Skip to product information
1 of 1

Dr. C. R. Chandrashekar

ಅರ್ಥಪೂರ್ಣ ಬದುಕು ಸುಖ-ಸಂತೋಷ ಬೇಕೇ? ದುಃಖ-ದುಮ್ಮಾನ ಬೇಡವೇ?

ಅರ್ಥಪೂರ್ಣ ಬದುಕು ಸುಖ-ಸಂತೋಷ ಬೇಕೇ? ದುಃಖ-ದುಮ್ಮಾನ ಬೇಡವೇ?

Publisher - ಸಪ್ನ ಬುಕ್ ಹೌಸ್

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 78

Type - Paperback

ಹುಟ್ಟಿದವರು ಸಾವು ಬರುವವರೆಗೆ ಬದುಕಲೇ ಬೇಕು. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ನಡುವೆ ಬದುಕು ಒಂದು ವಾಸ್ತವ (Life is a reality) ಪ್ರಾಥಮಿಕ ಅಗತ್ಯಗಳಾದ ಆಹಾರ-ನಿದ್ರೆ-ಮೈಥುನಗಳನ್ನು ಪೂರೈಸಿಕೊಳ್ಳುವುದು ಬದುಕು. ಮದುವೆಯಾಗಿ ಮಕ್ಕಳನ್ನು ಪಡೆದು ಅವರನ್ನು ಪಾಲಿಸಿ ಪೋಷಿಸಿ-ವಿದ್ಯೆಕೊಟ್ಟು ಅವರು ಸ್ವಾವಲಂಬಿಗಳನ್ನಾಗಿ ಮಾಡುವುದು ಬದುಕು. ಜೀವನದ ಇತರ ಅಗತ್ಯಗಳಾದ ಸಂಬಂಧಗಳ ನಿರ್ವಹಣೆ, ಸ್ಥಾನಮಾನ, ಅಧಿಕಾರ- ಸಂಪತ್ತಿನ ಗಳಿಕೆ ಕುಟುಂಬ ಮತ್ತು ಸಾಮಾಜಿಕ ಪಾತ್ರಗಳ ನಿರ್ವಹಣೆ, ಬದುಕಿಗೆ ಒಂದು ಅಥವಾ ಹೆಚ್ಚಿನ ಗುರಿಗಳನ್ನಿಟ್ಟುಕೊಂಡು ಅವನ್ನು ಸಾಧಿಸುವುದೂ ಬದುಕಿನ ಭಾಗಗಳೇ, ಬದುಕು ಅರ್ಥಪೂರ್ಣವಾಗಲು ಇಷ್ಟು ಸಾಕೆ? ಏಕೆ ಬದುಕು? ಬದುಕಿನ ಗುರಿ ಸುಖ ಪಡುವುದೇ ಸುಖ ಎಂದರೇನು? ಯಾವ ಯಾವ ಚಟುವಟಿಕೆಯಿಂದ ನಮಗೆ ಸುಖಾನುಭವವಾಗುತ್ತದೆ? ಬದುಕಿನಲ್ಲಿ ಬೇಡವೆಂದರೂ ಬರುವ ಕಷ್ಟ ಕೋಟಲೆಗಳು, ಸೋಲು, ನಿರಾಶೆಗಳು, ಲಾಭ ನಷ್ಟಗಳು, ಸಂಬಂಧಗಳಲ್ಲಿನ ಏರುಪೇರುಗಳು ರೋಗರುಜಿನಗಳು ತರುವ ದುಃಖ ದುಮ್ಮಾನ ಒತ್ತಡಗಳನ್ನು ನಿಭಾಯಿಸುವ ಪರಿಹೇಗೆ? ಕಷ್ಟನಷ್ಟ ನೋವುಗಳ ಸಮ್ಮುಖದಲ್ಲೂ 'ಸುಖ'ವಾಗಿರಲು ಸಾಧ್ಯವೇ, ಸುಖ ದೈಹಿಕ ರೂಪದ್ದೇ ಮಾನಸಿಕ ರೂಪದ್ದೇ, ಸುಖ-ದುಃಖಗಳು ನಮ್ಮ ಕರ್ಮಫಲವೇ, ಇತರರ ಕೊಡುಗೆಗಳೇ, ದೇವರು, ಅತಿಮಾನವ ಶಕ್ತಿ, ಪೂರ್ವಜನ್ಮದ ಕರ್ಮಗಳು ಗ್ರಹಗತಿಗಳು, ಅದೃಷ್ಟ-ದುರಾದೃಷ್ಟಗಳ ಕೊಡುಗೆಯೇ? ಬದುಕು ಅರ್ಥಪೂರ್ಣವಾಗಲು ಸುಖ-ದುಃಖಗಳ ಕೊಡುಗೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ. ಓಡಿ ನೋಡಿ, ಸುಖ ಚಂದ, ದುಃಖದ ನಂತರ ಬರುವ ಸುಖ ಮತ್ತೂ ಚಂದ, ಸದಾ ಸುಖ ಬೇಕೇ. ಎರಡು ಸುಖಗಳ ಮಧ್ಯೆ ಒಂದು ದುಃಖ; ಎರಡು ದುಃಖಗಳ ನಡುವೆ ಒಂದು ಸುಖವಿದ್ದರೆ ಬದುಕು ಹೆಚ್ಚು ಅರ್ಥಪೂರ್ಣ ಅಲ್ಲವೇ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)