Shrinivasa murthy N. Sundralli
Publisher - ಸಾವಣ್ಣ ಪ್ರಕಾಶನ
Regular price
Rs. 180.00
Regular price
Rs. 180.00
Sale price
Rs. 180.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮನುಷ್ಯ ಮೂರ್ಖನಾಗಿದ್ದಾನೆ. ಪ್ರಾಣಿಗಳಂತೆ ಬದುಕುವುದನ್ನು ಮರೆತಿದ್ದಾನೆ. ಸಂಬಂಧಗಳನ್ನು ನಿಭಾಯಿಸುವಲ್ಲಿ ಸೋಲುತ್ತಿದ್ದಾನೆ. ಬಣ್ಣದ ಬದುಕಿಗೆ ಮಾರು ಹೋಗಿದ್ದಾನೆ. ಬದುಕನ್ನು ಸಂತೆ ಮಾಡಿಕೊಂಡು ನಿದ್ರಾಹೀನನಾಗಿದ್ದಾನೆ, ತನ್ನ ಹೆಂಡತಿಯ ಹೊರತಾಗಿ ಮಿಕ್ಕೆಲ್ಲರಲ್ಲೂ ಸೌಂದರ್ಯ ಕಾಣುತ್ತಿದ್ದಾನೆ. ದ್ವೇಷವನ್ನು ಕೊಟ್ಟು ಪ್ರೀತಿಯನ್ನು ನಿರೀಕ್ಷಿಸುತ್ತಿದ್ದಾನೆ. ಬೇವಿನಿಂದ ಬೇವು ಸಿಗುತ್ತದೆಯೇ ಹೊರತು ಮಾವು ಅಲ್ಲ, ಎಂಬುದು ಗೊತ್ತಿದ್ದರೂ ಆತ ಮಾತ್ರ ಮಾವನ್ನೇ ನಿರೀಕ್ಷಿಸುತ್ತಿದ್ದಾನೆ. ಗೆದ್ದೆತ್ತಿನ ಬಾಲ ಹಿಡಿಯಲು ಓಡುತ್ತಿದ್ದಾನೆ. ಸೋತವನಿಗೆ ಸಾಂತ್ವನ ಹೇಳಲು ಪುರುಸೊತ್ತೇ ಇಲ್ಲವಾಗಿದೆ. ಹತ್ತಾರು ತಲೆಮಾರುಗಳು ಕೂತುಣ್ಣುವಷ್ಟು ಕೂಡಿಡುತ್ತಿದ್ದಾನೆ, ಸರಳತೆ ಮರೆತು ದುರಿತ ಕಾಲದಲ್ಲೂ ದುಬಾರಿಯಾಗಿದ್ದಾನೆ.
''ಸರಳತೆಯೇ ಅತ್ಯಂತ ಉನ್ನತ ಸಂಗತಿ'' ಎನ್ನುತ್ತಾನೆ ಲಿಯೋನಾರ್ಡೋ ಡಾವಿಂಚಿ, ಮನುಷ್ಯ ಕಳೆದುಕೊಳ್ಳಲು ಸಾಧ್ಯವಿರುವುದಲ್ಲವನ್ನೂ ಕಳೆದುಕೊಂಡು ಸರಳವಾಗಬೇಕು. ಕೊಡಲು ಸಾಧ್ಯವಿರುವುದೆಲ್ಲವನ್ನೂ ಕೊಟ್ಟು ಹಗುರಾಗಿಬಿಡಬೇಕು, ಬೆತ್ತಲೆಯಾಗಬೇಕು. ಬೆತ್ತಲಾಗುವುದು ಎಂದರೆ ಎಲ್ಲವನ್ನೂ ತೊರೆದು, ಎಲ್ಲವನ್ನೂ ಪಡೆದುಕೊಳ್ಳುವುದು, ಭೌತಿಕ ವಸ್ತುಗಳನ್ನು ತೊರೆದು ಅರಿವನ್ನು ಪಡೆದುಕೊಳ್ಳುವುದು, ಎಲ್ಲವನ್ನೂ ಕಳೆದುಕೊಂಡ ಸಿದ್ದಾರ್ಥ, ಮತ್ತೆಲ್ಲವನ್ನೂ ಪಡೆದು ಬುದ್ಧನಾದ೦ತೆ, ಅಜ್ಞಾನವನ್ನು ತೊರೆದು ಜ್ಞಾನಿಯಾಗಬೇಕು. ಭೌತಿಕ ವಸ್ತುಗಳಿಂದಾಚೆಗೊಂದು ಬದುಕು ಇದೆ. ಅದು ಬೆತ್ತಲೆಯಾಗಿದೆ ಮತ್ತು ಸುಂದರವಾಗಿದೆ.
ಅಹಂಕಾರ, ದ್ವೇಷ, ಮತ್ಸರ, ಈರ್ಥೈ, ಸ್ವಾರ್ಷೈ, ಕಪಟ ಹೀಗೆ ಈ ಎಲ್ಲವನ್ನೂ ಖಾಲಿ ಮಾಡಿಕೊಂಡು ಬೆತ್ತಲಾದರೆ ಮಾತ್ರ ಬದುಕು ಸ್ವಚ್ಛಂದವಾಗಬಲ್ಲದು, ಒಮ್ಮೆ ಈ ಬೆತ್ತಲೆ ಬದುಕಿನ ಒಳ ಹೊಕ್ಕುಬಿಡಿ. ಪ್ರೇಮತ್ವ, ವ್ಯಕ್ತಿತ್ವ, ಅಧ್ಯಾತ್ಮ ಹೀಗೆ ಏನಾದರೂ ಒಂದಿಷ್ಟು ಸಿಕ್ಕರೆ ಬಾಚಿಕೊಳ್ಳಿ. ಬದುಕು ಧನ್ಯೋಸ್ಮಿ,