Skip to product information
1 of 1

Dr. Mahabaleshwar Rao

ಆಗೋಲ್ಲ ಎನ್ನಬೇಡಿ, ಆಗುತ್ತೆ ಎನ್ನಿ!

ಆಗೋಲ್ಲ ಎನ್ನಬೇಡಿ, ಆಗುತ್ತೆ ಎನ್ನಿ!

Publisher - ನವಕರ್ನಾಟಕ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

“ನಾನು ಅಸಹಾಯಕ, ನಿಷ್ಟ್ರಯೋಜಕ ಮತ್ತು ಇನ್ನು ನನಗಾರು ಗತಿ' ಎಂಬ ಸಕಾರಾತ್ಮಕ ಭಾವನೆಗಳಿಗೆ ದಾಸರಾಗಿ ಆಧುನಿಕ ಯುಗದ ಹದಿಹರೆಯದ ಹುಡುಗ-ಹುಡುಗಿಯರಲ್ಲಿ ಹಲವರು ಸೋಲಿನಿಂದ ಕಂಗೆಟ್ಟು ಪ್ರಯತ್ನಗಳನ್ನು ಕೈಚೆಲ್ಲಿ ಆತ್ಮಹತ್ಯೆಗೆ ಮನಮಾಡುವುದು ಅಥವಾ ಮನೆಬಿಟ್ಟು ಓಡಿಹೋಗುವುದು ಈಗ ಸಾರ್ವಜನಿಕ ಚಿಂತೆಯ ವಿಷಯ. ಬಾಳಿ ಬದುಕಿ ಬೆಳಗಬೇಕಾದ ಎಳೆಯ ಕುಡಿಗಳು ಜೀವನಾಸಕ್ತಿಯನ್ನೇ ಕಳೆದುಕೊಂಡು ಮುದುಡುತ್ತಿರುವುದು ಒಂದು ಮಹಾ ದುರಂತ

'ಮನಸಿದ್ದರೆ ಮಾರ್ಗವಿದೆ', 'ಸಾಧಿಸಿದರೆ ಸಬಳ ನುಂಗಬಹುದು', 'ಇಲ್ಲಿ ಯಾವುದೂ ಅಸಾಧ್ಯವಲ್ಲ', 'ನಾವು ಗೆದ್ದೇ ಗೆಲ್ಲುವೆವು', 'ಈಸಬೇಕು ಇದ್ದು ಜೈಸಬೇಕು' ಮೊದಲಾದ ರೂಢಿಯ ಮಾತುಗಳು ಬದುಕನ್ನು ಬೆಳಗುವ ತಾರೆಗಳು. ಇಂಥ ಸೂಕ್ತಿಗಳಲ್ಲಿ 'ಧನಾತ್ಮಕ ಮನೋವಿಜ್ಞಾನ'ದ ಸಾರ ಹುದುಗಿದೆ. ಸದ್ಯದ ಹಾಗೂ ನಾಳಿನ ಬದುಕಿಗೆ ಆಧಾರವಾಗುವ ಶಕ್ತಿ ಧನಾತ್ಮಕ ಮನೋವಿಜ್ಞಾನಕ್ಕೆ ಇದೆ.

ಮನೋವಿಜ್ಞಾನ ಕ್ಷೇತ್ರದ ತೀರ ಈಚಿನ ಕುಡಿಯಾಗಿರುವ 'ಪಾಸಿಟಿವ್' ಮನೋವಿಜ್ಞಾನದ ಮೂಲ ಆಶಯಗಳನ್ನು ನಿಜಜೀವನದ ಸ್ವಾರಸ್ಯಕರ ದೃಷ್ಟಾಂತಗಳೊಂದಿಗೆ ಡಾ|| ಮಹಾಬಲೇಶ್ವರ ರಾವ್ ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಸಿದ್ಧಾಂತಗಳ ಪರಿಭಾಷೆಗಳ ಕಗ್ಗಾಡಿನಲ್ಲಿ ಓದುಗರನ್ನು ಕಣ್ಣು ಕಟ್ಟಿ ಬಿಡದೆ ತಿಳಿಯದ ಅರ್ಥಗಳ ದೀಪಸಾಲುಗಳ ಮೂಲಕ ದಾರಿ ಸಾಗುವ ಸಾರ್ಥಕ ಪ್ರಯತ್ನ ಇದರಲ್ಲಿದೆ. ಡಾ|| ರಾವ್ ಅವರ 'ಶಿಕ್ಷಣದಲ್ಲಿ ಮನೋವಿಜ್ಞಾನ', 'ಮನದ ಮಾಮರದ ಕೋಗಿಲೆ', 'ಮೆಕಾಲೆಯ ಮಕ್ಕಳು', 'ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ', 'ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬೋಧನೆ', 'ಗುರಿಯತ್ತ ಹರಿಯಲಿ ಚಿತ್ತ', 'ಬಾನಾಡಿಗೆ ಬಂಧನವೇ?', 'ಬುದ್ಧಿಶಕ್ತಿ 'ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ' ಮೊದಲಾದ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)