L. P. Kulakarni
ಅಮೂಲ್ಯ ರತ್ನಗಳು
ಅಮೂಲ್ಯ ರತ್ನಗಳು
Publisher -
Regular price
Rs. 180.00
Regular price
Rs. 180.00
Sale price
Rs. 180.00
Unit price
/
per
- Free Shipping Above ₹250
- Cash on Delivery (COD) Available
Pages - 142
Type - Paperback
ಕೆಲವೊಂದು ಪುಸ್ತಕಗಳು ಒಮ್ಮೆ ಓದುವಂತಹವು. ಇನ್ನು ಕೆಲವನ್ನು ಪದೇ ಪದೇ ಓದಬೇಕಾಗುವುದು ಅನಿವಾರ್ಯ. ಅವು ಬದುಕಿಗೆ ಮಾರ್ಗದರ್ಶನ ಮಾಡುವಂಥವು. ಆತ್ಮೀಯರಾದ ಕುಲಕರ್ಣಿಯವರ ಪುಸ್ತಕ ಎರಡನೇ ಗುಂಪಿಗೆ ಸೇರಿದ್ದು, ಕುಲಕರ್ಣಿ ವೃತ್ತಿಯಿಂದ ಮಕ್ಕಳ ಮನ ಮೆಚ್ಚಿದ ಆದರ್ಶ ಶಿಕ್ಷಕರು. ಪ್ರವೃತ್ತಿಯಿಂದ ವಿಜ್ಞಾನ ಲೇಖಕರು. ಎಲೆಯ ಮರೆಯಕಾಯಿಯಂತೆ ಸದ್ದಿಲ್ಲದೆ ಸಾಹಿತ್ಯ ಕೃಷಿಯಲ್ಲಿ ತೊಡಗಿದವರು. 'ಅಮೂಲ್ಯ ರತ್ನಗಳು' ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬದುಕಿದವರ ಜೀವನ ಚರಿತ್ರೆಗಳಿವೆ. ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸಂಶೋಧನೆಯಲ್ಲಿ ಕಾಲಕಳೆದ ವಿಜ್ಞಾನಿಗಳ ಬದುಕು ಬರಹಗಳಿವೆ. ನೊಬೆಲ್ ಪ್ರಶಸ್ತಿ ವಂಚಿತ ಭಾರತದ ವಿಜ್ಞಾನಿ ಜಗದೀಶಚಂದ್ರ ಬೋಸ್, ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಆಧುನಿಕ ದಾನಶೂರ ಕರ್ಣ ಖ್ಯಾತಿಗೆ ಪಾತ್ರರಾದ ಅಜೀಂ ಪ್ರೇಮ್‌ಜಿ, ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿಯ ದಾಖಲೆ ಮುರಿದ 21ರ ಪೋರ, ಕಾರ್ಗಿಲ್ ಕಲಿ ಕ್ಯಾಪ್ಟನ್ ನವೀನ್ ನಾಗಪ್ಪ.... ಇತ್ಯಾದಿ ಅಮೂಲ್ಯ ರತ್ನಗಳ ಪರಿಚಯ ಈ ಪುಸ್ತಕದಲ್ಲಿದೆ.
ಅವರ ಜೀವನ ಚರಿತ್ರೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮೈಲುಗಲ್ಲುಗಳಾಗಿ ನಿಲ್ಲುವವು. ಬಡತನದ ಬೇಗುದಿಯಲ್ಲಿ ಬೆಂದು ಬಳಲಿ, ಧೈರ್ಯದಿಂದ ಎದುರಿಸಿ, ಅವಿರತ ಪರಿಶ್ರಮಪಟ್ಟು ತಲೆ ಎತ್ತಿ ನಿಂತು, ಹಿಗ್ಗದೆ-ಕುಗ್ಗದೆ ಬದುಕಿ, ಮಾರ್ಗದರ್ಶಕರಾಗಿ, ಬದುಕು ರೂಪಿಸುವಲ್ಲಿ 'ಮಾಡೆಲ್'ಗಳಾಗಿ ನಿಂತು, ಗೈಡುಗಳಂತೆ 'ಗೈಡ್' ಮಾಡುವುದರಿಂದಾಗಿ ಮಕ್ಕಳ ಬದುಕಿನ ಚಿತ್ರ ಬದಲಿಸಲು, ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಇಲ್ಲಿನ ರತ್ನಗಳು ರೂವಾರಿಗಳಾಗುತ್ತಾರೆ.
ಧರ್ಮ-ರಾಜಧರ್ಮ, ಪ್ರಜಾಧರ್ಮ, ವ್ಯಕ್ತಿಧರ್ಮಗಳು ಅನ್ಯ ಹಾದಿ ಕ್ರಮಿಸುತ್ತಿರುವ ಈ ಕಾಲಘಟ್ಟದಲ್ಲಿ ಲೇಖಕರು ಧ್ಯಾನಸ್ಥರಾಗುತ್ತಾರೆ. ವರ್ತಮಾನದ ತುರ್ತುಗಳಾದ ನಾಡು ನುಡಿ, ಅಭಿಮಾನ, ದೇಶಭಕ್ತಿ, ನಾಡ ಶ್ರದ್ಧೆ ಮಕ್ಕಳಲ್ಲಿ ಅಂಕುರಗೊಳ್ಳಲು, ಜಾಗೃತಿ ಉಂಟುಮಾಡುವಲ್ಲಿ ಈ ಪುಸ್ತಕ ಯಶಸ್ವಿಯಾಗುವಲ್ಲಿ ಸಂದೇಹವಿಲ್ಲ. ಅತ್ಯಂತ ಸಹಜವಾಗಿ ಅನುಭವಕ್ಕೆ ಅಕ್ಷರ ರೂಪ ನೀಡುವ, ಭಾವಕ್ಕೆ ಜೀವ ತುಂಬುವ 'ಅಮೂಲ್ಯ ರತ್ನಗಳು' ಕೃತಿ ವರ್ತಮಾನದ ವಿದ್ಯಾರ್ಥಿಗಳ-ಆಸಕ್ತರ ಮನಸ್ಸು ವಿಕಾಸಗೊಳ್ಳಲು ಪೂರಕ, ಪೋಷಕ, ಪರಿಪೂರಕವಾಗಿದೆ.
ಡಾ. ಕರವೀರಪ್ರಭು ಕ್ಯಾಲಕೊಂಡ
ಮಾಜಿ ರಾಜ್ಯಾಧ್ಯಕ್ಷರು. ವೈದ್ಯ ಸಾಹಿತ್ಯ ಪರಿಷತ್ತು, ಬೆಂಗಳೂರು.

Share
Subscribe to our emails
Subscribe to our mailing list for insider news, product launches, and more.