Skip to product information
1 of 2

Pro. L. S. Sheshagiri Rao

ಭಗವದ್ಗೀತಾ

ಭಗವದ್ಗೀತಾ

Publisher - ಶ್ರೀನಿಧಿ ಪ್ರಕಾಶನ

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 864

Type - Hardcover

"ಸಂಶಯಗಳು ಬೆನ್ನು ಹತ್ತಿದಾಗ, ನಿರಾಶೆಗಳ ಧಾರೆ ಎದುರಾದಾಗ, ದಿಗಂತದಲ್ಲಿ ಇನ್ನಾವ ಆಶಾಕಿರಣಗಳು ಮೂಡಿ ಬಾರದಿದ್ದಾಗ, ನಾನು ಭಗವದ್ಗೀತೆಯ ಮೊರೆ ಹೋಗುತ್ತೇನೆ. ಅದು ನನಗೆ ಸಾಂತ್ವನ ನೀಡಿ, ಸಹಿಸಲಾಗದ ದುಃಖ ದುಮ್ಮಾನಗಳ ನಡುವೆಯೂ ಹರ್ಷ ಚಿತ್ತನಾಗುವಂತೆ ಮಾಡುತ್ತದೆ. ಗೀತಾ ಅಧ್ಯಯನ ಮಾಡುವವರಿಗೆ ಅದರಿಂದ ದಿನನಿತ್ಯ ನವೋಲ್ಲಾಸ ಮತ್ತು ನವ ನವ ಅರ್ಥಗಳು ಹೊರಹೊಮ್ಮುತ್ತವೆ."

-ಗಾಂಧೀಜಿ

ಭಗವದ್ಗೀತಾ ಯಥಾರೂಪವು ಪ್ರಪಂಚದಲ್ಲಿಯೇ ಅತ್ಯಧಿಕವಾಗಿ ಮಾರಾಟವಾಗುವ ಭಗವದ್ಗೀತೆಯ ಮುದ್ರಿತ ಗ್ರಂಥ. ಅದು ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್, ಚೈನೀಸ್, ಅರೇಬಿಕ್, ಹೀಬ್ರೂ ಮತ್ತು ಎಲ್ಲ ಭಾರತೀಯ ಭಾಷೆಗಳನ್ನು ಒಳಗೊಂಡ ನಲವತ್ತಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅನುವಾದಿತವಾಗಿದೆ. ಎಲ್ಲ ಭಾಷೆಗಳೂ ಸೇರಿ ಎರಡು ಕೋಟಿ ಪ್ರತಿಗಳಿಗಿಂತಲೂ ಹೆಚ್ಚು ಮಾರಾಟವಾಗಿದೆ.

ಪ್ರತಿಯೊಂದು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಮತ್ತು ಗ್ರಂಥಾಲಯಗಳಲ್ಲಿ ಈ ಪುಸ್ತಕವಿದೆ. ಪಶ್ಚಿಮದ ಅಸಂಖ್ಯ ಕಾಲೇಜುಗಳಲ್ಲಿ ಇದನ್ನು ಪಠ್ಯಪುಸ್ತಕದಂತೆ ಬಳಸಲಾಗುತ್ತಿದೆ. ತತ್ವಶಾಸ್ತ್ರ, ಮತಧರ್ಮಶಾಸ್ತ್ರ, ಇಂಡಾಲಜಿ, ಸಂಸ್ಕೃತ ಮತ್ತು ಮನಶ್ಯಾಸ್ತ್ರಗಳ ಅನೇಕ ಪ್ರಸಿದ್ದ ವಿದ್ವಾಂಸರು ಈ ಗ್ರಂಥಕ್ಕೆ ಪ್ರಶಂಸೆಯ ಹೊರೆ ಹೊರಿಸಿದ್ದಾರೆ.

ಈ ಭಗವದ್ಗೀತೆಗೆ ಅಷ್ಟೊಂದು ಪ್ರಶಂಸೆ ಏಕೆ? ಏಕೆಂದರೆ ಅದು ನಿಜವಾಗಿಯೂ ಗೀತೆಯ ಯಥಾರೂಪ, ಅನೇಕ ವ್ಯಾಖ್ಯಾನಕಾರರು ಗೀತೆಯ ವ್ಯಾಖ್ಯಾನ ಮಾಡುವಾಗ ತಮ್ಮ ಭಾವನೆಗಳನ್ನೇ ಪ್ರಕಟಿಸಿದ್ದಾರೆ. ಆದರೆ ಶ್ರೀ ಕೃಷ್ಣನ ಶುದ್ದಭಕ್ತರಾದ ಶ್ರೀಲ ಪ್ರಭುಪಾದರು ಪರಮ ಪ್ರಭುವು ಬೋಧಿಸಿದ ನೈಜ ಆಶಯದಲ್ಲಿಯೇ ಕೇವಲ ಕೃಷ್ಣನ ಮಾತುಗಳಲ್ಲೇ ನಿರೂಪಿಸಿದ್ದಾರೆ. ಮುರಿಯದ ಗುರುಶಿಷ್ಯ ಪರಂಪರಾ ಪದ್ದತಿಯನ್ನು ಅನುಸರಿಸಿ ಅವರು ಅದರ ಮೂಲರೂಪದಲ್ಲಿಯೇ, ಮೂಲಸಂದೇಶವನ್ನು ತೆರೆದು ತೋರಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)