Narretive : Bannanje Govindacharya, Writing : Veena Bannanje
ಆತ್ಮನಿವೇದನೆ
ಆತ್ಮನಿವೇದನೆ
Publisher - ಸಾಹಿತ್ಯ ಭಂಡಾರ
- Free Shipping Above ₹250
- Cash on Delivery (COD) Available
Pages - 312
Type - Hardcover
ಹಿಂದು ಧರ್ಮ ಮತ್ತು ಮಧ್ವ ಮತ ಎಂಬ ಆವೇಶ ನನ್ನಲ್ಲಿಲ್ಲ. ಮುಂಚೆ ನನ್ನನ್ನು ಚರ್ಚ್ ಗೆ ಕರೆಯುತ್ತಿದ್ದರು. ಪುತ್ತೂರಿನವರು ಮಹಮ್ಮದ್ ಜಯಂತಿಗೆ ಕರೆದಿದ್ದರು. ಎಲ್ಲ ಕಡೆಗೂ ಹೋಗುತ್ತಿದ್ದೆ...
...ನಾನು ಕನ್ನಡ ಸಂಸ್ಕೃತ ಎರಡನ್ನು ಏಕಕಾಲಕ್ಕೆ ಓದಿದೆ. ಪ್ರಾಚೀನ ಕನ್ನಡ ಕಾವ್ಯಗಳಾದ ಪಂಪ, ರನ್ನ, ಲಕ್ಷ್ಮೀಶ, ಮುದ್ದಣ ಇವು ಯಾವುದನ್ನು ಯಾರಿಂದಲೂ ಪಾಠ ಕೇಳಿದ್ದಲ್ಲ. ನಾನೇ ಸ್ವತಃ ಓದಿದ್ದು.
...ಹೀಗೆ ಸ್ವಾಧ್ಯಾಯ ಆರಂಭಿಸಿದಾಗ ಶಂಕರರನ್ನು ರಾಮಾನುಜರನ್ನು ಓದತೊಡಗಿದೆ. ಮಧ್ವರನ್ನೂ ಓದಿದೆ. ನನಗೆ ಓದಿ ತಿಳಿದು ಇಷ್ಟವಾಗಬೇಕು. ಕೇವಲ ನಾನು ಯಾವ ಮತದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಇಷ್ಟವಾಗಬಾರದು...
...ನಾನು ಅಧ್ಯಯನದಲ್ಲಿ ಬೆಳೆಯುತ್ತ ಬೆಳೆಯುತ್ತಾ ಉಪನಿಷತ್ತು ಮತ್ತು ಮಧ್ವಾಚಾರ್ಯರ ವಿಚಾರಧಾರೆಯ ವ್ಯತ್ಯಾಸ ಹೋಯಿತು. ಉಪನಿಷತ್ತನ್ನು ಹೆಚ್ಚು ಹೆಚ್ಚು ಓದಿದ ಹಾಗೆ ಮಧ್ವಾಚಾರ್ಯರು ಹತ್ತಿರವಾದರು....
...ದಾರ್ಶನಿಕ ದೃಷ್ಟಿಕೋನ ಏಕಮುಖವಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ. ಎಲ್ಲಾ ದೃಷ್ಟಿಕೋನವನ್ನು ಗೌರವಿಸಿದ ದೇಶ ಇದೊಂದೇ. ಯಾವುದು ನಿಜವಾದ ದರ್ಶನ ಎಂಬುದು ಅವರವರಿಗೆ ತೋಚಿದ್ದು. ಆ ವಿಷಯದಲ್ಲಿ ನಾನು ಮೌನಿ, ಏಕೆಂದರೆ ನಾನು ದಾರ್ಶನಿಕನಲ್ಲ. ನಾನು ಅನ್ವೇಷಕ, ಸಾಯುವ ತನಕ ಅನ್ವೇಷಣೆ ಮಾಡುತ್ತಿರುತ್ತೇನೆ. ನಾನು ತಿಳಿದದ್ದೇ ಸತ್ಯ ಎಂದು ಹೇಳುವುದಿಲ್ಲ. ನನಗೆ ಕಂಡದ್ದು ಹೀಗೆ, ಅದು ಸತ್ಯವೂ ಇರಬಹುದು ಸುಳ್ಳೋ ಇರಬಹುದು...
...ನಿಮ್ಮ ನಿಮ್ಮ ಅಭಿಪ್ರಾಯ ನಿಮ್ಮ ನಿಮ್ಮ ಮಟ್ಟ ಯಾವುದೆಂದು ಹೇಳುತ್ತದೆ. ಅದೇ ರೀತಿ ಚಿಂತನೆ ಮಾಡುತ್ತೀರಿ. ನನ್ನ ಮಟ್ಟಕ್ಕೆ ಅದು ಸಂಬಂಧವೇ ಇಲ್ಲ. ನನ್ನ ಮಟ್ಟ ಅದಕ್ಕಿಂತ ಮೇಲಿರಬಹುದು, ಕೆಳಗಿರಬಹುದು. ನನ್ನ ಮಟ್ಟ ನನ್ನದು ಅಷ್ಟೆ...
-ಆತ್ಮನಿವೇದನೆಯ ಒಳಪುಟಗಳಿಂದ...
Share
Subscribe to our emails
Subscribe to our mailing list for insider news, product launches, and more.