K. Srinivasa Reddy
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ನಾವು ಅಂದುಕೊಳ್ಳುತ್ತೇವೆ, ಅದೃಷ್ಟವೆಂಬುದು ಕೆಲವರಿಗಷ್ಟೇ ಒಲಿಯುತ್ತದೆ. ಆದರೆ ಅದೃಷ್ಟ ತಾನೇ ತಾನಾಗಿ ಯಾರಿಗೂ ಒಲಿಯುವುದಿಲ್ಲ. ಅವರವರ ಪ್ರಾಮಾಣಿಕತೆ, ಪ್ರಯತ್ನ ಪರಿಶ್ರಮಗಳಿಗೆ ತಕ್ಕಂತೆ ಅವರವರ ಗುಣಗಳಿಗೆ ತಕ್ಕಂತೆ ಒಲಿದು ಬರುತ್ತದೆ. ನಮ್ಮನ್ನು ಸೂಕ್ತಕಾಲದಲ್ಲಿ ಸೂಕ್ತ ಸನ್ನಿವೇಶದಲ್ಲಿ ಸೂಕ್ತ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ನಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಒಂದು ವೇಳೆ ನಮ್ಮ ಬದುಕಿನಲ್ಲಿ ತೀವ್ರತರದ ಬಯಕೆಗಳಿದ್ದರೆ ನಮಗೆ ನಿಜವಾಗಿಯೂ ಅದನ್ನು ಸಾಧಿಸುವ ಇಚ್ಚೆಯಿದ್ದರೆ ಎಲ್ಲವೂ ಒದಗಿ ಬರುತ್ತದೆ. ಆಗ ನಮಗೆ ಎಲ್ಲವೂ ಸಾಧ್ಯವಾಗುತ್ತದೆ.
ಗೆಲುವಿನ ದಾರಿಯೆಂದು ಯಾವುದೂ ನಿರ್ದಿಷ್ಟವಾಗಿಲ್ಲ. ನಾವು ತೀವ್ರತರದ ಆಕಾಂಕ್ಷೆಯಿಂದ ಮಾಡುವ ಎಲ್ಲ ಪ್ರಯತ್ನಗಳೂ ನಮಗೆ ಗೆಲುವಿನ ದಾರಿಯನ್ನು ತೆರೆಸುತ್ತವೆ. ಇಲ್ಲಿಯೂ ನಮ್ಮ ಪ್ರಾಮಾಣಿಕತೆಯೇ ಮುಖ್ಯವಾಗಿ ನಮಗೆ ಬಲವಾಗುತ್ತದೆ. ಒಂದು ವೇಳೆ ನಾವು ಮಾಡುತ್ತಿರುವುದು ನಮಗೆ ಸಮಾಧಾನವನ್ನು ತಂದರೆ, ನಾವು ಮಾಡುತ್ತಿರುವುದು ಸರಿಯೆಂದು ನಮಗನ್ನಿಸಿದರೆ ಇದರಿಂದ ಯಾರಿಗೂ ತೊಂದರೆಯಾಗದಿದ್ದರೆ ನಾವು ನಮ್ಮ ದಾರಿಯಲ್ಲಿ ಮುಂದುವರೆಯಬಹುದು.
ನಮ್ಮ ಪ್ರಯತ್ನ ಹಾಗೂ ಪರಿಶ್ರಮಗಳು ಅರ್ಹತೆಗೆ ತಕ್ಕಂತೆ ತಮ್ಮ ಮೌಲ್ಯಕ್ಕೆ ತಕ್ಕಂತೆ ದಾಖಲಾಗುತ್ತವೆ. ಸಂಚಿತವಾಗುತ್ತದೆ. ಇದನ್ನು ಯಾರು ಗಮನಿಸಲಿ ಬಿಡಲಿ ಇದಕ್ಕೆ ತಕ್ಕ ಪ್ರತಿಫಲಗಳು ನಮಗೆ ಸಿಗಲಿವೆ. ಕೆಲವೊಮ್ಮೆ ಪ್ರಾಮಾಣಿಕ ಪ್ರಯತ್ನದಲ್ಲದ್ದಕ್ಕೂ ಪ್ರಾಮಾಣಿಕ ಪರಿಶ್ರಮವಲ್ಲದಕ್ಕೂ ಮಾನ್ಯತೆ ಸಿಗುವುದನ್ನು ಕಾಣುತ್ತೇವೆ. ಆದರೆ ಇದು ಮರೀಚಿಕೆಯಂತೆ ಆಕ್ಷಣಕ್ಕಷ್ಟೇ ಸತ್ಯ ದಂತೆ ಕಾಣುವ ಆದರೆ ಹತ್ತಿರ ಬಂದಂತೆ ಕಾಣೆಯಾಗುವ ಪ್ರಕ್ರಿಯೆ.
ನಾವು ಅಂದುಕೊಳ್ಳುವ ಸರಿ ತಪ್ಪುಗಳು ಕಾಲಕ್ಕೆ ತಕ್ಕಂತೆ ಪರಿವರ್ತನೆಯಾಗಲಿವೆ. ಒಂದು ಕಾಲದ 'ಸರಿ' ನಂತರದ ಕಾಲದಲ್ಲಿ ತಪ್ಪಾಗಲು ಸಾಧ್ಯವಿದೆ. ಹಾಗೆಯೇ ಒಂದು ಕಾಲದಲ್ಲಿ ನಾವು ತಪ್ಪು ಮಾಡಿದೆವೆಂದು ನೊಂದುಕೊಂಡದ್ದು ನಂತರದ ಕಾಲದಲ್ಲಿ ಅದೇ ನಮಗೆ ವರವಾಗಲಿದೆ. ಆದ್ದರಿಂದ ನಾವು ಯಾವುದೇ ಸಂಗತಿಯ ಕುರಿತಂತೆ ತಪ್ಪೇ ಮಾಡಬಾರದು ಎಂದುಕೊಳ್ಳುವುದಕ್ಕಿಂತ ಅದನ್ನು ಹೆಚ್ಚು ಸಮರ್ಪಕವಾಗಿ ಸಾಧಿಸಿಕೊಳ್ಳುವುದು ಹೇಗೆಂದು ಆಲೋಚಿಸುವುದರಲ್ಲಿಯೇ ಅದನ್ನು ಸಮರ್ಪಕವಾಗಿ ಕಾರ್ಯಗತಗೊಳ್ಳುವುದರಲ್ಲಿಯೇ ನಮ್ಮ ಗೆಲುವಿದೆ.
