Keshavareddy Handrala
ಬೆರಕೆ ಸೊಪ್ಪು
ಬೆರಕೆ ಸೊಪ್ಪು
Publisher - ಸಪ್ನ ಬುಕ್ ಹೌಸ್
Regular price
Rs. 180.00
Regular price
Rs. 180.00
Sale price
Rs. 180.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಾಲವೊಂದಿತ್ತು ಗಂಗೆಯಲ್ಲಿ ಮುಳುಗಿ ಏಳುವಾಗ ಹೆಣಗಳು ತಲೆಗೆ ತಗಲುತ್ತಿದ್ದವು, ಅಂಥ ಮಾತುಗಳು ಈಗಲೂ ಗಂಗೆಯನ್ನು ಖುದ್ದು ನೋಡದವರು ದೇಶದ ತುಂಬಾ ಮಾತನಾಡಿಕೊಳ್ಳುತ್ತಾರೆ. ಹೌದು, ನಾನು ತೀರಾ ಚಿಕ್ಕ ಹುಡುಗನಾಗಿದ್ದಾಗ ಮಳೆಗಾಲದಲ್ಲಿ ಪ್ರವಾಹ ಹೆಣಗಳು ಒಂದರ ಹಿಂದೊಂದು ತೇಲಿಹೋಗುತ್ತಿದ್ದುದ್ದನ್ನು ಕಂಡಿದ್ದೇನೆ. ಎಷ್ಟೋ ಸಾರಿ ನಮ್ಮ ದೋಣಿಗೆ ಡಿಕ್ಕಿ ಹೊಡೆದುಕೊಂಡೇ ಹೆಣಗಳು ಮುಂದಕ್ಕೆ ಹೋಗುತ್ತಿದ್ದವು. ಹಾಯಿ ಹಾಕುತ್ತಿದ್ದ ಅಪ್ಪ, ಅಂಥ ಹೆಣಗಳನ್ನು ಮುಟ್ಟಿ ಕೈಯ್ಯನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ. ನಂತರ ಅದು ನನಗೂ ರೂಢಿಯಾಯಿತು. ಅದನ್ನೇ ಈಗ ನನ್ನ ಮಕ್ಕಳೂ ಮಾಡುತ್ತಿದ್ದಾರೆ. ಆಗ ವೈದ್ಯಕೀಯ ಸೌಲಭ್ಯಗಳು ಅಷ್ಟಾಗಿ ಅಭಿವೃದ್ಧಿಯಾಗಿರಲಿಲ್ಲ. ಬಹಳ ಹಿಂದೆ ತೀರಾ ವಯಸ್ಸಾದವರನ್ನು, ವಾಸಿಯಾಗಲಾರದ ರೋಗಗಳಿಂದ ನರಳುತ್ತಿದ್ದವರನ್ನು, ಸತ್ತ ಬಸುರಿ ಮತ್ತು ಶಿಶುಗಳನ್ನು ಗಂಗೆಗೆ ಎಸೆದು ಬಿಡುತ್ತಿದ್ದರು ಮುಕ್ತಿ ಸಿಗಲೆಂದು. ರಭಸದಿ೦ದ ಹರಿಯುವ ನೀರು ಗಂಗೆಯದ್ದಾದರೇನು, ಯಮುನೆಯದ್ದಾದರೇನು ಇಲ್ಲ ಬಹ್ಮಪುತ್ರೆಯದ್ದಾದರೇನು ಬಿದ್ದ ಯಾವುದೇ ವಸ್ತುಗಳನ್ನು ಹೊತ್ತು ಸಾಗುವುದೇ ಅದರ ಕೆಲಸವಲ್ಲವೆ? ಈಗ ಬಿಡಿ ಸತ್ತವರನ್ನೂ ಬದುಕಿಸುವಂಥ ಔಷಧಿಗಳನ್ನು ಕಂಡು ಹಿಡಿದಿದ್ದಾರಂತೆ, ಮೆಡಿಕಲ್ ಫೀಲ್ಡ್ ತುಂಬಾ ಮುಂದುವರೆದಿದೆ. ಮಸ್ತಾಗಿ ಹಣ ಬೇಕಷ್ಟೆ. ಅದಕ್ಕೆ ಈಗ ಗಂಗೆ ಪರಿಶುದ್ಧವಾಗಿದ್ದಾಳೆ. ಆದರೆ ಈಗಲೂ ಜನಕ್ಕೆ ಈ ಗಂಗೆಯ ತಟದಲ್ಲಿ ಪ್ರಾಣ ಬಿಡುವುದೆಂದರೆ, ಶವ ಸುಡುವುದೆಂದರೆ ತುಂಬಾ ಇಷ್ಟ ಅದೂ ಈ ಬನಾರಸಿನಲ್ಲಿ ಆದರೆ ಮುಕ್ತಿ ಗ್ಯಾರಂಟಿ. ಗಂಗೆಯ ಜಲ ಕರುಳನ್ನು ಮತ್ತು ಹೃದಯವನ್ನು ಶುದ್ದೀಕರಣ ಮಾಡುತ್ತದೆ. ನಾನೇ ನೋಡಿ ಪ್ರತಿದಿನ ಗಂಗೆಯಲ್ಲಿಯೇ ಸ್ನಾನ ಮಾಡುತ್ತೇನೆ, ಗಂಗೆಯ ನೀರನ್ನೇ ಕುಡಿಯುತ್ತೇನೆ ಮತ್ತು ವಾರದಲ್ಲಿ ನಾಲ್ಕು ದಿನಗಳಾದರೂ ಶ್ರಾದ್ಧದ ಊಟವನ್ನೇ ಮಾಡುತ್ತೆನೆ. ಎಷ್ಟೋ ಸಾರಿ ವಿಸರ್ಜನೆಗಳನ್ನೂ ಗಂಗೆಯಲ್ಲಿ ಮಾಡಿದ್ದೇನೆ. ನನ್ನಂಥ ಎಷ್ಟು ಪಾಪಿಗಳನ್ನು ಗಂಗೆ ಕ್ಷಮಿಸಿರುವಳೋ ಆ ವಿಶ್ವನಾಥನಿಗೆ ಗೊತ್ತು. ಒಂದೇ ಒಂದು ಕೆಮ್ಮು, ಒಂದೇ ಒಂದು ಜ್ವರವನ್ನು ಕಂಡವನಲ್ಲ. ನಾನು ಹೋಗುವುದೇ ಅಪರೂಪ, ಮರಿಮೊಮ್ಮಕ್ಕಳೂ ಇದ್ದಾರೆ. ನನಗೂ ಸತ್ತ ನಂತರ ಇಲ್ಲೇ ಬೂದಿ ಗಂಗೆಯಲ್ಲಿ ಬೆರೆತುಹೋಗುವ ಆಸೆ, ಆದರೆ ಸಾವು ಅಷ್ಟು ಸುಲಭದ್ದಲ್ಲ. ಬದುಕಬೇಕೆಂಬ ಇಚ್ಚೆ ಇಲ್ಲದಿದ್ದರೂ ಬಲವಂತವಾಗಿ ಬದುಕುವುದಿದೆಯಲ್ಲ ಅದಕ್ಕಿಂತಲೂ ದೊಡ್ಡ ಯಾತನೆ ಮತ್ತೊಂದಿಲ್ಲ. ಆದ್ದರಿಂದಲೇ ಲಕ್ಷಾಂತರ ಜನರಿಗೆ ಬದುಕೊಂದು ಅತಿದೊಡ್ಡ ದುರಂತವಾಗಿಯೇ ಪರಿಣಮಿಸಿದೆ. ವಿಜ್ಞಾನ ಇಷ್ಟು ಮುಂದುವರಿದಿದೆಯಲ್ಲ, ಯಾರಾದರೂ ಯಾವ ನೋವೂ ಇಲ್ಲದೆ ಸುಲಭವಾಗಿ ಪ್ರಾಣತೆಗೆಯುವಂಥ ಮಾತ್ರೆಯೊಂದನ್ನು ಕಂಡು ಹಿಡಿಯಬೇಕು. ಸರ್ಕಾರ ಅದನ್ನು ಮಾನ್ಯ ಮಾಡಬೇಕು. ಆಗ ನೋಡಿ ಈ ಗಂಗೆಯಲ್ಲಿ ಹೆಣಗಳು ಹೇಗೆ ತೇಲಿ ಬರುತ್ತವೆಂದು.
Share
Subscribe to our emails
Subscribe to our mailing list for insider news, product launches, and more.