Dr. J. N. Jagannath
ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ
ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ
Publisher -
- Free Shipping Above ₹250
- Cash on Delivery (COD) Available
Pages - 128
Type - Paperback
ಡಾ।। ಜೆ.ಎನ್. ಜಗನ್ನಾಥ್ ಅವರ ಖಜಾನೆ ವ್ಯವಸ್ಥಾಪನೆ/ನಿರ್ವಹಣೆ ಕುರಿತಾದ ಈ ಪುಸ್ತಕ ಕನ್ನಡದಲ್ಲಿ ಒಂದು ವಿಶೇಷ ಪ್ರಯತ್ನವಾಗಿದೆ. ಸಾಮಾನ್ಯರಿಗೂ ಅರ್ಥವಾಗುವಂತೆ ವಿದೇಶೀ ವಿನಿಮಯ, ಖಜಾನೆ ನಿರ್ವಹಣೆಯಂತಹ ವಿಷಯಗಳನ್ನು ತಿಳಿಸುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ. ಜೆ.ಎನ್. ಜಗನ್ನಾಥ್ ಅವರು ಎಂಕಾಂ, ಎಂಬಿಎ, ಎಂಎ, ಸಿಎಐಐಬಿ, ಖಜಾನೆ ವ್ಯವಸ್ಥಾಪನದಲ್ಲಿ ಡಿಪ್ಲೋಮೋ, ಮಾನವ ಸಂಪನ್ಮೂಲ ವ್ಯವಸ್ಥಾಪನದಲ್ಲಿ ಡಿಪ್ಲೋಮೋ ಹಾಗೂ ಫ್ಲಾರಿಡಾದ ವಿಶ್ವವಿದ್ಯಾನಿಲಯದಿಂದ ಖಜಾನೆ ವ್ಯವಸ್ಥಾಪನ ವಿಷಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.
25ವರ್ಷಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು, ಆರು ವರ್ಷಗಳ ಕಾಲ ಖಜಾನೆ ವ್ಯವಸ್ಥಾಪನದ ವಹಿವಾಟು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ನಂತರ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ತರಬೇತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು ತಮ್ಮ ಕಂಪನಿಯ ಬ್ಯಾಂಕಿಂಗ್ ತಂತ್ರಾಂಶದ ಕುರಿತು ತರಬೇತಿ ನೀಡಿದ್ದಾರೆ.
'ಖಜಾನೆ ವ್ಯವಸ್ಥಾಪನ' ಎಂದರೆ ಏನು!? ಬ್ಯಾಂಕು ಸಂಪನ್ಮೂಲಗಳನ್ನು/ ನಿಧಿಗಳನ್ನು, ಅಂತಾರಾಷ್ಟ್ರೀಯ ಅಥವಾ ದೇಶಿಯ ಮಾರುಕಟ್ಟೆಯಲ್ಲಿ ತೊಡಗಿ ಹೇಗೆ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು, ಇನ್ನಿತರ ಆದಾಯದ ಮೂಲಗಳಿಂದ ಹಣಕಾಸಿನ ಕ್ರೋಡೀಕರಣ ಹೇಗೆ!? ಮುಂತಾದ ಸೂಕ್ಷ್ಮ ಮತ್ತು ಸವಾಲುಗಳನ್ನು ಒಡ್ಡುವ ವಿಷಯಗಳ ಕುರಿತಾದ ಮಾಹಿತಿ ಈ ಪುಸ್ತಕದ ಹೂರಣ. ಇದರ ಬಗ್ಗೆ ನೂರಾರು ಪುಸ್ತಕಗಳು ಪ್ರಕಟವಾಗಿದ್ದರೂ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಇರಬಹುದು. ಕನ್ನಡದಲ್ಲಿ ಇವರು ರಚಿಸಿರುವ ಈ ಕೃತಿ ಎಲ್ಲರಿಗೂ ಉಪಯೋಗವಾಗಬಹುದಾದ ಕೈಪಿಡಿ. ಖಜಾನೆ ವ್ಯವಸ್ಥಾಪನೆ ಬಗ್ಗೆ ತಿಳಿದುಕೊಳ್ಳಬಯಸುವವರಿಗಂತೂ ಇದು ದಾರಿದೀಪ. ಯಾವುದಾದರೂ ವಿಶ್ವವಿದ್ಯಾಲಯದ ಪದವಿ ವಿಭಾಗದಲ್ಲಿ ಪಠ್ಯ ಪುಸ್ತಕವಾಗುವ ಎಲ್ಲ ಅರ್ಹತೆ ಈ ಪುಸ್ತಕಕ್ಕೆ ಇದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.
ಶ್ರೀಯುತ ಜಗನ್ನಾಥ್ ಅವರಿಂದ ಇಂತಹ ಪುಸ್ತಕಗಳು ಕನ್ನಡದಲ್ಲಿ ಮತ್ತಷ್ಟು ಬರಲಿ ಎಂಬುದು ನಮ್ಮ ಆಶಯ. ಅವರಿಗೆ ಅಭಿನಂದನೆಗಳು.
-ಸುನೀಲ್ ಹಳೆಯೂರು
Share
Subscribe to our emails
Subscribe to our mailing list for insider news, product launches, and more.