Amaresha Giniwara
Publisher -
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಅಮರೇಶ ಗಿಣಿವಾರ ಅವರ ಕತೆಗಳ ಎರಡನೆಯ ಸಂಕಲನ 'ಬಾಂಗ್ಲಾದ ಹಕ್ಕಿಗಳು'. ಮೊದಲ ಸಂಕಲನ 'ಹಿಂಡೆಕುಳ್ಳು" ಮೂಲಕ ಅವರು ಹುಟ್ಟಿಸಿದ್ದ ಭರವಸೆಯು ಹುಸಿಯಾಗಿಲ್ಲ. ಅದನ್ನು ಈ ಸಂಕಲನದ ಕತೆಗಳು ಸಾಬೀತುವಡಿಸುತ್ತವೆ. ಒಂದಕ್ಕಿಂತ ಮತ್ತೊಂದು ವಿಭಿನ್ನ ಕತೆಗಳನ್ನು ಈ ಸಂಕಲನ ಒಳಗೊಂಡಿದೆ. ಈ ವೈವಿಧ್ಯ ಕೇವಲ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಅದು ಕತೆ ಹೇಳಲು ಬಳಸಿದ ತಂತ್ರ ಹಾಗೂ ಭಾಷೆಯ ಬಳಕೆಗೂ ವಿಸ್ತರಿಸಿಕೊಂಡಿದೆ.
ಪ್ರಭುತ್ವದ ಕ್ರೌರ್ಯವು ಸಾಮನ್ಯರ ಮೇಲೆ ಉಂಟುಮಾಡುವ ಪರಿಣಾಮ, ಅದರಿಂದ ಸೃಷ್ಟಿಯಾಗುವ ಅಸಹಾಯಕತೆಗಳನ್ನು ಈ ಸಂಕಲನದ ಕತೆಗಳು ದಾಖಲಿಸುತ್ತವೆ. ವ್ಯವಸ್ಥೆ-ಅಧಿಕಾರ ಕೇಂದ್ರಗಳ ದೌರ್ಜನ್ಯ, ದುರ್ಬಲರ ಹತಾಶಗಳು ಕತೆಯಾಗಿವೆ. ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧಗಳಲ್ಲಿ ಬಿಟ್ಟಿರುವ ಬಿರುಕುಗಳನ್ನು ಸೊಗಸಾದ ರೀತಿಯಲ್ಲಿ ಅಮರೇಶ ಕಟ್ಟಿಕೊಟ್ಟಿದ್ದಾರೆ. ಒಂದೇ ಸಿಟ್ಟಿಂಗ್‌ನಲ್ಲ ಓದಿ ಮುಗಿಸಬಹುದಾದ ಸಣ್ಣ/ಅತಿಸಣ್ಣ ಕತೆಗಳು ಕಟ್ಟಿರುವ ಕ್ರಮದ ಕಾರಣಕ್ಕಾಗಿ ಗಮನ ಸೆಳೆಯುತ್ತವೆ. ಅಮರೇಶ ಬಳಸಿರುವ ಭಾಷೆ ಸೊಗಸಾಗಿದೆ. ಕತೆಗಳ ಮಧ್ಯೆ ಅಲ್ಲಲ್ಲಿ ಬರುವ ಕವಿತೆಗಳ ಸಾಲಿನಂತಹ ವಾಕ್ಯಗಳು ಮುದ ನೀಡದೆ ಇರವು. ಕತೆಯಲ್ಲಿ ಕುತೂಹಲ ಹುಟ್ಟಸಿ, ಉಳಿಸಿ, ಬೆಳೆಸಿ ತಿರುವುಗಳ ಸೊಗಸು ತೋರಿಸಿ, ಅಚ್ಚರಿ ಬೆರಗು ಮೂಡಿಸುತ್ತಾರೆ. ಸಣ್ಣಕತೆಗಳ ಗುಣ ವಿಶೇಷಗಳ ಜೊತೆ ಭಾವಗೀತಾತ್ಮಕತೆಯೂ ಬೆರೆತಿರುವುದು ವಿಶೇಷ.
-ದೇವು ಪತ್ತಾರ