English : Sena Desai Gopal, Kannada : Dr. Balasaheba Lokapura
ಆ 86ನೇ ಹಳ್ಳಿ
ಆ 86ನೇ ಹಳ್ಳಿ
Publisher -
- Free Shipping Above ₹250
- Cash on Delivery (COD) Available
Pages - 304
Type - Paperback
'ಆ 86ನೇ ಹಳ್ಳಿ' ಕೃತಿಯನ್ನು ಪಥನಮುಖ ಕಾದಂಬರಿ ಎಂದು ಕರೆಯಬಹುದು. ಊರು ಮುಳುಗುತ್ತಿದೆ. ಜನ ದಿಕ್ಕೇಡಿಗಳಾಗುತ್ತಿದ್ದಾರೆ. ಅವರು ಕಟ್ಟಿಕೊಂಡ ಭೌತಿಕ ಬದುಕು ಪತನಗೊಳ್ಳುತ್ತಿದೆ. ಮನೆ ಮಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೋರಾಟದಲ್ಲಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.
ಮಹಾಪೂರದಲ್ಲಿ ಅಮಾಯಕರು ಹೊಳೆ ಪಾಲಾಗುತ್ತಿದ್ದಾರೆ. ಹಳ್ಳಿಯ ಹೆಮ್ಮೆಯಾದ ವಾಡೆಯಲ್ಲಿ ನೀರು ನುಗ್ಗಿ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಇದೆಲ್ಲವೂ ಪತನವೇ. ಅವರ ಗೋಪುರ ಮಾದರಿ ಸಾಮಾಜಿಕ ಸ್ಥರ ಬಿದ್ದು ಹೋಗುತ್ತಿದೆ. ಇಲ್ಲಿ ರಾಜ ನಾಯಕ ಎನ್ನುವ ದೊಡ್ಡ ಮನೆತನದ ಸಭ್ಯನ ಒಂದು ಸಣ್ಣ ಪ್ರಮಾದದಿಂದ ಉಂಟಾಗುವ ಜಾರುವಿಕೆ ಅವನ ಸಾವಿನಿಂದ ಅಂತ್ಯವಾಗುತ್ತದೆ.
ಇನ್ನೊಂದು ಬಗೆಯಲ್ಲಿ ಈ ಕಾದಂಬರಿಯು ಹೊಸ ಮೌಲ್ಯಗಳಿಂದ ಆಶಾವಾದವನ್ನು ಹುಟ್ಟಿಸುತ್ತದೆ. ದಯಾ ಎಂಬ ಧೀರ ಮಹಿಳೆ ಜಾತ್ಯತೀತ ಮನೋಭಾವದ ಮಹಿಳೆ ತನ್ನ ಗಂಡನಿಂದ ಸೂಳೆಯ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಗುವನ್ನು ತನ್ನ ಮಗಳೆಂದು ಅಪ್ಪಿಕೊಳ್ಳುವುದು ಮತ್ತು ತನ್ನ ಮಕ್ಕಳಾದ ರೋಹನ – ಜೈ ಅವರೊಂದಿಗೆ ಅವಳನ್ನು ಕೂಡಾ ಸರಿ ಸಮವಾಗಿ ಪ್ರೀತಿಸುವ ಮಹಾತಾಯಿಯ ಆದರ್ಶ ಓದುಗರ ಮನ ಗೆಲ್ಲುತ್ತದೆ. ಸಮರ ಚಂದರನಂತಹ ಸಾಧಾರಣ ಸರಕಾರಿ ನೌಕರ ತನ್ನ ಹೋರಾಟ ಮತ್ತು ಜನಮುಖಿ ಧೋರಣೆಯಿಂದ ಶಾಸಕನಾಗಿ ಆಯ್ಕೆಯಾಗುವುದು ಕೂಡಾ ಆಶಾದಾಯಕವಾಗಿದೆ. ಇನ್ನೊಂದು ಬಗೆಯಲ್ಲಿ ಕಾದಂಬರಿಯ ಕೊನೆಯಲ್ಲಿ ಉಷಾಳಿಗೆ ಮಗುವಾಗುವದು ಬದುಕಿನ ಆಶಾವಾದವನ್ನು ಹೆಚ್ಚಿಸುತ್ತದೆ.
-ಡಾ. ಬಾಳಾಸಾಹೇಬ ಲೋಕಾಪುರ
Share
Subscribe to our emails
Subscribe to our mailing list for insider news, product launches, and more.