Dr. G. Ramakrishna
Publisher - ನವಕರ್ನಾಟಕ ಪ್ರಕಾಶನ
Regular price
Rs. 165.00
Regular price
Rs. 165.00
Sale price
Rs. 165.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಭಗವದ್ಗೀತೆಯ ಕರ್ತೃವು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತ್ಯೇಕತೆಯನ್ನು ಸಮರ್ಥಿಸಲು ಪ್ರತ್ಯೇಕತೆಯ ತಾತ್ವಿಕ ನೆಲೆಯನ್ನು ಸಿದ್ಧಪಡಿಸಿಕೊಂಡಿದ್ದಾನೆ. ಸಮಾಜದಲ್ಲಿ ಶ್ರೇಣಿಗಳನ್ನು ಪ್ರಬಲವಾಗಿ ಸುಭದ್ರಗೊಳಿಸಲು ಪರಮಾತ್ಮ ಶ್ರೀಭಗವಾನನೇ ಮುದ್ರೆಯೊತ್ತಿದ್ದಾನೆಂದರೆ ಜನತೆಯು ಮೂಕವಿಸ್ಮಿತರಾಗಿ ಅದನ್ನು ಸ್ವೀಕರಿಸಬೇಕು. ಆದು ಶ್ರೀಮದ್ಭಗವದ್ಗೀತೆಯ ಅಂತಿಮ ಸಂದೇಶ, ಜ್ಞಾನಾದಿಗಳನ್ನು ಪ್ರತ್ಯೇಕಿಸಿದಂತೆ ಬಾಹ್ಯಣಾದಿಗಳನ್ನು ಪ್ರತ್ಯೇಕಿಸುವುದು ಗೀತೆಯ ಇನ್ನುಳಿದ ಕೈಂಕರ್ಯ, ಗೀತೆಯು ದಾರ್ಶನಿಕ ಗಂಧವೋ, ಧರ್ಮ ಗ್ರಂಥವೋ, ಸಾಮಾಜಿಕ ಕೈಪಿಡಿಯೋ ಎಂಬುದು ಇದರಿಂದಲೇ ತೀರ್ಮಾನವಾಗಬೇಕು. ಸ್ಥಿತಪ್ರಜ್ಞತ್ವ, ಭಕ್ತಿ, ಧ್ಯಾನ, ವಿಭೂತಿ, ವಿಶ್ವರೂಪ ದರ್ಶನ, ಇತ್ಯಾದಿಗಳೆಲ್ಲಾ ಸಾಮಾಜಿಕ ಶ್ರೇಣೀಕರಣವನ್ನು ಒಂದು ಅದ್ಭುತ ಪರಮಾತ್ಮ ಸೃಷ್ಟಿ ಎಂದು ಭ್ರಮಿಸುವಂತೆ ಮಾಡುವುದರಲ್ಲಿ ಸಾಧನಗಳು, ಶ್ರೇಣೀಕರಣಕ್ಕೆ ಗೀತೆಯ ಅನಿಷ್ಟ ಕಾಣಿಕೆಯು ಮಹತ್ತರವಾದುದು.
ಇಲ್ಲಿಯವರೆಗೆ ಗೀತೆಯನ್ನು ಕುರಿತು ಸಾವಿರಾರು ವಿದ್ವಾಂಸರು ನೂರಾರು ವ್ಯಾಖ್ಯಾನಗಳನ್ನು ನೀಡಿದ್ದಾರೆ, ಆದರೆ ಜಿ. ರಾಮಕೃಷ್ಣ ಅವರ ಈ ಹೊತ್ತಿಗೆಯು ಅವುಗಳನ್ನು ವಿಮರ್ಶಿಸುವ ಕಾರ್ಯ ಮಾಡದೆ, ಅದಕ್ಕಿಂತ ಭಿನ್ನವಾಗಿ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆಯೇನು ಎಂಬುದರತ್ತ ಓದುಗರ ಗಮನ ಸೆಳೆಯುತ್ತದೆ. ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. “ಗೀತೆಯು ಸಂಕೀರ್ಣ ತತ್ತ್ವಶಾಸ್ತ್ರ ಪ್ರಮೇಯಗಳ ಆಗರ" ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಈ ಕೃತಿಯಲ್ಲಿರುವ ವಿರೋಧಾಭಾಸವನ್ನೂ ಬಯಲುಮಾಡುತ್ತಾರೆ.
ಡಾ| ಜಿ. ರಾಮಕೃಷ್ಣ ನಿವೃತ್ತ ಕಾಲೇಜು ಅಧ್ಯಾಪಕರು ಮತ್ತು ಹಲವಾರು ಕೃತಿಗಳ ಕರ್ತೃ, ಡಾ| ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರ 'ಲೋಕಾಯತ' ಕೃತಿಯ ಅನುವಾದಕರು ಹಾಗೂ 'ಲೋಕ ತತ್ತ್ವ ಶಾಸ್ತ್ರ ಪ್ರವೇಶಿಕೆ' ಕನ್ನಡ ಆವೃತ್ತಿಯ ಸಂಪಾದಕರು. ಅವರ 'ಭಾರತೀಯ ವಿಜ್ಞಾನದ ಹಾದಿ', 'ಮುನ್ನೋಟ' ಮತ್ತು 'ಆಯತನ' ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿವೆ. ಅನುವಾದ ಕ್ಷೇತ್ರದ ಅವರ ಸಾಧನೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಗೌರವ ಪ್ರಶಸ್ತಿಯು ದೊರಕಿದೆ.