Skip to product information
1 of 1

S. K. Umesh

ಬೆಂಗಳೂರು ಅಂಡರ್ ವರ್ಲ್ಡ್ ಅಕ್ಕಿಕಾಳು

ಬೆಂಗಳೂರು ಅಂಡರ್ ವರ್ಲ್ಡ್ ಅಕ್ಕಿಕಾಳು

Publisher - ಸಪ್ನ ಬುಕ್ ಹೌಸ್

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 312

Type - Paperback

ನಾ ಕಂಡ ಈ ಬೆಂಗಳೂರು ಭೂಗತ ಲೋಕ ಕಪ್ಪು ಬಿಳುಪಿನ ಚಿತ್ರಗಳು ಮಾಯವಾಗುತ್ತಾ, ವರ್ಣರಂಜಿತ ಚಿತ್ರಗಳು ತೆರೆಯ ಮೇಲೆ ಹರಿದಂತೆ, ಈ ಕತ್ತಲೆ ಜಗತ್ತಿನಲ್ಲಿ 'ನಾನೇ ಸಾಮ್ರಾಟ' ಎಂದು ತಾನೇ ಬಿರುದನ್ನು ಧರಿಸಿ ಎಲ್ಲೆಲ್ಲೋ ನಡೆವ ಅಪರಾಧದ ಸರಮಾಲೆಗೆ ಸಾಮ್ರಾಟನೇ ದಾರವಾಗಿ ಬಿಡುತ್ತಿದ್ದ. ಭೂಗತ ಲೋಕದಲ್ಲಿ ಒಮ್ಮೆ ಆ ಲೋಕದ ನಾಯಕನೆನಿಸಿಕೊಂಡು ಬಿಟ್ಟರೆ ಘಟಿಸುವ ಎಲ್ಲಾ ಪಾತಕಗಳಿಗೂ ಇವನೇ ಒಡೆಯ. ಇದೊಂದು ಚದುರಂಗ ದಾಟವಿದ್ದಂತೆ ಪೊಲೀಸರು ನಿರಂತರವಾಗಿ ಚೆಕ್‌ ಮೇಟ್ ಕೊಡುವುದೇ ರಾಜನಿಗೆ.

ಹೀಗೆ ಅವನಿಗರಿವಿಲ್ಲದಂತೆ ಅವನ ಹೆಗಲ ಮೇಲೆ ಪಾತಕಗಳ ಮೂಟೆ ಗಳನ್ನು ಹೊರಲಾರದ್ದೊತ್ತಿಗೆ ಜೈಲು ಸೇರಿಕೊಂಡು ತಾಯಿಗೆ ಮಗನಾಗದೇ, ಹೆಂಡತಿಗೆ ಗಂಡನಾಗದೇ, ತಂಗಿಗೆ ಅಣ್ಣನಾಗದೇ, ಮಕ್ಕಳಿಗೆ ಅಪ್ಪನಾಗದೇ ತನ್ನ ಪಾಪಕೂಪದ ಪಾಲನ್ನು ಅವರಿಗೂ ಉಣಬಡಿಸಿ, ಅವರ ನರಕಯಾತನೆ ಮಾಡಿದ ಕರ್ಮಕ್ಕೆ, ಮುಪ್ಪು ನರೆವ ಮುನ್ನವೇ ಜೀವಂತ ಮಾರ್ಟಂಗಳಾಗಿ, ಬೆಟ್ಟದಷ್ಟು ಆಸೆಯಿಟ್ಟು ಹೊಟ್ಟೆ ಕಟ್ಟಿ ಸಾಕಿ ಬೆಳೆಸಿದ ಈ 'ರೌಡಿ' ಎಂದು ಕಟ್ಟಿಕೊಂಡಿದ್ದ ಪಟ್ಟದಲ್ಲಿ ಸಾಲುಸಾಲಾಗಿ ಚಟ್ಟ ಸೇರಿರುವವರ ಈ ನನ್ನ ಲೇಖನದಲ್ಲಿ ಇವರ ಜೀವನವನ್ನು 'ಅಕ್ಕಿಕಾಳು' ಎಂದು ಬರೆದಿರುತ್ತೇನೆ. ಆ ಅಕ್ಕಿಕಾಳಿನ ಋಣವನ್ನು ಪೂರ್ತಿ ಮುಗಿಸಲಾರದ ಈ ರೌಡಿ ಎಂಬ ಪಟ್ಟಕ್ಕೆ ಆಸೆಯಿಂದಲೋ, ದುರ್ಲಾಭದಿಂದಲೋ, ದುರಹಂಕಾರದಿಂದಲೋ, ಹೊಟ್ಟೆ ಗಾಗಿಯೋ, ಕೆಟ್ಟ ರೌಡಿ ಪಟ್ಟಕ್ಕಾಗಿಯೋ ಸಿಲುಕಿಕೊಂಡ ಸಹಸ್ರಸಹಸ್ರ ತರುಣರುಗಳ ಬೆರಳು ಮುದ್ರೆಗಳನ್ನು ನನ್ನ ಸೇವಾವಧಿಯಲ್ಲಿ ಕಂಡಿರುವೆನು.

-ಉಮೇಶ್. ಎಸ್. ಕೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)