Dr. Malar Vile, Divyadarshini M.
ಬಣ್ಣಗಳು ಮಾತಾಡಲಿ
ಬಣ್ಣಗಳು ಮಾತಾಡಲಿ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಪಿಜ್ಜಿನಿಕ್ಕಾಡು ಇಳಂಗೊ ತಮಿಳಿನ ದಾರ್ಶನಿಕ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ತಮಿಳು ಭಾಷೆಯ ಅವರ ಅಭಿಮಾನ, ಇತಿಹಾಸದ ಅರಿವು, ವೈಜ್ಞಾನಿಕ ಪ್ರಶ್ನೆ ಒಬ್ಬ ಸಾಹಿತಿಗಿರಬೇಕಾದ ಬದ್ಧತೆ, ಚಿಂತನೆ, ಜೀವನ ಪ್ರೀತಿ, ಸಾಮಾಜಿಕ ಕಳಕಳ ಎಲ್ಲವೂ ಅವರ ಸುಂದರ ಕವಿತೆಯಷ್ಟೇ ಮನಸೆಳೆಯುವ ವ್ಯಕ್ತಿತ್ವದ ಪ್ರಧಾನ ಅಂಶಗಳು. ತಮಿಳಿನ ಎಲ್ಲ ಕವಿಗಳಂದ ಗೌರವಿಸಲ್ಪಡುವ, ಪ್ರೀತಿಸಲ್ಪಡುವ ಇಳಂಗೊ ಅವರ ಕವಿತೆಗಳು ಕನ್ನಡದ ಕಾವ್ಯಾಸಕ್ತರಿಗೂ ಇಷ್ಟವಾಗುವುದರಲ್ಲಿ ಅಚ್ಚರಿಯಿಲ್ಲ. ಅವರ ಲೇಖನಿಯಲ್ಲಿ ಯಾವ ಸಿದ್ಧಾಂತ, ನಿಲುವುಗಳ ಹೇರಿಕೆ ಕಂಡುಬರುವುದಿಲ್ಲ. ತಮಿಳಿನ ಧ್ರುವತಾರೆಗಳಾದ 'ತಿರುವಳ್ಳುವರ್', 'ಪೆರಿಯಾರ್' ಅಂತಹವರ ವಿಚಾರಗಳನ್ನು ಹಾಗೂ 'ಸಂಗಂ' ಸಾಹಿತ್ಯವನ್ನೂ ಅತ್ಯಂತ ತಿಳಿಯಾಗಿ ಕವಿತೆಗಳ ಮೂಲಕ ಅಲ್ಲಲ್ಲಿ ಅರ್ಥೈಸುತ್ತಾರೆ. ತಾವು ಕಂಡಿದ್ದನ್ನು, ಓದಿದ್ದನ್ನು, ಅನುಭವಿಸಿದ್ದನ್ನು ಯಾವ ಒತ್ತಡಗಳಿಲ್ಲದೆ ಸರಳವಾಗಿ ಹೇಳುವ ರೀತಿ ಹಾಗೂ ಅತ್ಯಂತ ಕಡಿಮೆ ಪದಗಳಲ್ಲಿ ಕವಿತೆಯನ್ನು ಕಟ್ಟುವ ಇಳಂಗೊ ಅವರ ಕಲೆ ನಮಗೆ ಆಪ್ತವೆನಿಸುತ್ತದೆ. ಇಳಂಗೊ ಅವರ ಬಹಳಷ್ಟು ಕವಿತೆಗಳು ಬದುಕಿನ ಮೂಲಗುರಿ ಅಥವಾ ಬಾಳುವೆಯ ಸಂಪೂರ್ಣತೆಯನ್ನು ಅರಿಯುವ ತತ್ತ್ವವನ್ನೇ ಪ್ರತಿಪಾದಿಸುತ್ತವೆ.
ಒಟ್ಟಾರೆಯಾಗಿ ಇಳಂಗೊ ಅವರ ತಮಿಳಿನ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಅನುವಾದಕರಾದ ಡಾ. ಮಲರ್ ವಿಳಿ ಅವರ ಶ್ರಮ, ಭಾಷಾ ಪಾಂಡಿತ್ಯ ಎದ್ದು ಕಾಣುತ್ತದೆ. ಈ ಕೃತಿಯ ಮೂಲಕ ಇಳಂಗೂ ಅವರ ಹಾಯ್ಕುಗಳನ್ನು ಡಾ.ಮಲರ್ ವಿಳಿ ಅವರ ಮಗಳು ದಿವ್ಯದರ್ಶಿನಿ ಅನುವಾದಿಸಿ ಕನ್ನಡ ಅನುವಾದ ಕ್ಷೇತ್ರಕ್ಕೆ ಹೊಸ ಭರವಸೆಯನ್ನು ಹುಟ್ಟಿಸಿದ್ದಾಳೆ. ಎರಡು ಭಾಷೆಗಳ ನಡುವಿನ ಸಾಹಿತ್ಯ-ಸಮಾಗಮವನ್ನು ಅನುವಾದವೆಂಬ ಸೇತುವೆಯ ಮೂಲಕ ಇವರಿಬ್ಬರೂ ನಮ್ಮನ್ನು ಸಂಪರ್ಕಿಸಿದ್ದಾರೆ. ಇಳಂಗೂ ಕವಿತೆಗಳು ಕನ್ನಡ ಓದುಗರಿಗೆ ಅವಶ್ಯಕವಿತ್ತು ಎಂಬುದು ಈ ಕೃತಿ ಓದಿದ ಮೇಲೆ ಮನವರಿಕೆಯಾಗುತ್ತದೆ. ಈ ಸಂಕಲನದ ಮೂಲಕ ಇಳಂಗೂ ಅವರ ಅಂತಃಸತ್ವವನ್ನು ಅರ್ಥಮಾಡಿಕೊಳ್ಳಬಹುದು. 'ಬಣ್ಣಗಳು ಮಾತಾಡಲಿ' ಸಂಕಲನದ ಮೂಲಕ ಪಿಜ್ಜಿನಿಕ್ಕಾಡು ಇಳಂಗೂ ಅವರು ಕನ್ನಡದರಮನೆಯನ್ನು ಪ್ರವೇಶಿಸುತ್ತಿದ್ದಾರೆ.
Share

Subscribe to our emails
Subscribe to our mailing list for insider news, product launches, and more.