Skip to product information
1 of 2

Sahana Vijayakumar

ಮಾಗಧ

ಮಾಗಧ

Publisher - ಸಾಹಿತ್ಯ ಭಂಡಾರ

Regular price Rs. 915.00
Regular price Rs. 915.00 Sale price Rs. 915.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 772

Type - Hardcover

ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳಿಗೆ ಶತಮಾನಕ್ಕೂ ಮಿಗಿಲಾದ ಇತಿಹಾಸವಿದೆ. ಆದರೆ ನವೋದಯದ ಬಳಿಕ ನವ್ಯ, ಬಂಡಾಯ ಮುಂತಾದ ಚಳವಳಿಗಳ ಯುಗದಲ್ಲಿ ಈ ಪ್ರಕಾರವು ಲೇಖಕರನ್ನು ಹೆಚ್ಚು ಸೆಳೆದಂತೆ ತೋರದು. ಈಚಿನ ಇಪ್ಪತ್ತು-ಇಪ್ಪತ್ತೈದು ವರ್ಷಗಳಲ್ಲಿ ಡಾ| ಎಸ್.ಎಲ್. ಭೈರಪ್ಪನವರ ಸಾರ್ಥ, ಆವರಣ ಮುಂತಾದ ಕೃತಿಗಳ ಬಳಿಕ - ಐತಿಹಾಸಿಕ ಕಾದಂಬರಿಗಳ ರಚನೆ ಮತ್ತೆ ಮುನ್ನೆಲೆಗೆ ಬಂದಂತೆ ತೋರುತ್ತದೆ. ಈ ಹಂತದಲ್ಲಿ ಅಧ್ಯಯನ, ಕ್ಷೇತ್ರಕಾರ್ಯ, ವಸ್ತುನಿಷ್ಠೆ, ಚಿತ್ತವೃತ್ತಿಗಳ ಸಂಕೀರ್ಣತೆ, ಕಪ್ಪು ಬಿಳುಪಲ್ಲದ ಪಾತ್ರಗಳ ನಿರ್ಮಾಣ, ಬಿಗಿಯಾದರೂ ಭಾವುಕವಾಗದ ಭಾಷೆ ಮುಂತಾದ ಲಕ್ಷಣಗಳುಳ್ಳ ಹಲಕೆಲವು ಕಾದಂಬರಿಗಳು ಗಮನಾರ್ಹವಾಗಿ ಹೊರಬಂದಿವೆ.

ಈ ಸಾಲಿಗೆ ಶ್ರೀಮತಿ ಸಹನಾ ವಿಜಯಕುಮಾರ್ ಅವರ 'ಮಾಗಧ'ವೂ ಸೇರುತ್ತದೆ. ಇದು ಪ್ರಿಯದರ್ಶಿ ಅಶೋಕನ ಬಾಳಿನ ನಿರ್ಣಾಯಕ ಘಟ್ಟವನ್ನು ಆಧರಿಸಿ ನಾಲ್ಕು ನೆಲೆಗಳಲ್ಲಿ ರೂಪುಗೊಂಡಿದೆ. ಮುಖ್ಯವಾಗಿ ಅಶೋಕನ ಧರ್ಮಶಾಸನಗಳನ್ನು ಆಧರಿಸಿಯೇ ಇದು ಸಾಗುವ ಕಾರಣ ಅಧಿಕೃತತೆಗೆ ಅವಧಾರಣೆ ಹಾಕಿದೆ. ಅಲ್ಲದೆ ಅರ್ಥಶಾಸ್ತ್ರದ ಅರ್ಥಪೂರ್ಣ ಅವಲಂಬನವೂ ಇದಕ್ಕಿದೆ. ಬರೀ ರಾಜಕೀಯವಾಗಲಿ. ಮತಮಥನವಾಗಲಿ 'ಮಾಗಧ'ದ ತಿರುಳನ್ನು ಆಕ್ರಮಿಸಿಲ್ಲ. ಹಾಗೆಂದು ಕೇವಲ ಸಾಮಾಜಿಕ ಕಾದಂಬರಿಗಳಂತೆ ಮಾನುಷ ಭಾವಗಳ ಮೇಲಾಟಕ್ಕೂ ಇದು ಸೀಮಿತವಾಗಿಲ್ಲ. ಇಲ್ಲಿರುವುದು ಭಾರತೀಯ ಇತಿಹಾಸದ ಬಹುಚರ್ಚಿತ ಘಟ್ಟವೊಂದರ, ಬಹುಮಾನಿತ ಸಮಾಜನೊಬ್ಬನ ಒಳಹೊರಗುಗಳನ್ನು ಹತ್ತಾರು ಕೋಣಗಳಿಂದ ಕಂಡು, ಕಾಣಿಸುವ ಕಲಾತ್ಮಕ ಕಥನ, ತಾತ್ವಿಕ ಶೋಧನ.

ಸುದೀರ್ಘವಾದ ಈ ಕಾದಂಬರಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುವ ಹಲವು ಪಾತ್ರಗಳು ಸಹನಾ ಅವರದೇ ಸೃಷ್ಟಿ. ಈ ಮೂಲಕ ಅವರ ಸತ್ಯವಿಮುಖವಲ್ಲದ ಸೌಂದರ್ಯಸಿದ್ದಿ ಮೆಚ್ಚುವಂತಿದೆ. 'ಮಾಗಧ' ಕೃತಿಗೆ ಪ್ರಬುದ್ಧ ಓದುಗರು ದಕ್ಕಲೆಂದೂ ಇಂಥ ಮತ್ತೂ ಹಲವು ಕೃತಿಗಳನ್ನು ಸಹನಾ'ಅವರು ಬರೆಯಲೆಂದೂ ನಾನು ಆಶಿಸುತ್ತೇನೆ. ಈಗಾಗಲೇ ಮೂರು ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪರಿಚಿತರಾದ ಇವರು 'ಮಾಗಧ'ದ ಮೂಲಕ ಓದುಗರಿಗೆ ಮತ್ತಷ್ಟು ಹತ್ತಿರವಾಗಲಿ; ಅಕ್ಷರಜಗತ್ತಿನಲ್ಲಿ ಮತ್ತಷ್ಟು ಎತ್ತರ-ಬಿತ್ತರಗಳನ್ನು ಎಟುಕಿಸಿಕೊಳ್ಳಲಿ,

-ಶತಾವಧಾನಿ ಡಾ|| ಆರ್. ಗಣೇಶ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)