Harivu Books
ಅಮೃತ ಬಳ್ಳಿ
ಅಮೃತ ಬಳ್ಳಿ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 190.00
Regular price
Rs. 190.00
Sale price
Rs. 190.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಮುರ್ತಿಯವರು ಪತ್ರಕರ್ತರಾಗಿ, ಸಂವೇದನಾಶೀಲ ವ್ಯಕ್ತಿಯಾಗಿ ಕಂಡುಂಡ ಬದುಕುಗು ಈ ಕಥಾಸಂಕಲನದ ಉದ್ದಕ್ಕೂ ಹರಡಿಕೊಂಡಿದೆ. ಇಲ್ಲಿನ ಬಹುಪಾಲು ಕಥೆಗಳಲ್ಲಿ ಮಲೆನಾಡಿನ ಸಾಮಾನ್ಯ ಜನರ ಬದುಕಿನ ಆಶೋತ್ತರ, ಕಷ್ಟಕಾರ್ಪಣ್ಯ,ಘನತೆ ತುಂಬಿದ ಜೀವನವನ್ನ್ ಕಟ್ಟಿಕೊಳ್ಳುವಲ್ಲಿ ಮನುಷ್ಯರು ತೋರುವ ಛಲವಂತಿಕಗಳೇ ಆಗಿವೆ. ಅನುಭವವನ್ನು ಮರುಕಥಿಸುವಾಗ ಕಥೆಗಾರರು ತೋರುವ ಪಕ್ಕ ನೋಟ ಕಥೆಗಳನ್ನು ಮೇಲುಸ್ತರಕ್ಕೇರಿಸಿವೆ. ಸಾಮಾನ್ಯರ ಜೀವನವನ್ನು ಸಂವೇದನಾಶೀಲತೆ ಮತ್ತು ಸಂಯಮಗಳಿಂದ ನಿರುಕಿಸುತ್ತ ಮೂರ್ತಿಯವರು ಕಟ್ಟುವ ಕಥೆಗಳಲ್ಲಿ ಕಥನಕೌಶಲ, ವಸ್ತುನಿಷಯ, ಜೈಲಿಗಳ ನಿರ್ವಹಣೆಯಲ್ಲಿ ತೋರುವ ನಿಪುಣತೆ ಓದನ್ನು ಹೃದ್ಯವಾಗಿಸುತ್ತವೆ. ಇಲ್ಲಿ ಬಳಸಿರುವ ಮಾದರಿ ಜನಪ್ರಿಯ ಸಾಹಿತ್ಯಕ್ಕೆ ಹತ್ತಿರವಾಗಿರುವುದರಿಂದ, ಓದುಗ ಹೆಚ್ಚು ಪರಿಶ್ರಮ ಪಡದೆ ತನ್ನದನ್ನಾಗಿಸಿ ಕೊಳ್ಳಬಲ್ಲ.
ಇಲ್ಲಿನ ಹಲವು ಕಥೆಗಳಲ್ಲಿ ದೊಡ್ಡವರ ಪಡಿಪಾಟಲನ ಬದುಕನ್ನು ಸಾಕ್ಷಿಪ್ರಜ್ಜೆಯಾಗಿ ಗ್ರಹಿಸುವ ಚಿಕ್ಕಮಕ್ಕಳ ಪಾತ್ರಗಳಿವೆ. ಅಂತೆಯೇ, ನಿಸ್ವಾರ್ಥದ, ಅಸಹಾಯಕ ಬದುಕನ್ನು ನಡೆಸುವ ಹೆಂಗಸರು ಒಂದು ಗಳಿಗೆಯಲ್ಲಿ ತೋರುವ ದಿಟ್ಟತನ ಮತ್ತು ತ್ಯಾಗಮಯ ಪಾತ್ರಗಳಿವೆ. ಇವೆಲ್ಲ ಇಂದಿಗೂ ಗ್ರಾಮಭಾರತದ ಬದುಕಿನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಓದುಗ ಅವುಗಳೊಂದಿಗೆ ತಾದ್ಯಾತ್ಮತೆಯನ್ನು ಸಾಧಿಸಬಲ್ಲ. ಶ್ರೀಗಂಧ ಕಥೆಯ ಶೀನ, ಕಾರುಣ್ಯ ಕಥೆಯ ಅಜ್ಜಿ, ಅನ್ನದೇವರು ಕಥೆಯ ಮಕ್ಕಳು, ಸಂತ ಕಥೆಯ ಅಯ್ಯನವರು, ಮುಸ್ಸಂಜೆ ಕಥೆಯ ರಾವ್ ಹೀಗೆ ಕಥೆ ಮತ್ತು ಪಾತ್ರಗಳು ಬೇರೆ ಬೇರೆ. ಆದರೆ, ಕಥೆಗಾರನ ಮಾಗಿದ ದೃಷ್ಟಿಕೋನವು ಈ ಪಾತ್ರಗಳು ಬದುಕಿನ ಕಹಿಯನ್ನು ನುಂಗಿ, ಆ ಗಳಿಗೆಯನ್ನು ಹೇಗೆ ತಿಳಿಯಾಗಿಸಿದರು ಮತ್ತು ಸಾರ್ಥಕ ಗೊಳಿಸಿದರು ಎಂಬುದರತ್ತ ಇರುವುದರಿಂದ ಹೊಸ ನೋಟ ಪ್ರಾಪ್ತವಾಗುತ್ತದೆ.
ಇಲ್ಲಿನ ಕಥೆಗಳು ಓದುಗರನ್ನು ಅರ್ದ್ರಗೊಳಿಸಬಲ್ಲವು. ಒಂದು ಕಥೆಯಿಂದ ಸಮಾಜದ ವಿವಿಧ ಸ್ತರದ ಬದುಕಿನ ಚಿತ್ರಣ ಬಯಸಿದರೆ ಧಾರಾಳವಾಗಿ ನೀಡಬಲ್ಲವು. ಬದುಕಿನಲ್ಲಿ ಕಷ್ಟನಷ್ಟ. ಕಹಿಯೊಗರುಗಳಷ್ಟೇ ಅಲ್ಲ, ಅವುಗಳ ಹಿಂದೆ ಮನುಷ್ಯ ತನ್ನ ಹೋರಾಟದಿಂದಾಗಿಯೇ ಪಡೆದುಕೊಳ್ಳಬಹುದಾದ ಚಲನಶೀಲತೆಯಿದೆ ಎಂಬುದನ್ನು ಎತ್ತಿ ತೋರಿಸಬಲ್ಲವು.
- ಕೇಶವ ಮುಳಗಿ

Share
Subscribe to our emails
Subscribe to our mailing list for insider news, product launches, and more.