Ashwini Sunil
ಅತೀತಭವ
ಅತೀತಭವ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 104
Type - Paperback
ಬದುಕಿನಲ್ಲಿ ಅಚಾನಕ್ಕಾಗಿ ಘಟಿಸುವ ಸಂಗತಿಗಳಷ್ಟೇ ಕತೆಯಾಗಬಲ್ಲವು ಎಂದು ನಂಬಿರುವಂತೆ ಬರೆಯುವ ಅಶ್ವಿನಿ ಸುನಿಲ್ ಅವರ ಕತೆಗಳಿಗೆ ಅಸಾಧ್ಯ ವೇಗವಿದೆ. ಅವರು ಯಾವುದೇ ಕತೆಯನ್ನು ಅವಶ್ಯಕತೆಯಿಂದ ಹೆಚ್ಚು ಹಿಗ್ಗಿಸುವುದಿಲ್ಲ. ಥಟ್ಟನೆ ಹೇಳಿ ಮುಗಿಸುವುದು ಅವರಿಗೆ ಕರಗತ. ಹೀಗಾಗಿಯೇ ಈ ಸಂಕಲನದ ಕತೆಗಳು ಕಿರುಚಿತ್ರಗಳಂತೆ ಕಣ್ಮುಂದೆ ಹಾದುಹೋಗುತ್ತವೆ. ಅತ್ಯುತ್ತಮ ಚಿತ್ರಕ ಶಕ್ತಿ, ಒಂಚೂರು ಲಹರಿ, ಅನುಭವದಿಂದ ಹೆಕ್ಕಿದ ಒಂದೆರಡು ಸನ್ನಿವೇಶ ಮತ್ತು ಅರ್ಧಕೇಜಿ ಕಲ್ಪನೆ ಬೆರೆಸಿರುವ ಈ ಕತೆಗಳನ್ನು ನಾನು ಓದುತ್ತಾ ತಾರುಣ್ಯದ ದಿನಗಳಿಗೆ ಮರಳಿದ್ದೇನೆ. ಇಲ್ಲಿರುವ ಹದಿನೈದು ಕತೆಗಳೂ ನಮಗೆ ಅಪ್ಪಟ ಕತೆಗಳನ್ನು ಓದಿದ ಅನುಭವ ಕೊಡುತ್ತವೆ. ದಕ್ಷಿಣ ಕನ್ನಡದ ಭಾಷೆಯನ್ನು ಅಲ್ಲಲ್ಲಿ ಕೊತ್ತಂಬರಿ ಸೊಪ್ಪಿನಂತೆ ಉದುರಿಸಿ, ಸಣ್ಣ ರೋಚಕತೆಯನ್ನು ರುಚಿಗೆ ತಕ್ಕಷ್ಟು ಬೆರೆಸಿ, ಹದವಾದ ಭಾಷೆಯ ಕೆಲವು ಕತೆಗಳನ್ನು ಅವರು ವಿಷಾದದ ಉರಿಯಲ್ಲಿ ಬೇಯಿಸಿದ್ದಾರೆ. ಮತ್ತೆ ಕೆಲವು ಕತೆಗಳಿಗೆ ಲವಲವಿಕೆಯ ತುಪ್ಪ ಸುರಿದಿದ್ದಾರೆ. ಒಂದಷ್ಟು ಕತೆಗಳಿಗೆ ರೋಮಾಂಚನದ ನಿಂಬೆಹಣ್ಣು ಹಿಂಡಿದ್ದಾರೆ. ಅಶ್ವಿನಿ ಸುನಿಲ್ ಅವರ ಕತೆಗಳ ರುಚಿ ಹತ್ತಲು ದ್ರೋಹ ಎಂಬ ಕತೆಯೇ ಸಾಕು. ಮಂಗಳೂರು ಪರಿಸರ, ಬಡತನದ ಬದುಕು, ಗಂಡಹೆಂಡಿರ ಜಗಳದ ಜತೆಗೇ ಈ ಕತೆಯಲ್ಲಿ ಹಳ್ಳಿಯ ಕ್ಷುದ್ರತೆಯೂ ಕಾಣಿಸಿಕೊಳ್ಳುತ್ತದೆ. ಈಗಷ್ಟೇ ಕತೆಗಳನ್ನು ಬರೆಯಲು ಆರಂಭಿಸಿರುವ ಅಶ್ವಿನಿ ಅವರ ಈ ಕತೆಗಳು ಅವರು ಬೆಳೆಯಬಹುದಾದ ಎತ್ತರವನ್ನು ತೋರುತ್ತವೆ. ಕತೆಗಳನ್ನು ಪಳಗಿಸುವ ಅವರ ಚಾಕಚಕ್ಯತೆಯ ಜತೆಗೇ ಗಾಢ ಅನುಭವಗಳೂ ಅವರ ಕಥಾ ಸಂವೇದನೆಯನ್ನು ರೂಪಿಸಲಿ ಎಂದು ಹಾರೈಸುತ್ತೇನೆ.
-ಜೋಗಿ
Share
Subscribe to our emails
Subscribe to our mailing list for insider news, product launches, and more.