Skip to product information
1 of 1

G. R. Parimala Rao

ಬಾಲ ಕಥಾ ಪಕ್ಷಿ ಪ್ರಪಂಚ

ಬಾಲ ಕಥಾ ಪಕ್ಷಿ ಪ್ರಪಂಚ

Publisher - ವಸಂತ ಪ್ರಕಾಶನ

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 105

Type - Paperback

ಶ್ರೀಮತಿ ಪರಿಮಳಾ ರಾವ್ ಅವರು ಸಾರಸ್ವತ ಲೋಕದಲ್ಲಿ ಅರ್ಧಶತಮಾನದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಹುಮುಖ ಪ್ರತಿಭೆಯುಳ್ಳ ಇವರ ಹವ್ಯಾಸಗಳು ಹತ್ತು ಹಲವಾರು. ಚಿತ್ರಕಲೆ, ಸಾಹಿತ್ಯದ ನಾನಾ ಪ್ರಕಾರಗಳಾದ ಕವಿತೆ, ಹನಿಗವನ, ಸಣ್ಣಕಥೆಗಳು, ಮಕ್ಕಳ ಕವಿತೆ, ಕಥೆ, ಕಾದಂಬರಿಗಳು, ಜಪಾನಿ ಮಾದರಿಯ ಹೈಕು, ಝನ್‌ಕತೆಗಳು, ಶರಣ ಸಾಹಿತ್ಯ ಹೀಗೆ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ತಮ್ಮ 80ರ ಹಿರಿಯ ವಯಸ್ಸಿನಲ್ಲಿ ಸಾಹಿತ್ಯಾಸಕ್ತಿ, ಉತ್ಸಾಹ ಉಳಿಸಿಕೊಂಡು ಮಕ್ಕಳಿಗಾಗಿ ಬಾಲಕಥಾ ಪಕ್ಷಿ ಪ್ರಪಂಚ, ಬಾಲಕಥಾ ಪ್ರಕೃತಿ ಪ್ರಪಂಚದ ಬಿಡಿಕಥೆಗಳನ್ನು ಬರೆದಿದ್ದಾರೆ.

ದ್ವಿಭಾಷಾಲೇಖಕಿಯಾಗಿ ಆಂಗ್ಲಭಾಷೆಯಲ್ಲಿ ನಾಲ್ಕು ಹೈಕು ಕೃತಿಗಳನ್ನು ಬರೆದಿದ್ದಾರೆ. ಇವು ಸ್ವದೇಶ ಹಾಗೂ ಇಂಗ್ಲೆಂಡ್, ಅಮೆರಿಕದಲ್ಲಿ ಮನ್ನಣೆ ಪಡೆದು ಪ್ರಸಿದ್ಧಿಯಾಗಿವೆ. ಅಭಿಜಾತ ಕಲಾವಿದೆ ಆದ ಇವರು ತಮ್ಮ ಹೈಕುಗಳಿಗೆ ಚಿಕಣಿ ಚಿತ್ರಗಳನ್ನು ಬರೆದು ಕಾವ್ಯ ಕುಂಚ ಜುಗುಳಬಂದಿ ಪ್ರದರ್ಶನಗಳನ್ನು ದೇಶ, ವಿದೇಶಗಳಲ್ಲಿ ಪ್ರದರ್ಶಿಸಿ ಮೆಚ್ಚಿಗೆ ಪಡೆದಿದ್ದಾರೆ. ಇವರ ಕೃತಿಗಳಿಗೆ ಸಾಹಿತ್ಯ ಲೋಕದಲ್ಲಿ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ. ಇವರ ಆಂಗ್ಲ ಹೈಕುಗಳಿಗೆ ಲಂಡನ್ ಹೈಕು ಪತ್ರಿಕೆಯಲ್ಲಿ ಸ್ಟಿಂಗ್ ಅವಾರ್ಡ್ ಸಂದಿದೆ. ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾರಸ್ವತ ಲೋಕವನ್ನು ಸಂಪನ್ನಗೊಳಿಸಿರುವ ಯಶಸ್ಸು, ಕೀರ್ತಿ ಇವರದು.
View full details