Ananya Tushira
Publisher - ಅಂಕಿತ ಪುಸ್ತಕ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಲೇಖಕಿ ಅನನ್ಯ ತುಷಿರಾ ಅವರ ಸಣ್ಣ ಕತೆಗಳ ಸಂಕಲನ ಅರ್ಧ ನೆನಪು ಅರ್ಧ ಕನಸು. ಈ ಕಥಾ ಸಂಕಲನದಲ್ಲಿ 14 ಕಥೆಗಳಿವೆ. ಈ ಕೃತಿಗೆ ಲಲಿತಾ ಸಿದ್ದಬಸವಯ್ಯ ಅವರು ಮುನ್ನುಡಿ ಬರೆದಿದ್ದು, "ಹಳ್ಳಿ ಪೇಟೆಗಳೆಂಬ ಎರಡು ಚಪ್ಪರಗಳ ಮೇಲೆ ನಿಮ್ಮ ಕಥಾವಲ್ಲರಿಗಳು ಕುಡಿಗಳೊಡೆಯುತ್ತವೆ. ಹಳ್ಳಿಯ ಕತೆಗಳು ಹೆಚ್ಚು ಗಟ್ಟಿಯಾಗಿವೆ, ಸಹಜವಾಗಿವೆ, ಅನುಭವವು ಓದುಗನ ಅನುಭವವೂ ಆಗಬಹುದಾದ ಆಳವನ್ನು ಹೊಂದಿವೆ. ತಕ್ಕಂತಹ ಭಾಷೆಯೂ ಕರಗತವಾಗಿದೆ. ಬಹು ಮುಖ್ಯವಾದವು ಎಂದು ನನಗನಿಸಿದ ಜೋಳದ ಕಾಳು, ಅಜ್ಜಯ್ಯ, ಎಲೆಹಬ್ಬ - ಈ ಮೂರೂ ಕತೆಗಳೂ ಸೇರಿದಂತೆ ನಿಮ್ಮ ಅಷ್ಟೂ ಗ್ರಾಮ್ಯ ಚಿತ್ರಗಳು ಒಂದೇ ಗ್ರಾಮದ ಬೇರೆ ಬೇರೆ ಓಣಿಯಲ್ಲಿ ಓಡಾಡಿಕೊಂಡಿರುವವು ಅನಿಸುತ್ತವೆ. ನಿಮ್ಮ ಕತೆಗಳಿಗೆ ಮೊದಲ ಕಥಾಸಂಗ್ರಹ ಎಂಬ ರಿಯಾಯಿತಿಯ ಅಗತ್ಯವಿಲ್ಲ. ಕನ್ನಡಕ್ಕೆ ಮತ್ತೊಬ್ಬ ಪಳಗಿದ ಕತೆಗಾರಮ್ಮ ಸಿಕ್ಕಿದಿರಿ" ಎಂಬುದಾಗಿ ಹೇಳಿದ್ದಾರೆ.
