Skip to product information
1 of 1

T. G. Prabhashankara 'Premi'

ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್

ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಅಮರ ಹುತಾತ್ಮ ಸರದಾರ್ ಭಗತ್‌ ಸಿಂಗ್ ಒಂದು ಜೀವನ ವೃತ್ತಾಂತದ ಪುಸ್ತಕ ಮಾತ್ರವಲ್ಲ, ಸ್ವಾತಂತ್ರ್ಯ ಸಂಗ್ರಾಮದ ಮತ್ತು ತಾಯಿನಾಡಿನ ಪ್ರೇಮದ ಜೀವಂತ ಆಖ್ಯಾನ ಕೂಡ. 23ನೇ ಮಾರ್ಚ್ 1931ರ ದಿನ ಭಾರತದ ಇತಿಹಾಸದಲ್ಲಿ ಬ್ರಿಟಿಷ್ ಆಡಳಿತದ ಬರ್ಬರತೆಯ ಒಂದು ಜ್ವಲಂತ ಉದಾಹರಣೆ. ಈ ದಿನ ಸರದಾರ ಭಗತ್ ಸಿಂಗ್ ಮತ್ತು ಅವರ ಸಂಗಡಿಗರಾದ ಸುಖದೇವ್ ಮತ್ತು ರಾಜಗುರುವನ್ನೂ ಗಲ್ಲಿಗೇರಿಸಿದ್ದರು. ಕಾಲಾನಂತರವೂ ಈ ಮೃತ್ಯು ಹಳೆಯದಾಗಲಿಲ್ಲ. ಇಂದೂ ಈ ದಿನ ಭಾರತೀಯರಿಗೆ ಹುತಾತ್ಮರ ದಿನ. ಈ ಪುಸ್ತಕವನ್ನು ಸರದಾ‌ರ್ ಭಗತ್‌ ಸಿಂಗ್‌ ಜೀವನ ವೃತ್ತಾಂತ ಎನ್ನದೆ ಅವರ ಸಂಘರ್ಷದ ಕತೆ ಎನ್ನುವುದು ಉತ್ತಮ, 1931ರಲ್ಲಿ ಈ ಪುಸ್ತಕವನ್ನು ಮೊದಲಿಗೆ ಇಂಗ್ಲಿಷ್‌ನಲ್ಲಿ ಬರೆಯಲಾಗಿತ್ತು. ಇದನ್ನು ಬ್ರಿಟಿಷ್ ಸರ್ಕಾರ ಜಪ್ತಿ ಮಾಡಿತ್ತು. ಆದನ್ನೇ ಆಧರಿಸಿ ಈ ಪುಸ್ತಕವನ್ನು ಮತ್ತೆ ವಿಸ್ತಾರಪೂರ್ವಕವಾಗಿ ಬರೆಯಲಾಗಿದ್ದು ಹಿಂದಿಯಲ್ಲಿ ಮೊಟ್ಟ ಮೊದಲಿಗೆ 1947ರಲ್ಲಿ ಕರ್ಮಯೋಗಿ ಪ್ರೆಸ್‌ನಿಂದ ಪ್ರಕಟವಾಗಿದೆ.

ಬ್ರಿಟಿಷ್ ಸರ್ಕಾರ ಪುಸ್ತಕವನ್ನು ಜಪ್ತಿ ಮಾಡುವ ಕಲುಷಿತ ಮನೋವೃತ್ತಿಯನ್ನು ತೋರಿದ ವಿವರಣೆಯ ಜೊತೆಗೆ ಭಗತ್ ಸಿಂಗ್‌ ಜೀವನದ ಎಲ್ಲ ಮಹತ್ವಪೂರ್ಣ ಘಟನೆಗಳನ್ನು, ಚಟುವಟಿಕೆಗಳನ್ನು ಅವರ ಸಂಘರ್ಷದ ಕತೆ ಮತ್ತು ಅವರ ಸಹಕರ್ಮಿಗಳ ಬಲಿದಾನದ ವರ್ಣನೆಯನ್ನು ಎಷ್ಟು ತಥ್ಯಪೂರ್ಣವಾಗಿ ಜಿತೇಂದ್ರನಾಥ ಸಾನ್ಯಾಲ್‌ ರವರು ಈ ಪುಸ್ತಕದಲ್ಲಿ ಕೊಟ್ಟಿದ್ದಾರೆಂದರೆ ಮತ್ತೆಲ್ಲೂ ಇದು ಸಿಗಲಾರದು, ಲೇಖಕರು ಸರದಾ‌ರ್ ಭಗತ್‌ ಸಿಂಗ್‌ ಆತ್ಮೀಯ ಸ್ನೇಹಿತರು. ತನ್ನ ದೇಶ ಮತ್ತು ದೇಶದ ಇತಿಹಾಸವನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಮಾನ್ಯ ಓದುಗರಿಗೆ ಇದು ಪ್ರೇರಣಾದಾಯಕ ಮತ್ತು ಸಂಗ್ರಹಣೀಯ ಪುಸ್ತಕವಾಗಿದೆ.

ಕನ್ನಡ ಲೇಖಕ ಹಾಗೂ ಅನುವಾದಕ ಡಾ. ಟಿ.ಜಿ. ಪ್ರಭಾಶಂಕರ 'ಪ್ರೇಮಿ'ಯವರು ಈ ಪುಸ್ತಕವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
G
Gurulingappa
Book

Super