H. Dundiraj
Publisher - ಅಂಕಿತ ಪುಸ್ತಕ
- Free Shipping
- Cash on Delivery (COD) Available
Pages -
Type -
Couldn't load pickup availability
ಪ್ರಿಯ ಡುಂ,
ಇದನ್ನು ನೀವು ಲಘುಧಾಟಿಯ ಲೇಖನಗಳು ಎಂದು ಯಾಕೆ ಕರೆದಿರೋ ನಾನರಿಯೆ. ನಮ್ಮ ಜೀವನದ ಲಘು ಪ್ರಸಂಗಗಳು ಜೀವನದಲ್ಲಿ ಬಹಳ ಗಂಭೀರ ಪರಿಣಾಮವನ್ನು ಬೀರುತ್ತದೆಯಷ್ಟೆ, ಪ್ರಾಯಶಃ ನೀವು ತುಸು ಹಾಸ್ಯ ಮಿಶ್ರಿತ ಧಾಟಿಯಲ್ಲಿ ಹೇಳಿರುವುದರಿಂದ ಹಾಗೆ ಭಾವಿಸಿರಬಹುದು. ನಿಮಗೆ ಗೊತ್ತಿರುವಂತೆ ಜಗತ್ತಿನ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ನಟಿಸಿದ 'ಗೋಲ್ಡ್‌ರಶ್'ನಲ್ಲಿ ಬೂಟ್ಟನ್ನು ತಿನ್ನುವ ದೃಶ್ಯ ಬರುತ್ತದೆ. ಮೇಲು ನೋಟಕ್ಕೆ ಅದು ತುಸು ಹಾಸ್ಯ ಎನಿಸಿದರೂ ಅದರ ಹಿಂದೆ ಇದ್ದ ಕ್ಷಾಮದ ಘೋರ ಚಿತ್ರಣ ನಮ್ಮ ಮನಸ್ಸನ್ನು ಕಲಕುತ್ತದೆ. ಆತನ ನಗುವಿನ ಹಿಂದೆ ಇರುವ ತೀಕ್ಷ್ಯ ನೋವು ನಮ್ಮನ್ನು ಇರಿಯುತ್ತದೆ. ಅದೇ ರೀತಿಯಲ್ಲಿ ನಿಮ್ಮ ಅನೇಕ ಲೇಖನಗಳು ಒಂದು ಗಾಢವಾದ ಪರಿಣಾಮವನ್ನು ಬೀರುತ್ತವೆ. ತುಂಬಾ ತಾಜಾತನದಿಂದ ಕೂಡಿವೆ... ಚೇತೋಹಾರಿಯಾಗಿವೆ. ಲಘು ಧಾಟಿಯದ್ದಾದರೂ ಕ್ಲಿಷ್ಟ ಸಂಗತಿಗಳನ್ನು ಅದರ ಒಳಹೊಕ್ಕು ಬರೆದ ವಿಶಿಷ್ಟ ಲೇಖನಗಳಾಗಿವೆ. ವಸ್ತು ವೈವಿಧ್ಯದಿಂದ, ಭಾಷಾಚಕ್ಯತೆಯಿಂದ, ನಿರೂಪಣೆಯ ಸೊಗಸಿನಿಂದ ಸಂಗ್ರಹಯೋಗ್ಯ ಪುಸ್ತಕವಾಗಿದೆ.
-ಡಾ. ಜಯಪ್ರಕಾಶ ಮಾವಿನಕುಳಿ
ಪ್ರಕಾಶಕರು - ಅಂಕಿತ ಪುಸ್ತಕ
