D. Javare Gowda
Publisher - ಕನ್ನಡ ಸಾಹಿತ್ಯ ಪರಿಷತ್ತು
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮೂರ್ನಾಲ್ಕು ಶತಮಾನಗಳ ಸುದೀರ್ಘ ಹೋರಾಟದ ಫಲವೆನ್ನುವಂತೆ ಜಗತ್ತಿನ ದೀನದಲಿತ ಜನಾಂಗಗಳ ಬಿಸಿಯುಸಿರೇ ಆಕಾರ ಪಡೆದಂತೆ ಮಾರ್ಟಿನ್ ಲೂಥರ್ ಕಿಂಗ್. ನೀಗ್ರೋ ಕುಟುಂಬದಲ್ಲಿ ಜನಿಸಿ, ವಿದ್ಯಾಪಾರಂಗತನಾಗಿ, ಸೋದರ ಮಾನವರ ಹೃದಯವಿದ್ರಾವಕ ಪರಿಸ್ಥಿತಿಯಿಂದ ನೊಂದು ಬೆಂದು, ಅವರ ವಿಮೋಚನೆಗಾಗಿ ಕೃತಸಂಕಲ್ಪನಾಗುತ್ತಾನೆ. ಗಾಂಧಿ ಮಾರ್ಗದಿಂದಲ್ಲದೆ ವಿಮೋಚನೆ ಸಾಧ್ಯವಿಲ್ಲವೆಂದು ಮನಗಂಡ ಅವನು ಪ್ರಾಮಾಣಿಕವಾಗಿ ಅದನ್ನು ಅನುಷ್ಠಾನಗೈದು, ವಿಜಯದ ಸೂಚನೆ ದಿಗಂತದಲ್ಲಿ ಮಿನುಗುತ್ತಿದ್ದಾಗಲೇ, ಪ್ರಪಂಚದ ಮೂಲೆ ಮೂಲೆಗಳಲ್ಲಿ ಅವನ ಕೀರ್ತಿಯ ಪಾಂಚಜನ್ಯ ಮೊಳಗುತ್ತಿರುವಾಗಲೇ ಕರಿಯರ ಏಳ್ಗೆಯನ್ನು ಸಹಿಸದ ಹುಚ್ಚನೊಬ್ಬನ ಅಮಾನುಷ ಹತ್ಯೆಗೊಳಗಾಗಿ ಹುತಾತ್ಮನಾಗುತ್ತಾನೆ, ಸಾಕ್ರೆಟಿಸ್, ಯೇಸು, ಗಾಂಧಿಯರಿಗಾದ ಗತಿಯೇ ಅವನಿಗೂ ಸಂಭವಿಸುತ್ತದೆ.
ಅಂಥ ಮಹಿಮಾವಂತನ ದುರಂತ ಕಥೆ ಮುಂದಿನ ಪುಟಗಳಲ್ಲಿ ಹರಿದಿದೆ. ಇದು ದಲಿತೋದಯದ ಸಾಂಕೇತಿಕ ಚಿತ್ರವೂ ಅಹುದು, ಗಾಂಧಿಮಾರ್ಗದ ಯಶಸ್ಸಿನ ಕಥಾನಕವೂ ಅಹುದು, ಹಿಂದೆ ಅಮೆರಿಕಾದಲ್ಲಿದ್ದಾಗ ಅವನ ಬಗ್ಗೆ ಸಂಪಾದಿಸಿದ್ದ ಸಾಮಗ್ರಿ ಹಾಗೂ ಅವನ ಕಾರ್ಯಕ್ಷೇತ್ರದಲ್ಲಿ ಅಡ್ಡಾಡಿದ ಫಲವಾಗಿ ಈ ಕೃತಿ ಮೂಡಿದೆ.
