Skip to product information
1 of 2

Lalita Mudradi

ಅರ್ಥವಾಗದವರು

ಅರ್ಥವಾಗದವರು

Publisher -

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 96

Type - Paperback

ಭಾಷೆ-ಸಾಹಿತ್ಯ, ಕಾವ್ಯ, ಕವನ, ನಾಟಕ, ವಿಡಂಬನೆ, ಪುರಾಣಕೃತಿಗಳು ಹೀಗೆ ನಾನಾವಿಧದ ಸಾಹಿತ್ಯಕ ಚಿಂತನೆಯಲ್ಲಿ ಅಗ್ರಗಣ್ಯರಾಗಿದ್ದ ಅಂಬಾತನಯ ಮುದ್ರಾಡಿಯವರ ಸಾಹಿತ್ಯದ ಮನೆಯ ಅಂಗಳದ ಪುಷ್ಟವಾಗಿ ಬೆಳೆದು, ಸಾರಸ್ವತ ಲೋಕದಲ್ಲಿ ಅವರ ಜೊತೆ ಹೆಜ್ಜೆ ಹಾಕುತ್ತ ಬೆಳೆದು, ತಂದೆಯ ಆದರ್ಶದಂತೆಯೆ ತಾನೂ ಓರ್ವ ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಾರ್ದವತೆಯ ಹಣತೆ ಹೆಚ್ಚುತ್ತ ಸಾಗಿದ ಲಲಿತಾ ಮುದ್ರಾಡಿ ಅವರ ವೃತ್ತಿ ಬದುಕಿನ ಪಯಣ ಒಂದು ಮಧುರ ಅನುಭವ.

ತಂದೆ ಅಂಬಾತನಯ ಮುದ್ರಾಡಿಯವರಿಂದ ಪಡೆದ ಕಾವ್ಯಶಕ್ತಿ, ಶಿಕ್ಷಕಿಯಾಗಿ ಸ್ವಯಂ ಪಡೆದುಕೊಂಡ ಕಾರ್ಯಶಕ್ತಿ, ಬಡತನದಲ್ಲಿ ಬೆಳೆದು ಬಂದ ಅನುಭವ, ತುಂಬು ಸಂಸಾರದಲ್ಲಿ ಅವಿಭಕ್ತ ಸಮೂಹದಲ್ಲಿ ದೊರಕಿದ ಸಂಸ್ಕಾರ ಎಲ್ಲವೂ ಲಲಿತಾ ಮುದ್ರಾಡಿ ಅವರ ಕಾವ್ಯಪ್ರಪಂಚದ ಶಕ್ತಿಯಾಗಿ ಹೊರಹೊಮ್ಮಿವೆ ಎನ್ನಬಹುದು.

ನನಗೇನು ಬೇಕೆಂದು ನಿನಗೆ ಮಾತ್ರವೆ ಗೊತ್ತು, ಕೊಡುವುದನು ಕೊಟ್ಟಿರುವೆ ಮತ್ತೆ ನೀ ಪಡೆದಿರುವೆ, ನನಗೆಷ್ಟು ಋಣವಿಹುದೋ ಅದನಷ್ಟೆ ಪಡೆದೆ ಅದಕ್ಕಿಂತ ಹೆಚ್ಚಿನದ ನಾ ಬಯಸಬಹುದೆ?

ಇದು ಲಲಿತಾ ಮುದ್ರಾಡಿ ಅವರ ಪ್ರಾರ್ಥನೆ ಕವನದ ಮೊದಲ ನಾಲ್ಕು ಸಾಲುಗಳು. ಅವರ ಆಂತರ್ಯವನ್ನು ತಿಳಿಯಲು ಬಹುಶ ಈ ನಾಲ್ಕು ಸಾಲುಗಳೆ ಸಾಕು. ಅವರಿಗೆ ಶುಭವಾಗಲಿ.

-ಕೆ. ಪದ್ಮಾಕರ ಭಟ್
ವಿಶ್ರಾಂತ ಪತ್ರಕರ್ತ ಈದು ಹೊಸ್ಮಾರು, ಕಾರ್ಕಳ 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)