Prof. B. V. Veerabhadrappa
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಭಗವದ್ಗೀತೆ – ಒಂದು ವೈಚಾರಿಕ ಒಳನೋಟ
ಎಲ್ಲ ಉಪನಿಷತ್ತುಗಳ ಸಾರವನ್ನೂ ಸಂಗ್ರಹಿಸಿ ಗೋಪಾಲನಂದನನಾದ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಮಹತ್ತಾದ ಅಮೃತವನ್ನು ನೀಡಿದ್ದಾನೆಂದು ಹೇಳುವ ಒಂದು ಸಂಸ್ಕೃತ ಶ್ಲೋಕವಿದೆ. ಆದರೆ ಈ ಅಮೃತವು ಒಂದು ಸ್ವರೂಪದಲ್ಲಿಲ್ಲ. ಜೊತೆಗೆ, ಅದಷ್ಟು ಆಪ್ಯಾಯಮಾನ ಅಥವಾ ಹಿತಕರ' ಎಂಬ ಜಿಜ್ಞಾಸೆಗೂ ಅವಕಾಶವಿದೆ. ಎಲ್ಲವನ್ನೂ ಪರಿಶೀಲಿಸಿ ನೀನೇ ತೀರ್ಮಾನಿಸು'', ಎಂದು ಭಗವದ್ಗೀತೆಯೇ ಆದೇಶಿಸುತ್ತದೆ. ಪರಂಪರಾಗತವಾಗಿ ಗೀತೆಯನ್ನು ಅರ್ಥೈಸಿರುವ ಆಚಾರ್ಯರಿಗಿಂತ ಭಿನ್ನವಾಗಿ ಈ ಉದ್ಯಂಥವನ್ನು ಅವಲೋಕಿಸುವ ಅವಶ್ಯಕತೆ ಇದೆ. ಈ ಗ್ರಂಥವು ಅದಕ್ಕೆ ಸಾಮಗ್ರಿಯನ್ನೊದಗಿಸುತ್ತದೆ.
ಗೀತೆಯ ಮೊದಲ ಅಧ್ಯಾಯದಲ್ಲಿ ಅತ್ಯಂತ ಪ್ರಮುಖವಾದ ಕೆಲವು ಸಾಮಾಜಿಕ ಪ್ರಶ್ನೆಗಳನ್ನು ಎತ್ತಲಾಗಿದೆ. ಯುದ್ಧದಂತಹ ಭೀಕರ ಘಟನೆಯಿಂದ ಸಮಾಜದಲ್ಲಿ ಏನೆಲ್ಲಾ ಅಲ್ಲೋಲ-ಕಲ್ಲೋಲ ಉಂಟಾಗಬಹುದೆಂಬ ಕಾಳಜಿ ಅಲ್ಲಿದೆ. ಸಮಾಜಶಾಸ್ತ್ರಜ್ಞನೊಬ್ಬನು ಕೊಡಬಹುದಾದ ಉತ್ತರ ಗಳಿಗಿಂತ ಬೇರೆಯಾದ ಉತ್ತರಗಳು ಉಳಿದ ಹದಿನೇಳು ಅಧ್ಯಾಯಗಳಲ್ಲಿ ನಮಗೆ ದೊರೆಯುತ್ತವೆ. ಆದರೆ ಅರ್ಜುನನ ನೇರವಾದ ಪ್ರಶ್ನೆಗಳಿಗೆ ಭಗವಾನ್ ಶ್ರೀಕೃಷ್ಣನ ನೇರವಾದ ಉತ್ತರ ಇಲ್ಲ. ಬದಲಾಗಿ, ಅಂತಹ ಪ್ರಶ್ನೆಗಳೇ ಅನವಶ್ಯಕವೆಂಬ ಧೋರಣೆ ಬಲವಾಗಿ ಪ್ರತಿಪಾದಿತವಾಗಿದೆ ; ಕರ್ಮ-ಭಕ್ತಿ-ಜ್ಞಾನ ಯೋಗಗಳು, ಸ್ಥಿತಪ್ರಜ್ಞನ ಲಕ್ಷಣ, ಇವೆಲ್ಲಾ ಉಕ್ತವಾಗಿವೆ.
''ಅಸ್ಪೃಶ್ಯತೆಯು ಸಾಮಾಜಿಕವಾಗಿ ಅಪರಾಧವಲ್ಲವೇ'' ಎಂಬ ಪ್ರಶ್ನೆಗೆ 'ಸ್ಪೃಶ್ಯ-ಅಸ್ಪೃಶ್ಯ ಎಂಬುದೇ ಅವಾಸ್ತವವಾದ್ದರಿಂದ ಪ್ರಶ್ನೆಯು ಅನುಚಿತ" ಎಂಬ ಉತ್ತರ ನೀಡಿದರೆ ಹೇಗಿರುತ್ತದೆ ? ''ನಮ್ಮವರನ್ನೆಲ್ಲಾ ಯುದ್ಧದಲ್ಲಿ ಕೊಲ್ಲುವುದು ಸರಿಯೇ ?'' – ಅರ್ಜುನನ ಈ ಪ್ರಶ್ನೆಗೆ ಉತ್ತರ : ''ಕೊಲ್ಲುವುದು, ಕೊಲ್ಲಿಸಿಕೊಳ್ಳುವುದು, ಎಂಬುದೆಲ್ಲಾ ಭ್ರಮೆ; ಆತ್ಮನು ನಿತ್ಯ.” ಹಾಗಿದ್ದರೆ ಅರ್ಜುನನು ಯುದ್ಧದಿಂದ ಹಿಂದೆಗೆಯಬಾರದೆಂದು ಹೇಳುವುದು ಸಹ ಅಪ್ರಕೃತ ಅದು ಸರಿಯಲ್ಲ ; ಏಕೆಂದರೆ ಅದು ಅವನ ಕರ್ತವ್ಯ, ಕರ್ಮ", ಎಂಬ ಮಾರುತ್ತರ ಆಗ ಬರುತ್ತದೆ. ಹಾಗೆಂದು ವಿಧಿಸಿದ್ದು ಯಾರು ? ಏಕೆ ಹಾಗೆ ವಿಧಿಸಿದ್ದು ?
ಗೀತೆಯ ರಚನೆ ಮತ್ತು ಸಂದೇಶದ ಬಗ್ಗೆ ಹೀಗೆ ತರ್ಕವನ್ನು ಬೆಳೆಸುತ್ತಾ ಹೋಗಬಹುದು. ಪ್ರಸ್ತುತ ಗ್ರಂಥವು ಗೀತೆಯ ವಿಶ್ಲೇಷಣೆಯನ್ನು ಕೈಗೆತ್ತಿಕೊಂಡಿರುವುದು ನಮ್ಮ ಸಾಂಸ್ಕೃತಿಕ ಸಂದರ್ಭ ದಲ್ಲಿ ಸಮಯೋಚಿತವಾಗಿದೆ ಮತ್ತು ಬೌದ್ಧಿಕ ಕ್ಷೇತ್ರದಲ್ಲಿ ಅಗತ್ಯವಾದ ಒಂದು ಸಂವಾದವಾಗಿದೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
