Skip to product information
1 of 2

Pro. N. Chinnaswamy Sosale

ಭಾರತ ಮತ್ತು ಭಾರತೀಯರು

ಭಾರತ ಮತ್ತು ಭಾರತೀಯರು

Publisher - ಸಪ್ನ ಬುಕ್ ಹೌಸ್

Regular price Rs. 550.00
Regular price Rs. 550.00 Sale price Rs. 550.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 527

Type - Hardcover

ಎರಡು ಸಾವಿರ ವರ್ಷಗಳ ಬೃಹತ್ ಚರಿತ್ರೆಯನ್ನು ಹೊಂದಿರುವ ನಮ್ಮ ರಾಜಪ್ರಭುತ್ವದ ಕಾಲದಲ್ಲಿ ಧರ್ಮ ಯಥೇಚ್ಛವಾಗಿ ಮೆರೆಯಿತು-ಮಾತನಾಡಿತು ಧರ್ಮದ ಮಕ್ಕಳಾದ ಜಾತಿಗಳು ಧರ್ಮದ ನೀತಿಯಂತೆ ಮೌನವಾಗಿದ್ದವು. ಏಕೆಂದರೆ ಧರ್ಮ ಜಾತಿಗಳನ್ನು ನಿಯಂತ್ರಿಸುತ್ತಿತ್ತು- ಆದರೆ ಎಪ್ಪತ್ತಾರು ವರ್ಷಗಳ ಪ್ರಜಾಪ್ರಭುತ್ವ ಭಾರತದ ಕಾಲದಲ್ಲಿ ಧರ್ಮ ಮೌನವಾಗಿದೆ-ಧರ್ಮದ ಮಕ್ಕಳಾದ ಜಾತಿಗಳು ಯಥೇಚ್ಛವಾಗಿ ಮಾತನಾಡುತ್ತಿವೆ. ಮುಂದುವರೆದು ಜಾತಿಗಳೇ ಧರ್ಮವನ್ನು ನಿಯಂತ್ರಿಸುತ್ತವೆ. ಇದು ಅಂದಿನ ಹಾಗೂ ಇಂದಿನ ಭಾರತದ ವಾಸ್ತವದ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯ ವಾಸ್ತವದ ಚಿತ್ರಣ. ಇಂತಹ ವಸ್ತುನಿಷ್ಠ ಚಿತ್ರಣವನ್ನು ಎಳೆಎಳೆಯಾಗಿ ದಾಖಲೆ ಸಹಿತ ಬರೆದು ಅನಾವರಣಗೊಳಿಸಿದವರು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು. ಈ ಹಿನ್ನಲೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರು ಒಡಲಾಳದಿಂದ ಗ್ರಹಿಸಿದ ಭಾರತ ಮತ್ತು ಭಾರತೀಯರು ಎಂಬ ಈ ನನ್ನ ಕೃತಿಯ ಪ್ರತಿಯೊಂದು ಅಧ್ಯಾಯಗಳು ಈ ಹಿಂದುಳಿಗಿಂತಲೇ ವಸ್ತುನಿಷ್ಟ ವಾಗಿ ಚರ್ಚಿಸಲು ಮುಂದಾಗುತ್ತವೆ. ಯಾವುದೇ ಪೂರ್ವಗ್ರಹವಿಲ್ಲದೆ ಒಬ್ಬ ಪ್ರಬುದ್ಧ ಭಾರತೀಯನಾಗಿ ವಾಸ್ತವದ ಹಿನ್ನಲೆಯಲ್ಲಿ ತೆರೆದ ಮನಸ್ಸಿನಿಂದ ಓದಿದಾಗ ಇಲ್ಲಿನ ಅಧ್ಯಾಯಗಳು ಹಲವಾರು ಪ್ರಶ್ನೆಗಳನ್ನು ವಾಸ್ತವದೊಂದಿಗೆ ಮುಖಾಮುಖಿ ಗೊಳಿಸುತ್ತದೆ. ಇದಕ್ಕೆ ಸೂಕ್ತ ಉತ್ತರವನ್ನು ಕಂಡುಕೊಂಡು ಜನಮುಖಿ ಆಧಾರದಲ್ಲಿ ಪ್ರಬುದ್ಧ ಭಾರತವನ್ನು ಕಟ್ಟುವುದೊಂದೇ ನಮ್ಮೆಲ್ಲರ ಗುರಿಯಾಗಬೇಕಾಗಿದೆ.

-ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)