Dr. Purushottam Bilimale
Publisher - ಅಹರ್ನಿಶಿ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಭಾರತೀಯ ರೈತರಿಗೆ ಭೂಮಿ ಎಂಬುದು ಭಾವನಾತ್ಮಕ ವಿಷಯ. ಅವರದನ್ನು ಹುಟ್ಟು, ಮದುವೆ, ಸಾವು ಮಾತ್ರವಲ್ಲದೆ, ತಾವು ನಂಬಿದ ದೈವಗಳೊಂದಿಗೂ ಗಾಢವಾಗಿ ಬೆಸೆದುಕೊಂಡಿದ್ದಾರೆ. ಇದನ್ನು ತಿಳಿಯದ ಪ್ರಭುತ್ವವು ತನ್ನ ಲಾಭಕ್ಕೆ ನೆಲವನ್ನು ವ್ಯಾಪಾರದ ಸರಕನ್ನಾಗಿ ಪರಿವರ್ತನೆಗೊಳಿಸಿದಾಗಲೆಲ್ಲಾ ರೈತರು ಅಂಥ ಪ್ರಕ್ರಿಯೆಗಳನ್ನು ತೀವ್ರವಾಗಿ ಪ್ರತಿಭಟಿಸಿದ್ದಾರೆ.
ಈ ಗ್ರಹಿಕೆಯ ಹಿನ್ನೆಲೆಯಲ್ಲಿ ಬರೆಯಲಾದ ಪ್ರಸ್ತುತ ಪುಸ್ತಕವು, ಸುಳ್ಯ ಮತ್ತು ಕೊಡಗಿನ ರೈತರು ಈಸ್ಟ್ ಇಂಡಿಯಾ ಕಂಪೆನಿಯು ಜಾರಿಗೆ ತಂದ ಹೊಸ ಕಂದಾಯ ವ್ಯವಸ್ಥೆಯ ವಿರುದ್ಧ ೧೮೩೪ರಿಂದ ೧೮೩೭ರವರೆಗೆ ನಡೆಸಿದ ದಿಟ್ಟ ಹೋರಾಟವನ್ನು ವಿವರಿಸುತ್ತದೆ. ಕಂಪೆನಿ ಸರಕಾರದ ಪ್ರಬಲ ಸೈನಿಕ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಜನರು ಸಂಘಟಿತಗೊಂಡ ರೀತಿ, ವೈರಿಯನ್ನು ಮಣಿಸಲು ಅನುಸರಿಸಿದ ಗೆರಿಲ್ಲಾ ಮಾದರಿಯ ತಂತ್ರಗಳು, ಅನನ್ಯವಾದ ದೈವೀಕರಣ, ನಕಲೀಕರಣ ಪ್ರಕ್ರಿಯೆಗಳು ಪ್ರಾಂತೀಯ ರೈತ ಹೋರಾಟಗಳ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಸಂಗತಿಗಳಾಗಿವೆ.
