ನೀಲತ್ತಹಳ್ಳಿ ಕಸ್ತೂರಿ
Publisher: ಅಭಿನವ ಪ್ರಕಾಶನ
Regular price
Rs. 75.00
Regular price
Sale price
Rs. 75.00
Unit price
per
Shipping calculated at checkout.
Couldn't load pickup availability
ನೀಲತ್ತಹಳ್ಳಿ ಕಸ್ತೂರಿ ಅವರು ರಾಜರತ್ನಂ ಸಂಗಡಿಗರಾಗಿ ಡಿಂಗರಿಗರಾಗಿ ಅವರ ಜಾಡಲ್ಲೇ ಅಡಿ ಇರಿಸಿ, ನೆರೆಯಲ್ಲೇ ನಿಂತು ನಲಿದವರು. ಅವರ ಹೃದಯ ಗ್ರಂಥವನ್ನು ಪುಟಪುಟ ಪಂಕ್ತಿ ಪಂಕ್ತಿ, ಪರಿಸಿ ಪುಟಗೊಂಡವರು. ಅವರ ಕವಿತನ, ಕಲಿತನ, ಕಣ್ಣೀರು, ಪನ್ನೀರು, ಪುಟ್ಟತನ, ದಿಟ್ಟತನಗಳನ್ನು ಹತ್ತಿರದಿಂದ ಅನುಭವಿಸಿ ಅರಿತವರು. ಆ ಆರದ ದೀಪದಿಂದ ತಾವೂ ಬಾಳನ್ನು ಬೆಳಗಿಸಿ, ದೀಪಾರಾಧನಾ ರೂಪವಾಗಿ ಈ ಸುಂದರ ಜ್ಯೋತಿಯನ್ನು ರಚಿಸಿದ್ದಾರೆ. ತಮ್ಮ ಬರವಣಿಗೆಯ ಕಾಯಕಕ್ಕೆ ಅವರು ಅಳವಡಿಸಿಕೊಂಡಿರುವುದು ಲೇಖನಿಯನ್ನಲ್ಲ, ಚಿತ್ರಕಾರನ ಕುಂಚವನ್ನು. ಜಿ.ಪಿ. ಅವರ ನಡೆನುಡಿಗಳ ಪದಪದದಲ್ಲೂ ತೊಳಗುವ ರತ್ನ ಪ್ರಭಾವಳಿಯನ್ನು ನೀಲತ್ತಹಳ್ಳಿ ಕಸ್ತೂರಿಯವರು ತಮ್ಮದೇ ಆಕರ್ಷಕ ಆದರಣೀಯ, ಅನಾಡಂಬರ ಶೈಲಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಇದು ಗುರುತರ ಕೈಂಕರ್ಯ, ಚಿರಕಾಲ ಕನ್ನಡ ಜನಮನವನ್ನು ಅರಳಿಸುವ ಉತ್ತಮ ಗದ್ಯಕಾವ್ಯ.
-ನೀ. ಕಸ್ತೂರಿಯ ಕೃತಿಗೆ ನಾ. ಕಸ್ತೂರಿಯ ಮುನ್ನುಡಿಯಿಂದ
-ನೀ. ಕಸ್ತೂರಿಯ ಕೃತಿಗೆ ನಾ. ಕಸ್ತೂರಿಯ ಮುನ್ನುಡಿಯಿಂದ
