊಂದು ಗ್ರಂಥವೂ - ಅದು ಸಾಹಿತ್ಯಕವಾಗಿರಲಿ ಅಥವಾ ಸಂಗತಿನಿಷ್ಠ ವರದಿಯಾಗಿರಲಿ - ಸಾಮಾನ್ಯವಾಗಿ ಐತಿಹಾಸಿಕವಾಗಿರುತ್ತದೆ. ಅದಕ್ಕೆ ಐತಿಹಾಸಿಕ ವ್ಯಾಖ್ಯೆಯನ್ನು ಕೊಡಬಹುದು. ಇತಿಹಾಸದ ದೃಷ್ಟಿಕೋನದಿಂದ ನೋಡಿದಾಗ, “ಗೀತೆ” ರೇಖೆಯ ಅಂಚಿನಲ್ಲಿ ನಿಂತಿರುವುದು ಸ್ಪಷ್ಟವಾಗುತ್ತದೆ. ಅದರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಗಗಳು ಪ್ರಜ್ಞಾಪೂರ್ವಕವಾಗಿ ಹೋರಾಟ ನಡೆಸುವುದನ್ನು ಕಾಣುತ್ತೇವೆ.
