Skip to product information
1 of 1

Mahadeva Hadapada Natuvara

ಬಯಲುಡುಗೆಯ ಬೊಂತಾ

ಬಯಲುಡುಗೆಯ ಬೊಂತಾ

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ನಡೆ ನುಡಿ ಒಂದಾದ ಭಕ್ತರಿರುವ ಊರಾವುದು ಎಂದು ಹುಡುಕುತ್ತಾ ಬಂದವರ ಕತೆಗಳಿವು, ಇತಿಹಾಸವನ್ನು ತಿಳಿಸುವ ಅತ್ಯಂತ ಹಳೆಯ ರೂಪಗಳಲ್ಲಿ ಕಥೆಯೂ ಒಂದು. ಶರಣರ ಕತೆ ಹೇಳುವುದೆಂದರೆ ಒಂಬತ್ತು ಶತಮಾನಗಳಾಚೆ ಸಾಗಬೇಕು, ಕಲ್ಯಾಣವ ಹೊಕ್ಕಬೇಕು. ಅಲ್ಲಿ ಆಕಾಶಕ್ಕೆ ಪ್ರತಿಯೆಂಬಂತೆ ನಿರ್ಭಿಡೆಯಾಗಿ ಬದುಕುತ್ತಿರುವ ಸಜ್ಜನರ ಮನೆಯ ಹೊಸ್ತಿಲಲ್ಲಿ ನಿಲ್ಲಬೇಕು. ಆಸೆ ಆಮಿಶಗಳನ್ನಅದ ಅವರ ಮನೆ ಮನ ಪ್ರವೇಶಿಸಬೇಕು ಅದು ಒಳಗೂ ಹೊರಗೂ ಶುದ್ಧವಾದವರ ಪ್ರಪಂಚ.ಅಲ್ಲಿ ರಮ್ಯತೆಗೆ ಜಾಗವಿಲ್ಲ ಅದು ಸಹಜ ಸುಂದರ ನೈಜ ಅನಾವರಣ. “ಲೇಖಕರು ಬರೆಯಲಿಕ್ಕೆ ಕತೆಗಳನ್ನು ಆರಿಸಿಕೊಳ್ಳುವುದಿಲ್ಲ, ಕತೆಗಳೇ ಕತೆಗಾರನನ್ನು ಆಯ್ಕೆ ಮಾಡಿಕೊಳ್ಳುತ್ತವೆ." ಎನ್ನುವ ಮಾತಿದೆ. ಇಲ್ಲಿನ ಕತಗಳು ಮಹಾದೇವ ಹಡಪದರನ್ನು ಆಯ್ಕೆಮಾಡಿಕೊಂಡಿವೆ. ತಮ್ಮ ವಿಶಿಷ್ಟ ಭಾವಾಭಿನಯದಿಂದ ಗಮನ ಸಳೆದ ರಂಗಭೂಮಿ ಕಲಾವಿದರಾದ ಹಡಪದ ಅವರೊಳಗೆ ಒಬ್ಬ ಕತೆಗಾರನಿದ್ದಾನೆ. ಇಲ್ಲಿ ಬರಹಗಳು ಮಾತಾಡುತ್ತವೆ, ಕನಸುಗಳು ಮನದ ಕದ ತೆರೆದು ನಡೆಯಬೇಕಾದ ದಾರಿ ತೋರುತ್ತವೆ, ಮನದ ಹಕ್ಕಿ ಒಳಮಾತಿಗೆ ಕಿವಿಗೊಡುವುದನ್ನ ಕಲಿಸುತ್ತದೆ. ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಕತೆಗಳು ಇತಿಹಾಸದ ಎಲೆಗಳನ್ನು ಹಿಡಿದುಕೊಂಡು ಪುಟದಿಂದ ಪುಟಕ್ಕೆ ಕುತೂಹಲದ ಹೆಜ್ಜೆಯಲ್ಲಿ ನಡೆಸುತ್ತವೆ. ಪ್ರಪಂಚವು ಎರಡು ವಿಷಯಗಲಿಂದ ರೂಪಿಸಲ್ಪಟ್ಟಿದೆ - ಹೇಳಲಾದ ಕಥೆಗಳು ಮತ್ತು ಅವುಗಳು ಬಿಟ್ಟುಹೋಗುವ ನೆನಪುಗಳು.. ಮರೆಯಲಾಗದ ಮರೆಯಬಾರದ ಶರಣ ಸಮುದಾಯವನ್ನು ನಮ್ಮ ಎದೆಯೊಳಗಿರಿಸುವ ಕಲ್ಯಾಣದ ಈ ಕತೆಗಳು ಬಯಲು ಬ್ಲಾಗಿನಲ್ಲಿ ಮಕ್ಕಳಿಂದ ಹಿರಿಯರ ತನಕ ಎಲ್ಲರ ಮೆಚ್ಚುಗೆ ಗಳಿಸಿದ್ದವು.

-ಕೆ. ಆರ್. ಮಂಗಳಾ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)