Vikram Sampath, To Kannada : L. V. Shantakumari
ಭಾರತದ ಧೀರ ಚೇತಗಳು
ಭಾರತದ ಧೀರ ಚೇತಗಳು
Publisher - ಸಾಹಿತ್ಯ ಭಂಡಾರ
- Free Shipping Above ₹250
- Cash on Delivery (COD) Available
Pages - 307
Type - Hardcover
ವಿಕ್ರಮ್ ಸಂಪತ್ ಅವರು ಬರೆಯುವ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಲೇಖನಗಳಾದರೂ ತುಂಬ ಯೋಗ್ಯತೆಯುಳ್ಳದ್ದೂ ನಂಬಿಕೆಗೆ ಅರ್ಹವಾದುದೂ ಆಗಿರುತ್ತವೆ. ಅವರು ತುಂಬ ಆಳವಾಗಿಯೂ ವ್ಯಾಪಕವಾಗಿಯೂ ಅಧ್ಯಯನ ಮಾಡದೇ ತಿಳಿದುಕೊಳ್ಳದೇ ಏನನ್ನೂ ಬರೆಯುವುದಿಲ್ಲ. ಅವರ ಅಧ್ಯಯನ ಮತ್ತು ಅಧ್ಯಯನ ಸಾಮಗ್ರಿಗಳ ಸಂಗ್ರಹಗಳೇ ತುಂಬ ಪರಿಶ್ರಮದಾಯಕವಾದುದು. ಇತಿಹಾಸಕ್ಕೆ ಸಂಬಂಧಪಟ್ಟ ಸಂಗತಿಯನ್ನೋ ವ್ಯಕ್ತಿಯನ್ನೋ ಕುರಿತು ಅವರು ಸಾಕಷ್ಟು ಆಧಾರಗಳಿಲ್ಲದೇ ಬರೆಯುವುದಿಲ್ಲ. ಸತ್ಯವೇ ಅವರ ಬರಹದ ಜೀವಾಳ. ಶೈಲಿಯೂ ಅಷ್ಟೇ ಮೊನಚಾಗಿರುತ್ತದೆ. ಇತಿಹಾಸವಾದರೂ ಕತೆಕಾದಂಬರಿಯಂತೆ ಓದಿಸಿಕೊಳ್ಳುತ್ತದೆ.
ನಮ್ಮ ದೇಶದ ಸ್ವಾತಂತ್ರ್ಯಾನಂತರದ ರಾಜಕಾರಣದ ದುರುದ್ದೇಶಗಳಿಂದಾಗಿ, ದೇಶಕ್ಕೆ ದಾಳಿಯಿಟ್ಟು, ಕ್ರೌರ್ಯ-ಲೂಟಿ-ಮತಾಂತರಗಳೇ ಅವರ ಆಡಳಿತದ ನೀತಿಯನ್ನಾಗಿಸಿಕೊಂಡು ನಮ್ಮ ಸನಾತನ ದೇಶದ ಸಂಸ್ಕೃತಿಯನ್ನು ಹಾಳುಮಾಡಿದವರನ್ನೇ ವೈಭವೀಕರಿಸಲಾಯಿತು. ದೇಶಕ್ಕಾಗಿ ಸಮಾಜಕ್ಕಾಗಿ ಅತ್ಮಗೌರವಕ್ಕಾಗಿ ಅಂತಹ ದಾಳಿಕೋರರೊಂದಿಗೆ ಹೋರಾಡಿದ ನಮ್ಮ ವೀರರನ್ನು ನಮ್ಮ ಮಕ್ಕಳಿಂದಲೂ ಓದುಗರಿಂದಲೂ ದೂರವೇ ಇರಿಸಲಾಯಿತು. ವಿಕ್ರಮ್ ಸಂಪತ್ ಮತ್ತು ಇಂತಹ ಹೊಸ ತಲೆಮಾರಿನ ಸ್ವತಂತ್ರ ಮನೋಭಾವದ ಅಧ್ಯಯನಶೀಲರ ಬರಹಗಳಿಂದಾಗಿ ವಿಸ್ಮತಿಗೊಳಗಾಗಿದ್ದ ಅಂತಹ ವೀರರೂ ಸತ್ಯಸಂಗತಿಗಳೂ ನಮ್ಮ ತಿಳಿವಳಿಕೆಗೆ ಎಟುಕುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.
-ಎಸ್.ಎಲ್. ಭೈರಪ್ಪ
Share
Subscribe to our emails
Subscribe to our mailing list for insider news, product launches, and more.