Skip to product information
1 of 1

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಅಮೇರಿಕಾದಲ್ಲಿ ಗೊರೂರು

ಅಮೇರಿಕಾದಲ್ಲಿ ಗೊರೂರು

Publisher: ಐಬಿಹೆಚ್ ಪ್ರಕಾಶನ

Regular price Rs. 315.00
Regular price Sale price Rs. 315.00
Sale Sold out
Shipping calculated at checkout.

ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ - ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ - ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.

- ಪ್ರೊ. ಬರಗೂರು ರಾಮಚಂದ್ರಪ್ಪ

View full details