Ashwat. S. L.
ಅರಿವಿನ ದಾರಿ
ಅರಿವಿನ ದಾರಿ
Publisher -
- Free Shipping Above ₹300
- Cash on Delivery (COD) Available
Pages - 153
Type - Paperback
Couldn't load pickup availability
ತನ್ನ ಕಛೇರಿಯ ಸಮಯದ ನಂತರವೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಿದ್ಧತೆ ಮಾಡುವ ವೃತ್ತಿ ಯಾವುದಾದರೂ ಇದ್ದರೆ ಅದು ಶಿಕ್ಷಕ ವೃತ್ತಿ ಮಾತ್ರ. ಆ ಕಾರ್ಯತತ್ಪರತೆಯ ಗೌರವ ನಮಗಿರಬೇಕು. ತಮ್ಮ ಸ್ವಂತ ಮಕ್ಕಳೊಡನೆ ಸಮಯ ಕೊಡಲಾಗದಿದ್ದರೂ ವಿದ್ಯಾರ್ಥಿಗಳೆಲ್ಲರನ್ನು ಮಕ್ಕಳಂತೆ ಪ್ರೀತಿಸಿ, ಪೋಷಿಸುವ ನಿಸ್ವಾರ್ಥ ಸೇವೆಯ ಅರಿವು ನಮಗಿರಬೇಕು. ನೂರಾರು ಕಣ್ಣುಗಳ ನಡುವೆ ನೊಂದು ತೇವವಾದ, ಸೋತು ಸೊರಗಿ ಹೋದ, ಆತ್ಮ ವಿಶ್ವಾಸ ಕಳೆದುಕೊಂಡು ಕುಗ್ಗಿ ಕಮರಿದ ಮನಸ್ಸುಗಳನ್ನು ಸದಾ ಹುರಿದುಂಬಿಸಿ, ಗೆಲುವಾಗುವ ದಾರಿ ತೋರಿಸಿ, ಕೈ ಹಿಡಿದು ಮುನ್ನಡೆಸಿ, ಭವ್ಯ ಭವಿಷ್ಯದ ಕನಸನ್ನು ಕಲ್ಪಿಸಿ ಬದುಕು ಬೆಳಗಿಸುವ ದಿವ್ಯ ದೃಷ್ಟಿಯನ್ನು ಸೃಷ್ಟಿಸುವ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿದಿರಬೇಕು.
ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಇಂತಹ ನಮ್ರತೆ, ಸದ್ಗುಣಗಳ ವಿವೇಕವನ್ನು ಜ್ಞಾನದ ಜೊತೆಗೆ ಕಲಿಸುವ ಮಹಾಗುರುವನ್ನು, ಸದಾ ಪೂಜ್ಯನೀಯ ಸ್ಥಾನದಲ್ಲಿ ನೋಡುವ ಹಾಗೂ ಸದ್ವಿಚಾರವನ್ನು ಕಲಿಸುವ ಜ್ಞಾನ ದೇಗುಲವೆಂಬ ಶಾಲೆಯನ್ನು ಕೈ ಮುಗಿದು ಗೌರವಿಸುವ ಮನವೆಂದೂ ಪ್ರಶ್ನಿಸುವ, ಅಪಮಾನಿಸುವ, ಅಣಕಿಸುವ, ಅಪಹಾಸ್ಯ ಮಾಡುವ ಕುತ್ಸಿತ ಸ್ಥಿತಿಗೆ ರೂಪಾಂತರವಾಗದಿರಲಿ.
Share


Subscribe to our emails
Subscribe to our mailing list for insider news, product launches, and more.