Skip to product information
1 of 1

J. Krishnamurthy

ಬದುಕಿನ ಕಡೆಗೆ

ಬದುಕಿನ ಕಡೆಗೆ

Publisher - ವಸಂತ ಪ್ರಕಾಶನ

Regular price Rs. 150.00
Regular price Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

ನಾವು ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಶಕ್ತಿಯನ್ನು ವ್ಯಯಿಸಿದ್ದೇವೆ, ದೈಹಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಹೀಗೆ ನಮ್ಮ ಎಲ್ಲ ಶಕ್ತಿಯೂ ವ್ಯಯವಾಗಿದೆ. ಆದರೂ ಮನುಷ್ಯರಾದ ನಾವು ನಮ್ಮ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗಿಲ್ಲ. ಪರಿಹರಿಸಿಕೊಳ್ಳಲಾದೀತೆ? ಅದಕ್ಕೆ ಬೇರೆ ಯಾವುದಾದರೂ ಮಾರ್ಗವಿದೆಯೆ? ಇದ್ದರೆ ಅದು ಯಾವುದು? ಈ ಪ್ರಶ್ನೆಗಳ ಬಗೆಗೆ 'ಕೃಷ್ಣಮೂರ್ತಿಯವರ ವಿಚಾರಗಳನ್ನು ಪ್ರಸ್ತುತಪಡಿಸುವ ಮಸ್ತಕ 'ಬದುಕಿನ ಕಡೆಗೆ' (Meeting life).

ಈ ಪುಸ್ತಕದಲ್ಲಿರುವ ಲೇಖನಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿರುವ ಹದಿನಾರು ಚಿಕ್ಕ ಚಿಕ್ಕ ಲೇಖನಗಳು ಕೃಷ್ಣಮೂರ್ತಿಯವರು ಹೇಳಿ ಬರೆಸಿದವು. ಪ್ರಕೃತಿ ವರ್ಣನೆಯೊಂದಿಗೆ ಪ್ರಾರಂಭವಾಗುವ ಇಲ್ಲಿನ ಪ್ರತಿಯೊಂದು ಲೇಖನವೂ ಓದುಗರನ್ನು ಜೀವನಕ್ಕೆ ಸಂಬಂಧಿಸಿದ ಒಂದು ಗಂಭೀರ ವಿಚಾರದತ್ತ ಕರೆದೊಯ್ಯುತ್ತವೆ. ಎರಡನೆಯ ಭಾಗದಲ್ಲಿ ಕೃಷ್ಣಮೂರ್ತಿಯವರು ತಮ್ಮ ಉಪನ್ಯಾಸದ ನಂತರ ಶೋತೃಗಳ ಪ್ರಶ್ನೆಗಳಿಗೆ ನೀಡಿದ ಉತ್ತರಗಳಿವೆ. ಮೂರನೆಯ ಭಾಗದಲ್ಲಿ ಅವರು ಸ್ವಿಝರ್ಲಂಡ್, ಭಾರತ, ಇಂಗ್ಲೆಂಡ್ ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಾಡಿದ ಭಾಷಣಗಳಿವೆ. ಇದೊಂದು ವೈವಿಧ್ಯಮಯ ವಿಷಯಗಳಿಂದ ಕೂಡಿದ ಶ್ರೇಷ್ಠಮಟ್ಟದ ಕೃತಿ, ಜೀವನದ ಗುರಿಯೇನು ಎಂದು ತಿಳಿಯಬಯಸುವ ಎಲ್ಲರೂ ಓದಬೇಕಾದ ಕೃತಿ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)