ಓಶೊ | ಕನ್ನಡಕ್ಕೆ: ಡಾ. ಟಿ.ಎನ್. ವಾಸುದೇವಮೂರ್ತಿ
Publisher: ವಸಂತ ಪ್ರಕಾಶನ
Regular price
Rs. 260.00
Regular price
Sale price
Rs. 260.00
Unit price
per
Shipping calculated at checkout.
Couldn't load pickup availability
ಹೂವನ್ನು ಸಂಸ್ಕರಿಸಿ, ಸೋಸಿ ಅತ್ತರನ್ನು ಹೊರ ತೆಗೆವಂತೆ ಶಂಕರ ರಾಮಾನುಜ ಮತ್ತು ಮಧ್ವರು ಉಪನಿಷತ್ತುಗಳಿಂದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ಸಿದ್ಧಾಂತಗಳನ್ನು ಹೊರ ತೆಗೆದರು. ಅಧ್ಯಾತ್ಮ ಉಪನಿಷತ್ತಾದರೂ ಅತ್ತರನ್ನು ಉತ್ಪಾದಿಸುವ ಈ ಸಿದ್ಧಾಂತಿಗಳ ಕಸುಬಿಗೆ ಬಳಕೆಯಾಗದೆ ನಿರ್ಮಲವಾಗಿ ಉಳಿದಿರುವ ಒಂದು ಗಗನ ಕುಸುಮವಾಗಿದೆ, ಈವರೆಗೆ ಯಾವುದೇ ವ್ಯಾಖ್ಯಾನದ ಸೂತಕಕ್ಕೆ ಒಳಗಾಗದ ಅಲೌಕಿಕ ಕಾವ್ಯವಾಗಿದೆ. ಓಶೋರ ಈ ಕೃತಿ ಯಾವುದೇ ಸಿದ್ಧಾಂತದ ಪ್ರತಿಪಾದನೆಯಲ್ಲ, ಹೂವಿನಿಂದ ಭಗವಂತನ ಪಾದಗಳಿಗೆ ಪೂಜೆ ಸಲ್ಲುತ್ತದೆ ಸರಿ, ಆದರೆ ಪರಮಾತ್ಮನ ಪೂಜೆಗೆ ಒದಗಿ ಬರುವ ಕೋಮಲವಾದ ಹೂವಿಗೂ ಪೂಜೆ ಸಲ್ಲುವುದು ಬೇಡವೇ? ಈ ಕೃತಿ ಅಧ್ಯಾತ್ಮ ಉಪನಿಷತ್ತಿಗೆ ಓಶೋ ತಮ್ಮ ನುಡಿಗಳಿಂದಲೇ ಸಮರ್ಪಿಸಿರುವ ಒಂದು ಉಪಾಸನೆಯಾಗಿದೆ.
ವಸಂತ ಪ್ರಕಾಶನ
