Sapna Book House
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಷೇಕ್ಸ್‌ಪಿಯರ್‌ನ 'ಅಥೆನ್ಸ್‌ನ ಟೈಮನ್' (ಟೈಮನ್ ಆಫ್ ಅಥೆನ್ಸ್) ತನ್ನ ಸಂಪತ್ತನ್ನು ತನ್ನ ಗೆಳೆಯರ ಮೇಲೆ ಖರ್ಚುಮಾಡುತ್ತ ಅದ್ದೂರಿ ಜೀವನ ನಡೆಸಿದ್ದ ಅಥೆನ್ಸ್‌ನ ಶ್ರೀಮಂತ ನಿವಾಸಿಯ ಕಥೆಯಾಗಿದೆ. ಇದರ ಪರಿಣಾಮದಿಂದಾಗಿ ಅವನ ಸಂಪತ್ತು ಕರಗಿಹೋದಾಗ ತನ್ನ ಗೆಳೆಯರನ್ನು ಸಹಾಯಕ್ಕಾಗಿ ಕೇಳಿಕೊಳ್ಳುತ್ತಾನೆ. ಅವರಲ್ಲಿ ಯಾರೂ ಹಾಗೆ ಸಹಾಯಮಾಡಲು ಮುಂದೆ ಬರದಿದ್ದಾಗ ಟೈಮನ್ ದಿಗ್ಭ್ರಮೆಗೊಳ್ಳುತ್ತಾನೆ. ಇದರಿಂದಾಗಿ ಅವನ ಮನಸ್ಸು ಮಾನವ ಕೋಟಿಯ ಬಗ್ಗೆ ದ್ವೇಷದಿಂದ ತುಂಬಿಕೊಂಡಿತ್ತು. ಅವನು ಏಕಾಂತವಾಸಿಯಂತೆ ಜೀವಿಸಲು ತೀರ್ಮಾನಿಸಿದ್ದ.
ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದೊಳಗೆ ಪ್ರವೇಶಿಸಲು ಸಹಾಯವಾಗಲೆಂದು ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು ಅಥವಾ ಮಕ್ಕಳನ್ನು ನಾಟಕದೊಳಗೆ ಪ್ರವೇಶಗೊಳಿಸಲು ಇಷ್ಟಪಡುವ ತಂದೆತಾಯಿಯರು ಮಕ್ಕಳಿಗೆ ಓದಿ ಹೇಳಬಹುದು. ಇದನ್ನು ಶಿಕ್ಷಕರು ಕೂಡಾ ತರಗತಿಯ ಸಾಧನಸಂಪತ್ತಾಗಿ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವೈನೋದಿಕ ಶೈಲಿಯ ಸಚಿತ್ರ ವಿವರಣೆಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಸರ ಹಿಡಿಯುವುವು ಮತ್ತು ಅವರ ಓದಿನ ನೈಪುಣ್ಯತೆಗಳನ್ನು ವಿಕಸನಗೊಳಿಸುವುವು.
