Bharatisutha
Publisher - ಗೀತಾಂಜಲಿ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಈ ಕಾದಂಬರಿಯು ಬಾಂಗ್ಲಾ ವಿಮೋಚನೆಗಾಗಿ ನಡೆದ ಹೋರಾಟದ ಕಥನವಾಗಿದೆ. ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾ ಪಶ್ಚಿಮ ಪಾಕಿನ ಹಿಡಿತದಿಂದ ಮುಕ್ತವಾಗಲು ನಡೆಸಿದ ಬಂಡಾಯ ಹಾಗೂ ತನ್ನ ಸೈನ್ಯದ ಅಧಿಕಾರಿಗಳ ಮೂಲಕ ಪಾಕಿಸ್ತಾನ ನಡೆಸಿದ ಭೀಭತ್ಸವೆನಿಸುವ ಕ್ರೌರ್ಯಕ್ಕೆ ಮನಸು ಮಮ್ಮಲ ಮರುಗುತ್ತದೆ. ಕಮರುದ್ದೀನ ಎಂಬ ಡಕಾಯಿತನೊಬ್ಬ ಪಾಕಿನ ಏಜೆಂಟನಂತೆ ನಟಿಸುತ್ತಾ ತನ್ನ ನೆಲದ ವಿಮೋಚನೆಗಾಗಿ ಹೋರಾಡುತ್ತಿದ್ದ ಗೆರಿಲ್ಲಾ ವೀರರೊಡನೆ ಸೇರಿ ಪಾಕಿನ ದುಷ್ಟ ಸೇನಾಧಿಕಾರಿಗಳ ಕ್ರೌರ್ಯದ ವಿರುದ್ಧ ಹೋರಾಡಿ ಮಡಿಯುವ ಕಥನವಿದು. ಹೃದಯವಿದ್ರಾವಕ ಕ್ರೌರ್ಯಕ್ಕೆ ಸುಂದರ ಬಾಂಗ್ಲಾ ನರಕವಾಗಿದೆ. ಅದರ ಗತವೈಭವವನ್ನು ಮರಳಿ ಗಳಿಸುವ ಹಾದಿಯಲ್ಲಿ ಅಮಾಯಕರು ಹೋರಾಟಗಾರರು ಹೆಣ್ಣುಗಳು ಅನುಭವಿಸುವ ಯಾತನೆ ಹಿಂಸೆ ರಕ್ತಪಾತ ಅತ್ಯಾಚಾರಗಳ ತ್ಯಾಗ ಬಲಿದಾನಗಳ ಸನ್ನಿವೇಷಗಳು ಮನಕಲಕುತ್ತವೆ. ಇದೊಂದು ಬಂಡಾಯದ ವಿಜಯವನ್ನು ಸಾರುವ ಕಾದಂಬರಿ.
