Many Authors
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಇಲ್ಲಿ ತಿಳಿಸಿರುವ ರಸಂ, ಸಾಂಬಾರ್ ತಯಾರಿಕೆಯ ಹಲವು ಬಗೆಯ ವಿಧಾನಗಳನ್ನು ಅನುಸರಿಸಿ ರುಚಿಕರ ಅಡುಗೆಗಳನ್ನು ಆಸ್ವಾದಿಸುವಿರೆಂದು ಆಶಿಸುತ್ತೇವೆ.
ಆಹಾರವೇ ಹೇಗೆ ನಮ್ಮ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಹಾಗೆಯೇ ಆಹಾರದಿಂದಲೇ ಹೇಗೆ ನಾವು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳ ಬಹುದು, ಸಕ್ಕರೆ ಕಾಯಿಲೆ, ಹೃದಯರೋಗ, ಕ್ಯಾನ್ಸರ್ ಮುಂತಾದ ದೈಹಿಕ ಕಾಯಿಲೆಗಳನ್ನು ಮರೆವು, ಒತ್ತಡ, ಕಲಿಕಾ ಸಮಸ್ಯೆ ಮುಂತಾದ ಮಾನಸಿಕ ಕಾಯಿಲೆಗಳನ್ನು ಔಷಧವಿಲ್ಲದೆ ಹೇಗೆ ನಿವಾರಿಸಬಹುದು, ತಡೆಗಟ್ಟ ಬಹುದು, ಆದರ್ಶ ಸಂಪೂರ್ಣ ಆಹಾರ ಮಾರ್ಗ ಎಂಥದ್ದಾಗಿರಬೇಕು ಹೀಗೆ ಹತ್ತು ಹಲವಾರು ಇಂದಿಗೆ ಅತ್ಯಂತ ಪ್ರಸ್ತುತವಾದ ಅಂಶಗಳನ್ನು ಕುರಿತು ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ಇಲ್ಲಿನ ಅನೇಕ ವಿಚಾರಗಳು ಆಹಾರ ಕುರಿತ ನಮ್ಮ ತಪ್ಪು ತಿಳಿವಳಿಕೆ, ನಂಬಿಕೆಗಳನ್ನು ಒರೆಗಲ್ಲಿಗೆ ಹಚ್ಚುತ್ತವೆ. ದಿಗ್ಧಮೆ ಮೂಡಿಸುತ್ತವೆ. ಉತ್ತಮ ಆಹಾರಶೈಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂಬುದೇ ಈ ಕೃತಿಯ ಶಕ್ತಿ.
ಪೌಷ್ಠಿಕತೆಯ ಬಗ್ಗೆ ಬಹಳ ಹಿಂದಿನಿಂದಲೂ ಆಸಕ್ತಿ ಇದ್ದರೂ, ಇತ್ತೀಚಿನ ದಿನಗಳಲ್ಲಿ ಸಮತೋಲನ ಆಹಾರಕ್ರಮ ಮತ್ತು ಆರೋಗ್ಯಕರ ಜೀವನ ಶೈಲಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಧಾನ್ಯತೆ ಮತ್ತು ವಿಶೇಷತೆಯನ್ನು ನೀಡಲಾಗಿದೆ.. ಇದು ಒಂದು ಆರೋಗ್ಯಕರ ಬೆಳವಣಿಗೆಯೆಂದೆ ಹೇಳಬಹುದು.
ವಿವಿಧ ಬಗೆಯ ಅಕ್ಕಿಯಿಂದ ಮಾಡಲ್ಪಟ್ಟ ಖಾದ್ಯ ಮತ್ತು ರಾಯತಗಳನ್ನು ಮಾಡುವ ಸರಳ ವಿಧಾನದೊಂದಿಗೆ, ಬಳಸಿದ ಪದಾರ್ಥಗಳ ಪೌಷ್ಟಿಕತೆಯ ಕಿರುಪರಿಚಯವನ್ನು ಶ್ರೀಮತಿ ಪ್ರತಿಭಾ ಕೃಷ್ಣಮೂರ್ತಿಯವರು ಈ ಹೊತ್ತಗೆಯಲ್ಲಿ ತಿಳಿಸಿದ್ದಾರೆ. ಇದನ್ನು ಅನುಸರಿಸಿ ಅಡುಗೆಯ ರುಚಿಯೊಂದಿಗೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವಿರೆಂದು ಆಶಿಸುತ್ತೇವೆ.




