Vinod Kumar B.
ಆಟೋ ರಾಜ
ಆಟೋ ರಾಜ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
"ಆಟೋ ರಾಜ' ಬೆಚ್ಚನೆಯ ಅಪ್ಪುಗೆಯಲ್ಲಿ, ಸೇವೆಯ ಆತ್ಮ ದಯೆಯ ಮೂಲವೇ ಆಗಿರುವ ಕರುಣಾಮಯಿ: ರಾಜನ ಸೇವಾಗಾಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ಸಹೋದರ ವಿನೋದರ ಈ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ. ರಾಜನೆಂಬ ಸೇವಾಸ್ಥನ ಈ ಸಾಹಸ ಅರ್ಥವಾಗುವುದು, ಆತ್ಮ ಸಂವೇದನೆಯುಳ್ಳ ವಿನೋದ್‌ರಂತಹ ಬರಹಗಾರರಿಗೆ ಮಾತ್ರ ನಿಜಕ್ಕೂ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದ ವಿನೋದ್‌ರ ನಿರ್ಧಾರ ಅದರಲ್ಲಿರುವ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ. ಆಟೋ ರಾಜನ ಕಥೆ ಅತ್ಯಂತ ಆಸಕ್ತಿದಾಯಕ ಜೊತೆಗೆ ಸ್ಫೂರ್ತಿದಾಯಕವೂ ಹೌದು. ಮಾನವೀಯತೆಯ ಸಂಕೇತ ಈ ಪುಸ್ತಕ.
ದೇವರಲ್ಲಿ ಹರಕೆ ಹೊತ್ತು ಹಟ್ಟಿದ ಸುಪುತ್ರ ಕೇವಲ ಹೆತ್ತವರಿಗೆ ಮಾತ್ರವಲ್ಲ ಅನೇಕ ನೊಂದ ಜೀವಿಗಳಿಗೆ ಆಸರೆಯಾಗಿ ಜಗಕ್ಕೆ ಮಾದರಿಯಾಗಿದ್ದಾರೆ. ಶ್ರೀ ವಿನೋದ್ ಕಟ್ಟಿಕೊಟ್ಟಿರುವ ಈ ಸುಂದರ ತೋಟದಲ್ಲಿರುವ ಪ್ರತಿ ಹೂವಿನ ಕಥೆಯೂ ಬದುಕಿನ ಮತ್ತೊಂದು ಕರಾಳ ಮುಖದ ಪರಿಚಯ ಮಾಡಿಕೊಡುತ್ತದೆ. ತನ್ನ ಹೆತ್ತವರನ್ನು, ತಾನು ಹೆತ್ತವರನ್ನು, ಒಡ ಹುಟ್ಟಿದವರನ್ನ ಸಂಗಾತಿಗಳನ್ನ, ಬಂಧು ಬಾಂಧವರನ್ನ ಬಿಟ್ಟು ಒಂಟಿಯಾಗಿ, ಅನಾಥರಾಗಿ ಬಾಳಬೇಕಾದ ಜೀವಗಳಿಗೆ ಆಶ್ರಯತಾಣವಾಗಿ ನಿಂತ ರೂಪುಗೊಂಡ... ಕಥೆಯನ್ನು ಮನಮುಟ್ಟುವಂತೆ ಬರೆದು ಕಟ್ಟಿ ಕೊಟ್ಟಿದ್ದಾರೆ. ಸಹೋದರ ವಿನೋದ್, ಸಂಬಂಧಗಳ ನಡುವಿನ ಬಂಧ ಛಿದ್ರಗೊಂಡು "ಮನುಷ್ಯನಷ್ಟು ಕ್ರೂರಿ" ಎನ್ನುವ ಬೇಸರ ಮೂಡುವಷ್ಟರಲ್ಲೇ ಆಟೋ ರಾಜನ ಯಶೋಗಾಥೆಯನ್ನು ಹೇಳಿ, “ದ ಕರುಣೆಯ ಪ್ರತಿಬಿಂಬ ಮಾನದ" ಎನ್ನುವುದನ್ನು ಸರಳವಾಗಿ ನಿರೂಪಿಸುತ್ತಾರೆ ವಿನೋದ್ ಸ್ವಾಭಿಮಾನಿ ಹೆಣ್ಣು ಸುಷ್ಮಾ ಮೂಕಿಯಾಗಿ ಅನಾಥೆಯೆಂದು ಸ್ವಯಂ ಘೋಷಿಸಿಕೊಂಡಿದ್ದು ಮತ್ತು ಬುದ್ಧಿಮಾಂದ್ಯ ತಾಯಿಯ ಕಂದನನ್ನು ಸಲಹುತ್ತಿರುವುದು ಇಂತಹ ಅನೇಕ ಕಥೆಗಳು ಆಟೋ ರಾಜನ ಮಾನವೀಯತೆಯನ್ನು ಪರಿಚಯಿಸುತ್ತದೆ. ಇಷ್ಟಲ್ಲದೆ ಆಟೋ ರಾಜನ ಸೇವೆಗೆ ಮೆಚ್ಚಿ ಶ್ಲಾಘಿಸಿದ ಅನೇಕ ಗಣ್ಯರನ್ನು ಸಂದರ್ಶಿಸಿ ಆ ವಿವರಗಳನ್ನು ಈ ಪುಸ್ತಕದಲ್ಲಿ ಸೇರಿಸಿ ಕಥೆಯ ಪರಿಪೂರ್ಣತೆಯನ್ನು ಕಾಯ್ದುಕೊಂಡಿದ್ದಾರೆ. ಪುಸ್ತಕವನ್ನು ಓದುವ ಪ್ರಜ್ಞೆಯು ಕಡಿಮೆಯಾಗುತ್ತಿರುವ ಇಂದಿನ ಯುಗದಲ್ಲಿ, ಉತ್ಸಾಹಿ ಯುವಕನೊಬ್ಬ ಆಟೋ ರಾಜರಂತಹ ಸಮಾಜ ಸೇವಕನ ನಿಸ್ವಾರ್ಥ ಸೇವೆಯನ್ನು ಆಳವಾಗಿ ಅಧ್ಯಯನ ನಡೆಸಿ, ತನ್ನ ಬರವಣಿಗೆಯ ಮೂಲಕ ಹಿಡಿದಿಟ್ಟಿರುವ ರೀತಿ ಅತ್ಯಂತ ಪ್ರಶಂಸನೀಯ ಮುಂದಿನ ಯುವ ಪೀಳಿಗೆಗೆ ಹಾಗೂ ಪ್ರಸ್ತುತ ಎಲ್ಲಾ ವ್ಯಕ್ತಿಗಳಿಗೂ, ಸಮಾಜ ಸೇವೆಯತ್ತ ಮುಖಮಾಡುವಂತೆ ಪ್ರೇರೇಪಣೆ ನೀಡುವ ಯುದ ಬರಹಗಾರ ಶ್ರೀ ವಿನೋದ್ ಕುಮಾರ್ ಅವರ ಕಾರ್ಯ ಸಾರ್ಥಕವಾಗಲಿ, ತಾಯಿ ಶಾರದೆ ನನ್ನ ಪ್ರೀತಿಯ ಸಹೋದರನಿಗೆ ಇಂತಹ ಅನೇಕ ಎಲೆ ಮರೆ ಕಾಯಿಯಂತಿರುವ ವ್ಯಕ್ತಿಗಳ ಕಥೆ ಬರೆಯಲು ಪ್ರೇರೇಪಿಸಲಿ, ಸಕಲ ಸಿದ್ಧಿಗಳನ್ನು ಕರುಣಿಸಲಿ. ಈ ಪುಸ್ತಕ ಕರುನಾಡಿನ ಮನೆ ಮನೆಗೂ ತಲುಪಲಿ ಎನ್ನುವುದು ನನ್ನ ಆಶಯ ಶುಭವಾಗಲಿ.
-ಶ್ರೀಮತಿ ಎಸ್, ಲಲಿತಾ ಚಲಂ
ಪ್ರಕಾಶಕರು - ಸಾಹಿತ್ಯ ಲೋಕ ಪ್ರಕಾಶನ
Share
Subscribe to our emails
Subscribe to our mailing list for insider news, product launches, and more.