ಎಂ. ವಿ. ನಾಡಕರ್ಣಿ
Publisher: ಮನೋಹರ ಗ್ರಂಥಮಾಲಾ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
Couldn't load pickup availability
ಭಗವದ್ಗೀತೆಯ ಮೂಲದ ಅನ್ವೇಷಣೆಯೊಡನೆ ಅದರ ಮೇಲೆ ಬರೆದ ಭಾಷ್ಯಗಳು, ಅದರ ಅನುವಾದಗಳ ಚರಿತ್ರೆ, ಅದರ ಜಗತ್ಪ್ರಯಾಣ, ದೇಶ-ವಿದೇಶಗಳಲ್ಲಿ ಅದರ ಪ್ರಭಾವದ ಹರವು-ಇವೆಲ್ಲದರ ಚಿತ್ರಣವನ್ನು ಈ ಪುಸ್ತಕದಲ್ಲಿ ಐತಿಹಾಸಿಕ ದೃಷ್ಟಿಕೋನದಿಂದ ಮಾಡಲಾಗಿದೆ. ಗೀತೆಯನ್ನು ಅರ್ಥೈಸುವದರಲ್ಲಿ ಮೊದಲು ಬಂದ ಸಾಂಪ್ರದಾಯಿಕ ಭಾಷ್ಯಕಾರರು ಆಧ್ಯಾತ್ಮಿಕ ಸಾಧನೆ ಮತ್ತು ಪಾರಲೌಕಿಕ ಪ್ರಶ್ನೆಗಳ ಮೇಲೆ ಹೆಚ್ಚು ಒತ್ತು ಕೊಟ್ಟರು. ಜೊತೆಗೆ ಗೀತೆಯ ಬೋಧನೆಯಲ್ಲಿದ್ದ ನೀತಿಪಾಠದ ಮೇಲಿನ ಒತ್ತು ಸಮಕಾಲೀನ ಜಗತ್ತಿಗೆ ಪ್ರಸ್ತುತವಾಗಿದೆಯೆಂದೂ ಗಾಂಧೀಜಿ ಮುಂತಾದವರು ತೋರಿಸಿದರು. ಗೀತೆ ಬರಿಯ ಧರ್ಮಗ್ರಂಥಮಾತ್ರವಲ್ಲ, ಜೀವನಯಾತ್ರೆಯಲ್ಲಿ ದಾರಿದೀಪವೂ ಆಗಿದೆ. ಅದರ ಬೋಧನೆ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲ ಧರ್ಮದವರಿಗೂ ಸಹಾಯವಾಗುವದೆಂದು ಅದರ ವೈಶ್ವಿಕ ಮೌಲ್ಯವನ್ನು ಈ ಪುಸ್ತಕ ಎತ್ತಿ ತೋರಿಸುತ್ತದೆ.
