Skip to product information
1 of 2

Hindi: Acharya Archana Pandey, Kannada: Dr. Suryakanta S. Sujyat

ಆಧುನಿಕ ಬೋಧಿಸತ್ವ ಅನಾಗರಿಕ ಧರ್ಮಪಾಲ

ಆಧುನಿಕ ಬೋಧಿಸತ್ವ ಅನಾಗರಿಕ ಧರ್ಮಪಾಲ

Publisher - ಸಪ್ನ ಬುಕ್ ಹೌಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 113

Type - Paperback

 

ಡಾ. ಸೂರ್ಯಕಾಂತ ಎಸ್. ಸುಜ್ಯಾತ್

ಡಾ. ಸೂರ್ಯಕಾಂತ ಎಸ್. ಸುಜ್ಯಾತ್ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಪಿಲ್., ಪಿಹೆಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಕಳೆದ ಇಪ್ಪತ್ಮೂರು ವರ್ಷಗಳಿಂದಲೂ ಕಲಬುರಗಿಯಲ್ಲಿಯ ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಾಪನದ ಜೊತೆಯಲ್ಲಿ ಸಮಸಮಾಜದ ಕನಸನ್ನು ಸಾಕಾರಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬುದ್ಧ, ಬಸವ, ಕಬೀರ, ಪುಲೆ, ಗಾಡಗೆ ಮಹಾರಾಜ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರಭಾವಕ್ಕೊಳಗಾಗಿ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಮಹಾತ್ಮಾ ಜ್ಯೋತಿಬಾ ಫುಲೆ ಅವರ 'ತೃತೀಯ ರತ್ನ' (ಮರಾಠಿ ನಾಟಕ), ಅವರದೇ ಆದ 'ಗುಲಾಮಗಿರಿ' (ಹಿಂದಿ) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಭೀಮಾಕೋರೆಗಾಂವ ವಿಜಯಸ್ತಂಭ' (ಮರಾಠಿ ಮೂಲ), 'ಕ್ರಾಂತಿಕಾರಿ ಸಮಾಜ ಪರಿವರ್ತಕ ಸಂತ ಗಾಡಗೆ ಮಹಾರಾಜ' (ಹಿಂದೀ ಮೂಲ), ದೀಕ್ಷೆ (ಹಿಂದಿ ಮೂಲ) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಂತೆಯೇ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿ, ಕಲಬುರಗಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ, 'ಗುಲಾಮಗಿರಿ' (ಉತ್ತಮ ಅನುವಾದ) ಕೃತಿ ಪ್ರಶಸ್ತಿ, ಭೀಮಾಕೋರೆಗಾಂವ ವಿಜಯಸ್ತಂಭ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ದೀಕ್ಷೆ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕ‌ರ್ ಅಕಾಡೆಮಿ (ದೆಹಲಿ) ಪ್ರಶಸ್ತಿಗಳು ಲಭಿಸಿವೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)