Dr. K. Shivaram Karanth
Publisher - ಸಪ್ನ ಬುಕ್ ಹೌಸ್
- Free Shipping
- Cash on Delivery (COD) Available
Pages -
Type -
Couldn't load pickup availability
ಸಂಚಾರ ಮಾನವನ ಅನುಭವಗಳನ್ನು ವಿಶಾಲಿಸುವ ಸಾಧನಗಳಲ್ಲೊಂದು, ಉದ್ದೇಶರಹಿತ ಸಂಚಾರದಿಂದ ಒಬ್ಬನ ಅನುಭವ ವಿಶಾಲಿಸದೆ ಹೋಗಬಹುದು. ಆದರೆ ನಾನಾ ವಿಧದ ನಾಡು, ಜನಗಳ ಸಂಪರ್ಕಗಳು ಸಾಮಾನ್ಯವಾಗಿ ನಮ್ಮ ಜೀವನಕ್ಕೆ ಹೆಚ್ಚಿನ ಕಳೆಯನ್ನು ಕೊಡುತ್ತವೆ. ಭರತ ಖಂಡವು ವಿಶಾಲವಾದ ದೇಶ, ಪ್ರವಾಸಿಯಾದವನಿಗೆ ನೂರಾರು ವಿಧದ ಸೊಗಸುಗಳನ್ನು ಉಣಿಸಬಹುದಾದ ನಾಡು. ಅದರಲ್ಲಿಯೂ ಇಲ್ಲಿ ನಿಸರ್ಗ ಮತ್ತು ವಾಸ್ತು ಕೃತಿಗಳ ಸೊಬಗುಗಳನ್ನು ನೋಡಲು ಬಯಸುವವನಿಗೆ ಇನ್ನಿಲ್ಲದಂಥ ಅವಕಾಶವಿದೆ.
ನಾನು ಮಾಡಿದ ಸಂಚಾರ ಇದೊಂದೇ ಅಲ್ಲ, ಇದು ಕೊನೆಯದೂ ಅಲ್ಲ. ಆದರೆ ನನ್ನ ಅನುಭವಗಳನ್ನು ಒಂದೇ ಕಡೆ ಕೊಡುವ ಪ್ರಯತ್ನ ಮಾಡಿದ್ದು ಇದು ಮೊದಲು, ನಮ್ಮಲ್ಲಿ ಪ್ರವಾಸಲೇಖನಗಳು (Travelogue) ಕಡಿಮೆ. ಅಂಥ ಒಂದು ಬರಹದ ಪ್ರಯತ್ನ ಇಲ್ಲಿ ಮಾಡಿದ್ದೇನೆ.
ಈ ನಮ್ಮ ಅಬು-ಬರಾಮ ಪ್ರವಾಸಗಳು ಸುಖಕರವಾಗುವಂತೆ ಅಲ್ಲಲ್ಲಿ ನಮ್ಮನ್ನು ಸ್ವಾಗತಿಸಿ ಸಂತೋಷ ಕೊಟ್ಟ ನನ್ನ ಮಿತ್ರರಿಗೂ, ಪ್ರವಾಸದಲ್ಲಿ ಜತೆಗಾರನಾಗಿ ನನ್ನ ಹಾಸ್ಯಕ್ಕೆ ತುತ್ತಾಗಿ, ಅದರ ಸವಿಯನ್ನು ಹೆಚ್ಚಿಸಿದ ಶ್ರೀಪತಿಗೂ ನಾನು ಋಣಿ.
ಇತಿ,
ಶಿವರಾಮ ಕಾರಂತ
ಪ್ರಕಾಶಕರು - ಸಪ್ನ ಬುಕ್ ಹೌಸ್
